leopard cage
ಕುತೂಹಲಕ್ಕಾಗಿ ಚಿರತೆ ಬೋನಿನೊಳಗೆ ಹೋಗಿದ್ದ ರೈತ ಮೂರು ಗಂಟೆ ಲಾಕ್
ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ರೈತರೊಬ್ಬರು ಕುತೂಹಲದಿಂದ ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿದ್ದು, ಮೂರು ಗಂಟೆ ಅದರೊಳಗೆ ಲಾಕ್ ಆಗಿದ್ದಾರೆ. ಗ್ರಾಮದ ಕಿಟ್ಟಿ ಎಂಬವರು ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನೊಳಗೆ ಹೋಗಿ ಸಿಕ್ಕಿಹಾಕಿಕೊಂಡು ಮೂರು ಗಂಟೆ ಅದರೊಳಗೆ ಪರದಾಡಿದ್ದಾರೆ. ಬಾಗಿಲು ತೆರೆಯಲು ಯತ್ನಿಸಿದರೂ ಸಾಧ್ಯವಾಗದೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದು, ಕೂಗಾಟ ಕೇಳಿ ಸ್ಥಳಕ್ಕೆ ಬಂದ ರೈತರು ಬೋನಿನೊಳಗಿಂದ ಬಿಡಿಸಿದ್ದಾರೆ. ಗ್ರಾಮದಲ್ಲಿ ಮೂರು ಹಸುಗಳನ್ನು ಚಿರತೆ ಕೊಂದು


