killer partner
ಬೆಂಗಳೂರಿನಲ್ಲಿ 26 ರ ಮಹಿಳೆ, 52 ವರ್ಷದ ಪುರುಷ ಲಿವ್ ಇನ್ ಟುಗೆದರ್: ಹೊಸ ಸ್ನೇಹಿತನೊಂದಿಗಿದ್ದ ಮಹಿಳೆಯ ಕೊಲೆಗೈದ ಪಾರ್ಟ್‌ನರ್
ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯ ಜೊತೆ 52 ವರ್ಷದ ಪುರುಷ ಸಹಜೀವನ ನಡೆಸುತ್ತಿದ್ದು, ಈ ಸಂಬಂಧವು ಮಹಿಳೆಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಪೆಟ್ರೊಲ್ ಎರಚಿ ಮಹಿಳೆಯನ್ನು ಸಂಗಾತಿಯಾಗಿದ್ದ ವ್ಯಕ್ತಿ ಬರ್ಬರವಾಗಿ ಸಾಯಿಸಿದ್ದಾನೆ. ವನಜಾಕ್ಷಿ ಕೊಲೆಯಾದ ಮಹಿಳೆ, ಕ್ಯಾಬ್ ಚಾಲಕ ವಿಠಲ ಕೊಲೆಗಾರನಾಗಿದ್ದು, ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳು, ವನಜಾಕ್ಷಿಗೆ ಮದುವೆಯಾಗಿ ಗಂಡ ಮೃತಪಟ್ಟಿದ್ದರು, ಆರೋಪಿ ವಿಠ್ಠಲನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ


