Menu

ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್​ನಲ್ಲಿ ಸ್ಫೋಟಕಗಳು ಪತ್ತೆ

ಕೇರಳದ ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್​ನಲ್ಲಿ ಸ್ಫೋಟಕಗಳು ಪತ್ತೆಯಾವೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿಯ ಲಾರಿ ಚಾಲಕ ಸೆಂಥಿಲ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಇದ್ದ ಜಿಲೆಟಿನ್ ಹಾಗೂ ಸ್ಪೋಟಕಗಳನ್ನು ಜಪ್ತಿ ಮಾಡಿದ್ದಾರೆ. ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಸರ್ವೀಸ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲಾರಿಯ ಮೇಲೆ ರಾಶಿ ಹಾಕಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆಗೆದು ಪರಿಶೀಲಿಸಿದಾಗ ಪೆಟ್ಟಿಗೆಗಳಲ್ಲಿ ಸ್ಫೋಟಕಗಳನ್ನು ತ್ರಿಶೂರ್​​ಗೆ

ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯ ಮಸೂದೆ ವಾಪಸ್‌ ಪಡೆಯಿರಿ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುವೆ. ಮಸೂದೆ ವಾಪಸ್‌ ಪಡೆಯಿರಿ ಎಂದು  ಮುಖ್ಯಮಂತ್ರಿ

ಪತ್ನಿ ಸುಪರ್ದಿಗೆ ಮಕ್ಕಳ ನೀಡಲು ಕೋರ್ಟ್‌ ಆದೇಶ: ಮಕ್ಕಳ ಸಾಯಿಸಿ ತಾಯಿ ಜೊತೆ ವ್ಯಕ್ತಿ ಆತ್ಮಹತ್ಯೆ

ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶಿಸಿದ್ದಕ್ಕೆ ವ್ಯಕ್ತಿ ಎರಡು ಮಕ್ಕಳಿಗೆ ವಿಷವುಣಿಸಿ ಸಾಯಿಸಿದ ಬಳಿಕ ತಾಯಿ ಜೊತೆ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮಗಳು ಹಿಮಾ(6), ಮಗ ಕಣ್ಣನ್‌ಗೆ(2) ವಿಷ ನೀಡಿದ ಬಳಿಕ ತಾಯಿ ಉಷಾ(65)

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಕಾಟ: ರಾಜ್ಯದಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ವ್ಯಾಪಕವಾಗಿದ್ದು, ಈ ವರ್ಷ ಸೋಂಕಿಗೆ 19 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆ ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಭಯ ಪಡುವ ಅವಶ್ಯಕತೆ ಇಲ್ಲ ಎಂದು ಕೆ.ಸಿ ಜನರಲ್ ಆಸ್ಪತ್ರೆ

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಈ ವರ್ಷ 17 ಮಂದಿ ಬಲಿ

ಕೇರಳದಲ್ಲಿ ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ನ ಹೊಸ ಪ್ರಕರಣ ವರದಿಯಾಗಿದ್ದು, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಈ ವರ್ಷ ಇಲ್ಲಿಯವರೆಗೆ ಈ ಸೋಂಕಿನಿಂದ 17 ಜನರು ಮೃತಪಟ್ಟಿದ್ದಾರೆ. ಒಟ್ಟು 67 ಜನರು ಮೆದುಳು ತಿನ್ನುವ ಅಮೀಬಾದಿಂದ

ಓಣಂ: ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

ಓಣಂ ಹಬ್ಬದ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 4 ರವರೆಗೆ ಬೆಂಗಳೂರು-ಕೇರಳ ಮಧ್ಯೆ ಕೆಎಸ್‌ಆರ್‌ಟಿಸಿಯಿಂದ 90 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ಮೈಸೂರು ರಸ್ತೆ ಮತ್ತು ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಟರ್ಮಿನಲ್‌ಗಳಿಂದ ಹೊರಡಲಿವೆ. ಹಬ್ಬದ ಮುಗಿದು

ಪಿಎಂಒ ಅಧಿಕಾರಿ ಸೋಗಿನಲ್ಲಿ INS ವಿಕ್ರಾಂತ್ ಮಾಹಿತಿ ಕೇಳಿದ್ದ ವ್ಯಕ್ತಿಯ ಬಂಧನ

ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆಯ ಐಎನ್‌ಎಸ್‌ ವಿಕ್ರಾಂತ್ ಹಡಗಿನ ಬಗ್ಗೆ ಮಾಹಿತಿ ಕೇಳಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಝಿಕೋಡ್ ಎಲ್ತೂರ್ ನಿವಾಸಿ ಮುಜೀಬ್ ರೆಹಮಾಮ್ ಬಂಧಿತ ಆರೋಪಿ. ತಾನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ

ಪಹಲ್ಗಾಮ್ ದಾಳಿಯ ಮಾಸ್ಟರ್‌ ಮೈಂಡ್‌ಗೆ ಇದ್ಯಾ ಕರ್ನಾಟಕ, ಕೇರಳ ಲಿಂಕ್?

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಎಂದು ಗುರುತಿಸಲಾಗಿರುವ ಉಗ್ರ ಶೇಖ್ ಸಜ್ಜದ್ ಗುಲ್‌/ ಸಜ್ಜದ್ ಅಹ್ಮದ್ ಶೇಖ್ ಗೆ ಕರ್ನಾಟಕ ಮತ್ತು ಕೇರಳದ ಲಿಂಕ್ ಇರುವುದು ಬಯಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್

8 ಲಕ್ಷ ಕೋಟಿ ರೂ. ಕ್ರಿಪ್ಟೋಕರೆನ್ಸಿ ವಂಚಕ ಕೇರಳದಲ್ಲಿ ಸೆರೆ

ನವದೆಹಲಿ: ಬೃಹತ್ ಪ್ರಮಾಣದ ಕ್ರಿಪ್ಟೋಕರೆನ್ಸಿ ವಂಚನೆಗಾಗಿ ಅಮೆರಿಕದಲ್ಲಿ ಬೇಕಾಗಿದ್ದ ಲಿಥುವೇನಿಯಾದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ’ಗ್ಯಾರಂಟೆಕ್ಸ್’ ಎಂಬ

ಗೆಳತಿ ಸೇರಿ ಕುಟುಂಬದ ಐವರನ್ನು ಕೊಲೆಗೈದು ವಿಷ ಸೇವಿಸಿದ ಯುವಕ

ಕೇರಳದ ತಿರುವನಂತಪುರದಲ್ಲಿ ಯುವಕನೊಬ್ಬ ತನ್ನ ಕುಟುಂಬ ಸದಸ್ಯರು ಹಾಗೂ ಪ್ರೇಯಸಿ ಸೇರಿದಂತೆ ಐವರನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 23 ವರ್ಷದ ಆರೋಪಿ ಪೆರುಮಾಳದ ನಿವಾಸಿ ಅಫಾನ್ ಪೊಲೀಸರಿಗೆ ಶರಣಾಗಿ ಐವರು ಕುಟುಂಬ ಸದಸ್ಯರು ಮತ್ತು ಗೆಳತಿ ಸೇರಿದಂತೆ ಐದು ಜನರನ್ನು