Karnikotsava
‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಹಾವನೂರು ಕಾರ್ಣಿಕೋತ್ಸವ ದೈವವಾಣಿ
‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂದು ಹಾವನೂರು ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವದಲ್ಲಿ ಆನಂದ ಬಿಲ್ಲರ ಹೆಸರಿನ ಗೊರವಯ್ಯ ದೈವವಾಣಿ ನುಡಿದಿದ್ದಾರೆ. ‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂಬ ದೈವವಾಣಿಯನ್ನು ಪ್ರಸ್ತಕ ವರ್ಷ ರೈತರು ಬೆಳೆದ ಬೆಳೆಗಳ ಬೆಲೆ ಏರಿಕೆಯಾಗುತ್ತಿದೆ. ಹೆಚ್ಚಿನ ಲಾಭ ಗಳಿಸಲಿದ್ದಾರೆ ಎಂಬ ಸೂಚನೆ ಎಂದು ಅರ್ಥೈಸಿಕೊಳ್ಳಲಾಗಿದೆ. ಹಾವನೂರು ಗ್ರಾಮದ ಜೋಗನ ಮರಡಿಯಲ್ಲಿ 12 ಅಡಿ ಎತ್ತರದ ಬಿಲ್ಲನೇರಿದ


