Karnaaka govt
ಮೀಸಲು ಒಳಮೀಸಲು ನಿಗದಿ ನೀತಿ ಅಸ್ಪಷ್ಟ: ಸರ್ಕಾರಕ್ಕೆ ಅಡಕತ್ತರಿಯಾದ ಹುದ್ದೆಗಳ ಭರ್ತಿ
ಮೀಸಲು ಹಾಗೂ ಒಳಮೀಸಲು ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರದ ನೀತಿಯೇ ಅಸ್ಪಷ್ಟ. ಎಲ್ಲವೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ. ಎಲ್ಲಿವರೆಗೆ ರಾಜ್ಯದಲ್ಲಿ ಮೀಸಲು ಮತ್ತು ಒಳ ಮೀಸಲು ನಿಗದಿ ಸರ್ಕಾರದ ಮಟ್ಟದಲ್ಲಿ ಖಚಿತ ಶಾಸನ ಸ್ವರೂಪ ತಾಳುವುದಿಲ್ಲವೋ, ಅಲ್ಲಿಯವರೆಗೂ ಹುದ್ದೆಗಳ ಭರ್ತಿಯಲ್ಲಿ ತಲೆದೋರಿರುವ ಸಮಸ್ಯೆ ಮತ್ತು ಗೊಂದಲಗಳಿಗೆ ಸರ್ಕಾರ ಅಂತಿಮ ತೆರೆ ಎಳೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನನೆಗುದಿಗೆ ಬಿದ್ದ ಲಕ್ಷಾಂತರ ಹುದ್ದೆಗಳ ನೇಮಕಾತಿ ಈಗ ಭುಗಿಲೆಬ್ಬಿಸಿದೆ. ಧಾರವಾಡದಲ್ಲಿ


