Wednesday, September 30, 2026
Menu

ಭಾರತದಲ್ಲಿ ಡೆಂಗ್ಯೂ ಲಸಿಕೆಗೆ ಅನುಮೋದನೆ

ದೇಶದಲ್ಲಿ ಡೆಂಗ್ಯೂ ಜ್ವರದ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.  ಜಪಾನಿನ ಪ್ರಖ್ಯಾತ ಔಷಧ ತಯಾರಿಕಾ ಕಂಪನಿ ಟಕೆಡಾ ಅಭಿವೃದ್ಧಿಪಡಿಸಿರುವ ಕ್ಯೂಡೆಂಗಾ (QDENGA) ಲಸಿಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದು ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆಯಾಗಿದೆ. ಈ ಲಸಿಕೆಯನ್ನು 4 ರಿಂದ 60 ವರ್ಷದೊಳಗಿನ ಎಲ್ಲಾ ವಯೋಮಾನದವರು ಪಡೆಯಬಹುದಾಗಿದೆ. ವಿಶೇಷವೆಂದರೆ, ಈ  ಲಸಿಕೆಯನ್ನು ಪಡೆಯುವ ಮುನ್ನ ಯಾವುದೇ

ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ ನಿಮ್ಮ ಬದುಕು: ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ ಎಂದ ಸಿಎಂ

ಮುಖ್ಯಮಂತ್ರಿ ಡಿಕೆಶಿವಕುಮಾರ್  ಇಂದು “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ” ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು. ಇದೇ ವೇಳೆ ಶಾಶ್ವತ ನಿವಾಸ ಪ್ರಮಾಣ ಪತ್ರ

ನಿರಂತರ ಮಳೆ: ಯಾತ್ರಿಗಳ ಸುರಕ್ಷತೆಗಾಗಿ ಚಾರ್‌ಧಾಮ್‌ ಯಾತ್ರೆ ಸ್ಥಗಿತ

ಉತ್ತರಾಖಂಡ ಸರ್ಕಾರವು ಚಾರ್‌ಧಾಮ್‌ ಯಾತ್ರೆಯನ್ನು ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿರುವ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ. ಚಾರ್‌ಧಾಮ್‌ ಯಾತ್ರೆ ಸಾಗುವ ರಸ್ತೆಗಳಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಈ ಮಾರ್ಗದಲ್ಲಿದ್ದ

ಮಧ್ಯಪ್ರಾಚ್ಯದಲ್ಲಿ ಯುದ್ಧ: ವಿಮಾನ ಹಾರಾಟ ಸ್ಥಗಿತಕ್ಕೆ ಎಎಲ್‌ಪಿಎ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯನ್ನಾಧರಿಸಿ ದುಬೈ ಮತ್ತು ಅಬುದಾಬಿಗೆ ನಡುವಿನ ವಿಮಾನಯಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಗೆ ಏರ್‌ಲೈನ್ ಪೈಲಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ALPA) ಆಗ್ರಹಿಸಿದೆ. ಗಲ್ಫ್

ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ 38 ಕ್ಕೆ: ಲೋಕಸಭೆಯಲ್ಲಿ ಮಸೂದೆ ಮಂಡನೆ

ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭಗೊಂಡಿದ್ದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಮಂಡಿಸಿದ್ದಾರೆ. ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ

ಹೆಸರಿಗೆ ಕೋಳಿ ಫಾರಂ, ಒಳಗೆ ನಡೆಯೋದು ಮಾದಕ ದ್ರವ್ಯ ದಂಧೆ

ತೆಲಂಗಾಣದ ಅಣ್ಣಾಸಾಗರ ಗ್ರಾಮದ ಹೊರವಲಯದಲ್ಲಿ ಹೆಸರಿಗೆ ಮಾತ್ರ ಕೋಳಿ ಫಾರಂ, ಆದರೆ ಒಳಗೆ ನಡೆಯುತ್ತಿದ್ದುದು ಅಪಾಯಕಾರಿ ಮಾದಕ ದ್ರವ್ಯಗಳ ತಯಾರಿಕೆ. ಇಂಥದ್ದೊಂದು ಅಕ್ರಮ ಜಾಲವನ್ನು ಬಯಲಿಗೆಳೆಯುವಲ್ಲಿ ಆ ರಾಜ್ಯದ ವಿಶೇಷ ಮಾದಕ ದ್ರವ್ಯ ನಿಗ್ರಹ ದಳ  ಯಶಸ್ವಿಯಾಗಿದೆ. ಅಣ್ಣಾಸಾಗರ ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ

ಸಂಸದ್‌ ಚಲೊಗೆ ಮುಂದಾದ ಸಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡ ಮೊದಲ ದಿನ ನವದೆಹಲಿ ಪ್ರತಿಭಟನೆಯ ಕಾರಣಕ್ಕೆ ಉದ್ವಿಗ್ನಗೊಂಡಿದೆ. ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ಸಂಸದ್‌ ಚಲೊ ಪ್ರಯತ್ನ ನಡೆದಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ,

ಹೋಂ ಸ್ಟೇ ನೋಂದಣಿ ಕಡ್ಡಾಯಗೊಳಿಸಿದ ಪ್ರವಾಸೋದ್ಯಮ ಇಲಾಖೆ 

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂ ಸ್ಟೇಗಳೂ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದುವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿಸಲ್ಲಿಸಿದ್ದು, ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ ಮೂಲಕ ಅಧಿಕೃತವಾಗಿ

‘ಸರಿಗಮಪ’ ಆಡಿಷನ್ ಇಂದು ಬೆಂಗಳೂರಿನಲ್ಲಿ 

ಜೀ ಟಿವಿಯ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಸರಿಗಮಪ’ ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಪ್ರೋಮೋದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸೀಸನ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿ ಸಂಗೀತದ ಹಬ್ಬವನ್ನೇ ಸೃಷ್ಟಿಸಲಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ಮಾವಿನಕೆರೆಯಲ್ಲಿ ಇಂದು ಚನ್ನಮ್ಮ ಅಂತ್ಯಕ್ರಿಯೆ

ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರ ಅಂತ್ಯ ಸಂಸ್ಕಾರ ಇಂದು ( ಸೋಮವಾರ) ಮಧ್ಯಾಹ್ನ ಹರದನಹಳ್ಳಿಯ ಮಾವಿನಕೆರೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ. ಮಾವಿನಕೆರೆಯಲ್ಲಿ 4,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಂತಿಮ ಸಂಸ್ಕಾರವು ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದ್ದು, ಹಲವು ಜನಪ್ರತಿನಿಧಿಗಳು