Saturday, October 03, 2026
Menu

ರಾಜ್ಯಸಭೆ ಚುನಾವಣೆ: ಒಡಿಶಾ ಕಾಂಗ್ರೆಸ್‌ ಶಾಸಕರು ಬಿಡದಿಗೆ ಶಿಫ್ಟ್‌

ಮಾರ್ಚ್‌ ೧೬ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಒಡಿಶಾದ ಕಾಂಗ್ರೆಸ್‌ ಶಾಸಕರನ್ನು ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಒಡಿಶಾದ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನ ತಡೆಯಲು ಈ ತಂತ್ರ ರೂಪಿಸಲಾಗಿದೆ. ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಒಡಿಶಾದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು,

ಹಾಲು ಉತ್ಪಾದಕರಿಗೆ ಲೀಟರ್‌ನಲ್ಲಿ 1 ರೂ. ಬೋನಸ್: ಡಿಕೆ ಸುರೇಶ್

“2025-26ನೇ ಸಾಲಿನಲ್ಲಿ ಬಮೂಲ್ 3400 ಕೋಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಏಪ್ರಿಲ್ 1, 2025ರಿಂದ ಮಾರ್ಚ್ 31, 2026ರ

ಎಲ್‌ಪಿಜಿ ಸಿಲಿಂಡರ್‌ ಕಳ್ಳರ ಬಂಧನ

ಮನೆ ಮುಂದೆ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನದಲ್ಲಿದ್ದ ಸಿಲಿಂಡರ್ ಕದ್ದು ಪರಾರಿಯಾಗಿದ್ದ ಇಬ್ಬರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ ನಾಯಕ್ (19), ಗೋವಿಂದರಾಜು (20) ಬಂಧಿತ ಆರೋಪಿಗಳು. ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆ ಮುಂದೆ ನಿಂತಿದ್ದ ಗ್ಯಾಸ್ ಸರಬರಾಜು

ಮೇ ವೇಳೆಗೆ ಟಿಬಿ ಡ್ಯಾಂನ ಎಲ್ಲಾ ಗೇಟ್‌ ಗಳ ಬದಲಾವಣೆ: ಡಿಸಿಎಂ ಶಿವಕುಮಾರ್

“ತುಂಗಭದ್ರಾ ಅಣೆಕಟ್ಟೆಯ  ಎಲ್ಲಾ ಕ್ರೆಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದು, ಬರುವ ಮೇ ವೇಳೆಗೆ ಪೂರ್ಣಗೊಳಿಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ನ ಟಿ.ಎ. ಶರವಣ ಅವರು

ಎಲ್‌ಪಿಜಿ ವ್ಯತ್ಯಯ: ಕಾರ್ಪೋರೇಟ್‌ ಕಂಪೆನಿಗಳಿಗೂ ತಟ್ಟಿದ ಬಿಸಿ

ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗದ ಕಾರಣ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲು ಮುಂದಾಗಿದೆ. ಎಚ್​ಸಿಎಲ್​ಟೆಕ್ ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದೆ. ಇರಾನ್‌- ಇಸ್ರೇಲ್‌

ಇರಾನ್‌ ನಾಯಕ ಮೊಜ್ತಬಾ ಖಮೇನಿ ಹತ್ಯೆ ಎಚ್ಚರಿಕೆಯಿತ್ತ ಟ್ರಂಪ್‌

ಅಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್‌- ಅಮೆರಿಕ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ ಬಳಿಕ ಅಲ್ಲಿನ ನೂತನ ನಾಯಕನಾಗಿ ಮೊಜ್ತಬಾ ಖಮೇನಿ ಆಯ್ಕೆ ಆಗಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತೀವ್ರ ವಿರೋಧ ವ್ಯಕ್ತಪಡಿಸಿ ಹತ್ಯೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಬೇಡಿಕೆಗಳಿಗೆ

ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಸಾವು

ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಬ್ಯಾಡರಹಳ್ಳಿಯ ಅಣ್ಣಯ್ಯ ಹಾಗೂ ಋತು ದಂಪತಿಯ ಮಗ ಚಿರಾಗ್‌ ಮೃತಪಟ್ಟ ಮಗು. ದಂಪತಿ ಸಂಬಂಧಿಕರ ಮದುವೆಗೆ ತೆರಳಲು ರೆಡಿಯಾಗುತ್ತಿದ್ದರು. ಕಾರು ತೊಳೆಯಲು ಸಂಪ್‌ ಕ್ಯಾಪ್‌ ತೆರೆದು

ಎಲ್‌ಪಿಜಿ ವ್ಯತ್ಯಯ: ರಾಜ್ಯದ ಸಂಸದರು ಜನರಿಗೆ ನ್ಯಾಯ ಒದಗಿಸಲಿ ಎಂದ ಡಿಕೆ ಶಿವಕುಮಾರ್

“ಬೇರೆ ವಿಚಾರಗಳಲ್ಲಿ ಮಾತನಾಡುವ ಸಂಸದರು ಅಡುಗೆ ಅನಿಲ ಕೊರತೆ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಬೇಕು. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. “ಅಡುಗೆ ಅನಿಲ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರಿಗೆ

ಇರಾನ್‌-ಇಸ್ರೇಲ್‌ ಸಂಘರ್ಷ: ಹರ್ಮುಜ್‌ ಜಲಸಂಧಿಯಲ್ಲಿ ಭಾರತದ ತೈಲ ಟ್ಯಾಂಕರ್‌ಗಳಿಗೆ ಇರಾನ್‌ ಅನುಮತಿ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜೊತೆ ಮಾತುಕತೆ ನಡೆಸಿದ ಬಳಿಕ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ಸಿಕ್ಕಿದೆ. ಇದರಿಂದ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆಗೆ

ಮಡಿಕೇರಿ: ಮದ್ಯದ ಅಮಲಿನಲ್ಲಿ ಅಣ್ಣ, ತಂಗಿಯ ಕೊಲೆ

ಮದ್ಯ ತಲೆಗೇರಿಸಿಕೊಂಡಿದ್ದ ವ್ಯಕ್ತಿಯು ಅಣ್ಣ, ತಂಗಿಯನ್ನು ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ನಡೆದಿದೆ. ಯಶೋಧಾ(45), ಕುಂಞರಾಮ(47) ಕೊಲೆಯಾದವರು. ಕೊಲೆ ಆರೋಪಿ ಚಂದು(65) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆರೋಪಿಯು ಮಾರಕಾಸ್ತ್ರದಿಂದ ಒಡ ಹುಟ್ಟಿದವರನ್ನು ಕೊಚ್ಚಿ ಕೊಂದಿದ್ದು, ಸ್ಥಳಕ್ಕೆ