kannada news
ಸರ್ಕಾರಿ ವಸತಿ ನಿಲಯದಲ್ಲಿ ಊಟ, ನೀರಿಲ್ಲ: ವಿದ್ಯಾರ್ಥಿಗಳ ಪ್ರತಿಭಟನೆ
ರಾಯಚೂರು ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಪ್ರತಿಭಟನೆ ಆರಂಭಿಸಿದ್ದಾರೆ. ಹಸಿವಿನಿಂದ ಕಂಗೆಟ್ಟ ನೂರಾರು ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗಗಳ ಬಡ ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಮೂರು ದಿನಗಳಿಂದಒಂದು ಹೊತ್ತಿನ ಊಟವಾಗಲಿ ಅಥವಾ ಕುಡಿಯುವ ನೀರಾಗಲಿ ಸಿಕ್ಕಿಲ್ಲ.
ಅಪರೂಪದ ವನ್ಯಜೀವಿಗಳ ಅಕ್ರಮ ಸಾಕಣೆ: ಬೆಂಗಳೂರಿನ ವೈದ್ಯ ಅರೆಸ್ಟ್
ಪರವಾನಗಿ ಇಲ್ಲದೆ ಅಕ್ರಮವಾಗಿ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ಬೆಂಗಳೂರಿನ ಜಯನಗರದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಡಾ ರಾಜ್ ಕಮಲ್ ಬಂಧಿತ ವೈದ್ಯ, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರೂಪದ ಪ್ರಾಣಿ ಮತ್ತು
150 ಬದಲು 15 ಸಾವಿರ ರೂ. ಪಾವತಿ: ಪ್ರಯಾಣಿಕನಿಗೆ ಮರಳಿಸಿದ ಆಟೋ ಚಾಲಕ
ಪ್ರಯಾಣಿಕರನ್ನು ಕಂಡೊಡನೆ ಕಿತ್ತು ತಿನ್ನುವುದನ್ನೇ ವೃತ್ತಿ ಮಾಡಿಕೊಂಡಿರುವ ಆಟೊ ಚಾಲಕರು ಹೆಚ್ಚಾಗಿ ಪ್ರಯಾಣಿಕರಿಗೆ ಕಿರಿಕಿರಿ ಮಾಡುವ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅಪರೂಪಕ್ಕೊಮ್ಮೆ ಪ್ರಯಾಣಿಕ ಸ್ನೇಹಿಯಾಗಿ, ಮಾನವೀಯವಾಗಿ ಆಟೊ ಚಾಲಕರು ನಡೆದುಕೊಳ್ಳುವ ಘಟನೆಗಳು ವರದಿಯಾಗುತ್ತವೆ. ಬೆಂಗಳೂರಿನ ಆಟೋ ಚಾಲಕರೊಬ್ಬರು ಪ್ರಯಾಣಿಕನಿಂದ ತಪ್ಪಾಗಿ ತನಗೆ ಪಾವತಿಯಾಗಿದ್ದ
ಸರ್ಕಾರಿ ನೌಕರರಿಗೆ 10 ಗಂಟೆಯೊಳಗೆ ‘ಕರ್ತವ್ಯ’ ಹಾಜರಾತಿ ಕಡ್ಡಾಯ
ರಾಜ್ಯ ಸರ್ಕಾರಿ ನೌಕರರ ಸರಣಿ ಗೈರುಹಾಜರಿ ಹಾಗೂ ತಡವಾಗಿ ಕಚೇರಿಗೆ ಬರುವ ಪ್ರವೃತ್ತಿಯನ್ನು ತೊಡೆದು ಹಾಕಲು ಪ್ರತಿಯೊಬ್ಬ ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ‘ಕರ್ತವ್ಯ’ ಆ್ಯಪ್ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಗದಗದಲ್ಲಿ ಸಿಡಿಲು ಬಡಿದು ಯುವಕ ಸಾವು
ಗದಗದ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಪ್ರಶಾಂತ್ ಹುಡೇದ (19) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅನ್ಣ ತಮ್ಮನ ಮೃತದೇಹವನ್ನು ಮನೆಗೆ ತಂದಿದ್ದಾನೆ. ಗದಗ ಜಿಲ್ಲೆಯಾದ್ಯಂತ ಶುಕ್ರವಾರ
ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆಯೇ: ಸಿಎಂ
ರಾಮಲಿಂಗಾ ರೆಡ್ಡಿ ಪಕ್ಷ ಬಿಟ್ಟು ಹೋಗುತ್ತಾರೆಯೇ? ಹಾಗೆಂದು ಹೇಳಿದ್ದಾರೆಯೇ? ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ
ಮಾತು ತಪ್ಪಿದ ಸಿಎಂ, ಕಾಂಗ್ರೆಸ್‌ನಲ್ಲಿ ದಂಗೆ: ಪ್ರತಿಪಕ್ಷ ನಾಯಕ ಆರ್ ಅಶೋಕ
ಸಿಎಂ ಡಿಕೆಶಿವಕುಮಾರ್ ಅವರ ಹಳೆ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗುವ ಮುನ್ನವೇ ದಂಗೆ ಶುರುವಾಗಿದೆ. ಪ್ರಮಾಣ ವಚನ ಸ್ವೀಕಾರವಾದ ಮೂರೇ ದಿನಗಳಲ್ಲಿ ಪಕ್ಷ ಮೂರು ಬಾಗಿಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿಯವರಿಗೆ ಬೆಂಗಳೂರು
ಕೇರಳ ಲಾಟರಿ ಹೆಸರಿನಲ್ಲಿ ಇಬ್ಬರಿಗೆ 13.71 ಲಕ್ಷ ರೂ. ವಂಚನೆ
ಕೇರಳ ಲಾಟರಿ ಹೊಡೆದಿದೆ ಎಂದು ನಂಬಿಸಿದ ವಂಚಕರು ಬೆಂಗಳೂರಿನ ವಲಗೇರಹಳ್ಳಿ ಮತ್ತು ಮಾರುತಿ ನಗರದ ಇಬ್ಬರಿಗೆ 13.71 ಲಕ್ಷ ರೂ. ನಾಮ ಹಾಕಿದ್ದಾರೆ. ವಲಗೇರಹಳ್ಳಿಯ 60 ವರ್ಷದ ಎನ್‌ಜಿಒ ಉದ್ಯೋಗಿ 7.45 ಲಕ್ಷ ರೂಪಾಯಿ ಮತ್ತು ಮಾರುತಿ ನಗರದ 52 ವರ್ಷದ
ಮಣಿಪುರ ಹಿಂಸಾಚಾರಕ್ಕೆ ಮೂವರು ಬಲಿ, ಏಳು ಮನೆಗಳು ಭಸ್ಮ
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ಪೋಕ್ಪಿ ಜಿಲ್ಲೆಯ ಸೈತು-ಗಂಫಜೋಲ್ ಉಪವಿಭಾಗದಲ್ಲಿರುವ ಲೋಯಿಬೋಲ್ ಖುಲ್ಲೆನ್ ಎಂಬಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆ ಮಾಡಲಾಗಿದೆ ಮತ್ತು ಏಳು ಮನೆಗಳನ್ನು ಸುಟ್ಟು ಹಾಕಲಾಗಿದೆ. ರಾಷ್ಟ್ರೀಯ ಸಮಾಜವಾದಿ ಮಂಡಳಿಯ ನಾಗಲಿಮ್(ಎನ್‌ಎಸ್‌ಸಿಎನ್-ಐಎಂ) ಮತ್ತು ಅದರ ಪ್ರಾಕ್ಸಿ ಸಂಘಟನೆದ ಜೆಲಿಯಾಂಗ್‌ರಾಂಗ್ ಯುನೈಟೆಡ್
ಸಿಎಂ ಡಿಕೆ ಶಿವಕುಮಾರ್ ಜರ್ಮನಿ ನಿಯೋಗದ ಜತೆ ಹೂಡಿಕೆ ಕುರಿತು ಚರ್ಚೆ
ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಯ ಉದ್ದೇಶದಿಂದ ಆಗಮಿಸಿರುವ ಜರ್ಮನಿಯ ತುರಿಂಜಿಯಾ ಪ್ರಾಂತ್ಯದ ಮಂತ್ರಿಮಂಡಲದ ಮುಖ್ಯಸ್ಥ (ಮಿನಿಸ್ಟರ್ ಪ್ರೆಸಿಡೆಂಟ್) ಮಾರಿಯೋ ವಾಯ್ಟ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಾಸಗಿ ಹೋಟೆಲ್ ನಲ್ಲಿ ಮಾತುಕತೆ ನಡೆಸಿದರು. ಬೃಹತ್ ಕೈಗಾರಿಕಾ




