Kaivara Tatayya
“ಶ್ರೇಷ್ಠತೆಯ ವ್ಯಸನಕ್ಕೆ ಅನುಭಾವದ ಮದ್ದು ಅರೆದವರು ಕೈವಾರ ತಾತಯ್ಯ”
ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ, ಅಧ್ಯಾತ್ಮ ಅಂದರೆ ಚರ್ಮಶುದ್ಧಿ ಅಲ್ಲ, ಅಂತರಂಗದ ಶುದ್ದಿ ಎಂದು ಬದುಕಿ ತೋರಿಸಿದವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಅಭಿಪ್ರಾಯಪಟ್ಟರು. ಕೈವಾರ ತಾತಯ್ಯ ಅವರ 300ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಜಾತಿ, ಧರ್ಮ, ಲಿಂಗ ಹಣ, ಅಂತಸ್ತು ಎಲ್ಲದರ ಶ್ರೇಷ್ಠತೆಯ ವ್ಯಸನವನ್ನು ನಿವಾಳಿಸಿದ ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರು “ತಾತಯ್ಯ”


