Menu

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಆಳ ಒಳಸಂಚು: ಕ್ಷಮೆಯಿಲ್ಲ, ತಪ್ಪಿತಸ್ಥರ ತಲೆದಂಡವೆಂದು ಸರ್ಕಾರಕ್ಕೆ ಸುಪ್ರೀಂ ತಾಕೀತು

ಎನ್‌ಸಿಇಆರ್‌ಟಿ ಎಂಟನೇ ತರಗತಿಗೆ ಅಳವಡಿಸಿರುವ ʼನ್ಯಾಯಾಂಗದಲ್ಲಿ ಭ್ರಷ್ಟಾಚಾರʼ ಪಾಠವನ್ನು ಒಳಗೊಂಡ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೇಲೆ ಸುಪ್ರೀಂ ಕೋರ್ಟ್‌ ಸಂಪೂರ್ಣ ನಿಷೇಧ ಹೇರಿದೆ. ಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗವನ್ನು ಸೇರಿಸಿರುವುದು ಆಳವಾದ ಒಳಸಂಚು ಎಂದು ತೀವ್ರವಾಗಿ ಖಂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡು, ಪುಸ್ತಕದ ಭೌತಿಕ ಹಾಗೂ ಡಿಜಿಟಲ್ ನಕಲುಗಳನ್ನು ತಕ್ಷಣ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶಿಸಿದೆ. ಮುದ್ರಣ, ಮರುಮುದ್ರಣ, ಡಿಜಿಟಲ್