Sunday, September 13, 2026
Menu

ವಿಜಯಪುರದಲ್ಲಿ ಜ್ಯುವೆಲ್ಲರಿ ಶಾಪ್‌ ದರೋಡೆ, ವೀಡಿಯೊ ಮಾಡಲು ಹೋದಾತನಿಗೆ ಫೈರಿಂಗ್‌

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದಂಗಡಿ ದರೋಡೆ ನಡೆದಿದೆ. ಈ ವೇಳೆ ವೀಡಿಯೊ ಸೆರೆ ಹಿಡಿಯಲು ಹೋದವನ ಮೇಲೆ ದರೋಡೆಕೋರರು ಫೈರಿಂಗ್‌ ಮಾಡಿದ್ದಾರೆ. ದರೋಡೆ ನಡೆಯುವಾಗ ಅನಿಲ್‌ ಎಂಬಾತ ವೀಡಿಯೊ ಸೆರೆ ಹಿಡಿಯಲು ಹೋದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ, ಅನಿಲ್‌ ಜೊತೆಗಿದ್ದ ಆತ್ಮಲಿಂಗ ಹೂಗಾರ ಎನ್ನುವವನ ಕಾಲಿಗೆ ಗುಂಡು ತಾಗಿದೆ. ಫೈರಿಂಗ್‌ ಆದಾಗ ನನಗೆ ತುಂಬಾ ಭಯವಾಯಿತು. ದರೋಡೆಕೋರರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು ಎಂದು ಅನಿಲ್‌ ತಿಳಿಸಿದ್ದಾರೆ.