Menu

ರೈಲು ನಿಲ್ದಾಣದಲ್ಲಿ ಕಳೆದುಹೋದ ಚಿನ್ನಾಭರಣ, ನಗದು ಇದ್ದ ಬ್ಯಾಗ್‌: ಪ್ರಯಾಣಿಕನಿಗೆ ತಲುಪಿಸಿದ ಬೆಂಗಳೂರು ಆರ್‌ಪಿಎಫ್‌

ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್‌ ಕಳೆದುಕೊಂಡಿದ್ದರು, ಅದನ್ನು ಪತ್ತೆ ಹಚ್ಚಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ವಾಪಸ್‌ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಬ್ಬಂದಿಯ ತ್ವರಿತ ಮತ್ತು ಪ್ರಾಮಾಣಿಕ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಫೆಬ್ರವರಿ ಎಂಟರಂದು ರಾತ್ರಿ 08.35ಕ್ಕೆ ಪ್ರಯಾಣಿಕರೊಬ್ಬರು ಯಲಹಂಕ ರೈಲು ನಿಲ್ದಾಣದಲ್ಲಿ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ತಕ್ಷಣವೇ ‘ರೈಲ್