Jewargi hospital
ಹಲ್ಲಿನ ಚಿಕಿತ್ಸೆಗೆಂದು ಜೇವರ್ಗಿಯ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೋಮಾಗೆ
ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಹೋಗಿರುವ ಮಹಿಳೆ ಕೋಮಾ ಸ್ಥಿತಿ ತಲುಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ವೈದ್ಯರ ಯಡವಟ್ಟು ಈ ಸ್ಥಿತಿಗೆ ಕಾರಣವೆಂದು ಕುಟುಂಬ ಹೇಳಿದರೆ, ವೈದ್ಯರ ತಪ್ಪಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ಕೋಮಾ ತಲುಪಿರುವ ಮಹಿಳೆ. ಇವರು ಒಂದುವರೆ ತಿಂಗಳಿನಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ


