Menu

ರಟ್ಟಿಹಳ್ಳಿಯಲ್ಲಿ ಇನ್ಸೂರೆನ್ಸ್‌ ಹಣಕ್ಕಾಗಿ ಮಾವನಿಂದ ಅಳಿಯನ ಕೊಲೆ

ಹಾವೇರಿಯ ರಟ್ಟಿಹಳ್ಳಿಯಲ್ಲಿ ಅಳಿಯನ ವಿಮೆ ಹಣದ ಆಸೆಗಾಗಿ ಆತನನ್ನು ಕೊಲೆ ಮಾಡಿದ ಬಳಿಕ ಅಪಘಾತವೆಂದು ಬಿಂಬಿಸಿದ್ದ ಮಾವ ಹಾಗೂ ಆತನ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ರಟ್ಟಿಹಳ್ಳಿ ಪಟ್ಟಣದ ಬಸವರಾಜ್ ಪುಟ್ಟಪ್ಪನವರ್ (38) ಕೊಲೆಯಾದವರು, ಮಾವ ಸಿದ್ದನಗೌಡ, ರಾಘವೇಂದ್ರ ಮಾಳಗೊಂಡರ, ಪ್ರವೀಣ ಹಾಗೂ ಲೋಕೇಶ ಹಲಗೇರಿ ಕೊಲೆಗೈದ ಆರೋಪಿಗಳು. ಬಸವರಾಜ್‌ನ ತಂದೆ, ತಾಯಿ ಹಾಗೂ ಸಹೋದರರು ಈ ಹಿಂದೆಯೇ ನಿಧನ ಹೊಂದಿದ್ದರಿಂದ ಒಂಟಿಯಾಗಿದ್ದು, ಮದ್ಯ ವ್ಯಸನಿಯಾಗಿದ್ದರು. ಅವರ ಹೆಸರಿನಲ್ಲಿ ಕೋಟ್ಯಂತರ