Menu

ಹಣವಿದ್ದವರ ಸ್ನೇಹ, ಸೆಕ್ಸ್‌, ಬ್ಲ್ಯಾಕ್‌ಮೇಲ್‌: ಪ್ರೀತ್ಸೆಂದು ಇನ್ಸ್​ಪೆಕ್ಟರ್‌ಗೆ ಕಾಡಿದ ವನಜಾಳ ಜೀವನ

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಸತೀಶ್ ಬಳಿ ತನ್ನನ್ನು ಪ್ರೀತಿಸು ಎಂದು ಪೀಡಿಸಿ ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ವನಜಾಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಂದಿವೆ. ಇನ್ಸ್​ಪೆಕ್ಟರ್ ಸತೀಶ್ ದಾಖಲಿಸಿದ್ದ ಎಫ್​ಐಆರ್ ಆಧರಿಸಿ ಆಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಣ ಇರುವ ವ್ಯಕ್ತಿಗಳನ್ನು ಗುರುತಿಸಿ ಸ್ನೇಹ ಮಾಡಿ ಮನೆಗೆ ಊಟಕ್ಕೆ ಆಹ್ವಾನಿಸಿ ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಿ ಪೋಟೊ ಹಾಗೂ ವೀಡಿಯೊಗಳನ್ನು ಇಟ್ಟುಕೊಂಡು

ಪೊಲೀಸ್‌ ಅಧಿಕಾರಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳ ಮದುವೆಯಾಗಿ ಕೋಟಿ ಕೋಟಿ ದೋಚುತ್ತಿದ್ದ ಮಹಿಳೆ ಪೊಲೀಸ್‌ ಬಲೆಗೆ

ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳನ್ನು ಒಲಿಸಿ ಮದುವೆಯಾಗಿ ನಂಬಿಸುವುದು, ಮತ್ತೆ ಕೆಲವರನ್ನು ಸಂಬಂಧ ಬೆಳೆಸಿ ಬಲೆಗೆ ಬೀಳಿಸುವುದು, ಬಳಿಕ ಅವರಲ್ಲಿದ್ದ ಹಣವನ್ನೆಲ್ಲ ದೋಚುವುದನ್ನೇ ಜೀವನವನ್ನಾಗಿಸಿಕೊಂಡಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಕೆಲವು ಬ್ಯಾಂಕ್​ ಮ್ಯಾನೇಜರ್​ ಮತ್ತು

ಎಳನೀರು ಮಾರುವ ಮಹಿಳೆಯ ಹನಿಟ್ರಾಪ್‌ಗೆ ಸಿಲುಕಿದ ಇಂಡಿ ಬ್ಯಾಂಕ್‌ ಮ್ಯಾನೇಜರ್‌

ವಿಜಯಪುರದ ಡಿಯ ಡಿ‌ವೈಎಸ್ಪಿ ಕಚೇರಿ ಪಕ್ಕ ಹಲವು ವರ್ಷಗಳಿಂದ ಎಳನೀರು ಮಾರಿಕೊಂಡಿದ್ದ ಮಹಿಳೆ ಬ್ಯಾಂಕ್ ಮ್ಯಾನೇಜರ್‌ನನ್ನು ಹನಿಟ್ರಾಪ್‌ ಮಾಡಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿ ಅರೆಸ್ಟ್‌ ಆಗಿದ್ದಾಳೆ. ಪ್ರಕರಣ ಸಂಬಂಧ ಆರೋಪಿ ಮಹಿಳೆ, ಆಕೆಯ ಮಗ ಹಾಗೂ ಯ್ಯೂಟೂಬ್‌ ಪತ್ರಕರ್ತನನ್ನೂ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ 25ರ ಯುವತಿಯ ಹನಿಟ್ರ್ಯಾಪ್‌ ಬಲೆಗೆ ಸಿಲುಕಿದ 68ರ ವೃದ್ಧ

ಬೆಂಗಳೂರಿನಲ್ಲಿ 68ರ ವೃದ್ಧರೊಬ್ಬರು 25ರ ಯುವತಿಯ ಹನಿಟ್ರ್ಯಾಪ್‌ ಬಲೆಯೊಳಗೆ ಸಿಲುಕಿರುವುದು ಬಯಲಾಗಿದೆ. ಯುವತಿ ವೃದ್ಧರಲ್ಲಿ ಎರಡು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟು ಬೆದರಿಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾಳೆ. ಎರಡು ಕೋಟಿ ರೂ. ನೀಡದಿದ್ದರೆ

ಸಿಎಂಗೆ ಹನಿಟ್ರ್ಯಾಪ್ ಭಯವಿದೆಯೇ ಎಂಬ ಅನುಮಾನ: ಛಲವಾದಿ ನಾರಾಯಣಸ್ವಾಮಿ

ಹನಿಟ್ರ್ಯಾಪ್ ವಿಚಾರದಲ್ಲಿ  ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೆ  ಕೂಡಲೇ ತನಿಖೆಗೆ ಆದೇಶಿಸುತ್ತಿದ್ದರು. ಇದು ಕಾಂಗ್ರೆಸ್ಸಿನ ಮನೆಯ ಮೇಲೆ ಕಾಂಗ್ರೆಸ್ಸಿ ನವರೇ ಅತ್ಯಾಚಾರ ಮಾಡಿದಂತಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನ ನಾಯಕರೇ ತಮ್ಮ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಿಸುವ ಅವಸ್ಥೆಯನ್ನು  ಕಾಣುತ್ತಿ ದ್ದೇವೆ. 

ಕರ್ನಾಟಕದ ಹನಿಟ್ರ್ಯಾಪ್‌ ತನಿಖೆ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ

ಕರ್ನಾಟಕ ಸರ್ಕಾರದ ಸಚಿವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದ ತನಿಖೆಗೆ ಕೋರಿ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಮ್‌ನಾಥ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿತು. ವಿಚಾರಣೆ

ಹನಿಟ್ರ್ಯಾಪ್ ತನಿಖೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಚಿವ ಕೆಎನ್ ರಾಜಣ್ಣ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಧುಬಲೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಸಹಕಾರ ಸಚಿವ ಕೆಎನ್​ ರಾಜಣ್ಣ  ಪ್ರಕರಣದ ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಹನಿಟ್ರ್ಯಾಪ್​ ಯತ್ನ ನಡೆದಿರುವ ಬಗ್ಗೆ ಕಳೆದ ಶುಕ್ರವಾರ ಸದನದಲ್ಲಿ ಪ್ರಸ್ತಾಪಿಸಿ

ಸಿಎಂ ಜೊತೆ ಚರ್ಚಿಸಿ ಹನಿಟ್ರ್ಯಾಪ್ ಪ್ರಕರಣ ತನಿಖೆ: ಜಿ.ಪರಮೇಶ್ವರ್

ಸಚಿವ ಕೆಎನ್ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದ ಕುರಿತು ಸಿಎಂ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಯಾವ ರೀತಿಯ ತನಿಖೆ ನಡೆಸಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಸಹಕಾರ ಸಚಿವ

ಸುಪ್ರೀಂ ಮೆಟ್ಟಿಲೇರಿದ ಹನಿಟ್ರ್ಯಾಪ್: ವಿಚಾರಣೆಗೆ ಅಂಗೀಕಾರ

ನವದೆಹಲಿ: ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಮಧುಬಲೆ ಪ್ರಕರಣವು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ. ಕರ್ನಾಟಕದಲ್ಲಿನ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾ. ಸಂಜೀವ್

ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು: ಡಿಸಿಎಂ 

“ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ? ನನಗೆ ಸಂಬಂಧಿಸಿದ ವಿಚಾರಗಳೇನಾದರೂ ಇದ್ದರೆ ಆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ. ಸದಾಶಿವನಗರ ನಿವಾಸದ