Helicopter crash
ಮದುವೆ ಮಂಟಪದಿಂದ ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್ ಪತನ: ವರ, ಪೈಲಟ್ ಸಾವು
ಮದುವೆ ಸಂಭ್ರಮದಿಂದ ಹನಿಮೂನ್‌ಗೆ ತೆರಳುತ್ತಿದ್ದ ಜೋಡಿಯಿದ್ದ ಹೆಲಿಕಾಪ್ಟರ್ ಅಮೆರಿಕದ ಜಾರ್ಜಿಯಾದಲ್ಲಿ ಪತನಗೊಂಡಿದ್ದು, ಕೇರಳದ ವರ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ವಧು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ವರ ಕೇರಳದ 26 ವರ್ಷದ ಡೇವ್ ಫಿಜಿ, ವೃತ್ತಿಯಲ್ಲಿ ಪೈಲಟ್ ಆಗಿದ್ದವರು, ಮದುವೆ ಸಮಾರಂಭದ ಬಳಿಕ ದಂಪತಿ ಹನಿಮೂನ್‌ಗೆ ತೆರಳುತ್ತಿದ್ದಾಗ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಡಾಸನ್‌ವಿಲ್ಲೆಯಲ್ಲಿರುವ ಮದುವೆ ಮಂಟಪದ ಬಳಿಯೇ ಪತನಗೊಂಡಿದೆ. ಅಪಘಾತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಅಸು ನೀಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ.


