Menu

ಅಹಿಂದ ಕೈಗೆ ನಿಜವಾದ ಅಧಿಕಾರ ಮುನ್ನವೇ ನಾಯಕನ ನಿರ್ಗಮನ

ರಾಜ್ಯದಲ್ಲಿ ಅಹಿಂದ ವರ್ಗಕ್ಕೆ ನಿಜವಾದ ಅಧಿಕಾರ ಸಿಗಬೇಕೆಂದು ಕಳೆದ ೫೦ ವರ್ಷಗಳಿಂದ ರಾಜಕೀಯ ಹೋರಾಟ ನಡೆಸುತ್ತ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿ ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುವುದಾಗಿ ಪ್ರಕಟಿಸಿದ್ದಾರೆ. ಇದು ಹಿಂದುಳಿದ ವರ್ಗಗಳಿಗೆ ತಂದ ಬೇಸರದ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ಆಡಳಿತ ಸರಿಯಾಗಿಲ್ಲ ಎಂದು ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಮೇಲೆ ಯಾವ ಗಂಭೀರ ಆರೋಪ ಇಲ್ಲ. ಅಧಿಕಾರಕ್ಕೆ ಬರುವಾಗ ಅಧಿಕಾರ ಬಿಟ್ಟುಕೊಡುವುದಾಗಿ ವಚನ ನೀಡಿದ್ದರು ಎಂದು