Wednesday, September 30, 2026
Menu

ಡಿಸಿಎಂ ಮೇಲೆ ನಿಗಾಕ್ಕೆ ಸಿಎಂ ತಂಡ ರಚನೆ: ವರದಿ ಪ್ರಕಟಿಸಿದ ಮಾಧ್ಯಮ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಆರ್‌ ಅಶೋಕ

ಸಿಎಂ @siddaramaiah ಅವರೇ, ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಈ ವರದಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಆ ವರದಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ವಿರುದ್ಧವಲ್ಲ ಎಂದು ಆರ್‌ ಅಶೋಕ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು,

ಜಿಎಸ್‌ಟಿ ಕಾಯ್ದೆ ದೇಶದ ಸಾರ್ವಭೌಮತೆ ಭಂಗಗೊಳಿಸುವಂತಿರಬಾರದು: ಸ್ಟಾಲಿನ್‌ ಪತ್ರಕ್ಕೆ ಸಿಎಂ ಪ್ರತಿಕ್ರಿಯೆ

ತಮಿಳುನಾಡು ಸರ್ಕಾರ ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಅಧ್ಯಯನಕ್ಕಾಗಿ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿ ಸಂಬಂಧ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರತಿಕ್ರಿಯಿಸಿ.  ಜಿಎಸ್‌ಟಿ ಕಾಯ್ದೆ ದೇಶದ ಸಾರ್ವಭೌಮತೆ ಭಂಗಗೊಳಿಸುವ ರೀತಿ ಕಾರ್ಯನಿರ್ವಹಿಸಬಾರದು ಎಂದು ಅದರಲ್ಲಿ

ಪ್ರಜ್ವಲ್‌ ರೇವಣ್ಣ ಜೈಲಿಗೆ ಹೋಗಲು ಕುಮಾರಸ್ವಾಮಿ ನೇರ ಕಾರಣ: ಶಾಸಕ ಕದಲೂರು ಉದಯ್

ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕೇಂದ್ರ ಸಚಿವರಾಗಿರುವ ಹೆಚ್‌ಡಿ ಕುಮಾರಸ್ವಾಮಿಯವರೇ ಕಾರಣ, ಸಿಡಿ ಹೊರತಂದಿದ್ದೇ ಅವರು. ಷಡ್ಯಂತ್ರ ಮಾಡಿ ಪ್ರಜ್ವ‌ಲ್‌ನ ಜೈಲಿಗೆ ಹಾಕಿಸಿದ್ದಾರೆ ಎಂದು ಕಾಂಗ್ರೆಸ್​ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ. ಮನಸ್ಸು ಮಾಡಿದ್ದರೆ ದೇವೇಗೌಡರೇ ತಮ್ಮ ಮೊಮ್ಮಗನನ್ನು

ಡಿಕೆ ಶಿವಕುಮಾರ್‌ ಮೇಲೆ ನಿಗಾಗೆ ಸಿಎಂ ತಂಡ: ಅತೃಪ್ತ ಆತ್ಮಗಳ ಹತಾಶ ಹೇಳಿಕೆಯೆಂದ ಸಿದ್ದರಾಮಯ್ಯ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಪ್ರತಿ ಪಕ್ಷದ ನಾಯಕ ಆರ್‌ ಅಶೋಕ  ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ

ಡಿಸಿಎಂ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯಿಂದ ಅನಧಿಕೃತ ತಂಡ: ಆರ್‌ ಅಶೋಕ ಗಂಭೀರ ಆರೋಪ

ಡಿಸಿಎಂ ಡಿಕೆ ಶಿವಕುಮಾರ್‌ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿಎಂ ಸಿದ್ದರಾಮಯ್ಯ ಎಸ್‌ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ. ಅನುದಾನ ಕಡಿತ ಮಾಡುವುದು, ಫೋನ್‌ ಟ್ಯಾಪ್‌ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಕಣ್ಣಿಗೆ ಕಾಣದ ಎಸ್‌ಐಟಿ ಎಂದು ಪ್ರತಿಪಕ್ಷ

ಇರಾನ್-ಇಸ್ರೇಲ್ ಸಂಘರ್ಷ: ರಾಜ್ಯದವರ ರಕ್ಷಣೆಗೆ ಸರ್ಕಾರ ಕ್ರಮವೆಂದ ಸಚಿವ ಕೃಷ್ಣ ಭೈರೇಗೌಡ

ಇರಾನ್- ಇಸ್ರೇಲ್ ಸಂಘರ್ಷದಿಂದ ನಲುಗಿರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರು ಆತಂಕಕ್ಕೆ ಒಳಗಾಗಬೇಕಿಲ್ಲ. ರಾಜ್ಯ ಸರ್ಕಾರ ಕೇಂದ್ರ

ಕರ್ನಾಟಕ ರಾಜ್ಯದ ಆದಾಯ ಮತ್ತು ಉದ್ಯೋಗಕ್ಕೆ ಸ್ಪಿರಿಟ್ ಉದ್ಯಮದ ಕೊಡುಗೆ ಹೆಚ್ಚಳ

ಕರ್ನಾಟಕ ಸರ್ಕಾರವು ಕೈಗೊಂಡ ಪ್ರಗತಿಪರ ಸುಧಾರಣೆಗಳು ಮದ್ಯ ತಯಾರಿಕಾ (ಸ್ಪಿರಿಟ್ಸ್) ವಲಯವನ್ನು ಉದ್ಯೋಗ, ಹೂಡಿಕೆ ಮತ್ತು ರಾಜ್ಯದ ಆದಾಯದ ಪ್ರಮುಖ ಚಾಲಕ ಶಕ್ತಿಯಾಗಿ ಮಾಡಿದೆ ಎಂದು ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್‌ಡಬ್ಲ್ಯುಎಐ )ಹೇಳಿದೆ. ನೀತಿಯಲ್ಲಿನ ಸುಧಾರಣೆಯು

ರಂಭಾಪುರಿ ಮಠದ ಭವನಕ್ಕೆ ಐದು ಕೋಟಿ ರೂಪಾಯಿ: ಡಿಕೆ ಶಿವಕುಮಾರ್

“ರಂಭಾಪುರಿ ಶ್ರೀಗಳು ನಿಂತು ಹೋಗಿದ್ದ ಭವನಕ್ಕೆ ನೀವು ಸಹಾಯ ಮಾಡಬೇಕು ಎಂದು ಹೇಳಿದ್ದರು. ನಾನು ಈ ಹಿಂದೆ ಸ್ವಲ್ಪ ಅಡಚಣೆಗಳಿವೆ ಎಂದು ತಡೆಯಲು ಹೇಳಿದ್ದೆ. ಈಗ ಸಮಯ ಒದಗಿ ಬಂದಿದೆ. ಐದು ಕೋಟಿ ರೂಪಾಯಿ ನೀಡಲಾಗುವುದು‌. ನಾನೇ ಖುದ್ದಾಗಿ ಬಂದು ಅದನ್ನು

ಅಂಗನವಾಡಿ ಮಕ್ಕಳಿಗೆ ತರಕಾರಿಗಾಗಿ 50 ಪೈಸೆ: ಆರ್‌ ಅಶೋಕ ಟೀಕೆ

ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೊಕ್ಕಸ ಖಾಲಿಯಾಗಿರುವುದರಿಂದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ತರಕಾರಿಗೆ 50 ಪೈಸೆ ನೀಡುತ್ತಿದ್ದಾರೆ. ಅಂದರೆ ಹತ್ತು ಮಕ್ಕಳಿಗೆ 5 ರೂ. ನೀಡಲಾಗುತ್ತದೆ. ಅರ್ಧ ಕೆಜಿ ತರಕಾರಿಯನ್ನು ಹತ್ತು ಮಕ್ಕಳಿಗೆ ನೀಡಬೇಕಾಗುತ್ತದೆ.

ಮಗು, ಬಾಣಂತಿ ಸೇರಿ ಕುಟುಂಬವನ್ನು ಮನೆಯಿಂದ ಹೊರ ಹಾಕಿದ ಫೈನಾನ್ಸ್‌ ಕಂಪನಿ

ಬೆಳಗಾವಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಕಿರುಕುಳದಿಂದ ಕುಟುಂಬ ಬೀದಿಗೆ ಬಿದ್ದಿದೆ. ಕಂಪನಿಯು ಮನೆ ಸೀಜ್ ಮಾಡಿದ್ದು, ಮೂರು ತಿಂಗಳ ಮಗು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ.