Thursday, February 06, 2025
Menu

ಭ್ರಷ್ಟ ಅಧಿಕಾರಿ ಮೇಲೆ ನೋಟು ಎಸೆದು ಪ್ರತಿಭಟನೆ

ಗುಜರಾತ್‌ನ ಧೋಲ್ಕಾ ಪ್ರದೇಶದಲ್ಲಿ ಅಧಿಕಾರಿಯ ಲಂಚ ದಾಹಕ್ಕೆ ಬೇಸತ್ತು ಹೋದ ಜನ ಕೊನೆಗೆ ಆ ಅಧಿಕಾರಿ ಮೇಲೆ ನೋಟನ್ನು ಎಸೆದು ಪ್ರತಿಭಟನೆ ಮಾಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಜನ ಸರ್ಕಾರಿ ಕಚೇರಿಯ ಒಳಗೆ ನುಗ್ಗಿ ಕುರ್ಚಿಯ ಮೇಲೆ ಕುಳಿತಿದ್ದ ಭ್ರಷ್ಟ ಅಧಿಕಾರಿಯ ಕುತ್ತಿಗೆಗೆ ಭಿತ್ತಿ ಪತ್ರವನ್ನು ನೇತು ಹಾಕಿ ನೋಟನ್ನು ಎಸೆದು ತಗೊಳ್ಳಿ ಇದನ್ನೂ ತಿನ್ನಿ ಎಂದು ಹೇಳುವ ಮೂಲಕ ಕೋಪ ಮತ್ತು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಅಕ್ರಮವಾಗಿ ಸಂಪಾದಿಸಿದ ಹಣವನ್ನು ಎಷ್ಟು ತಿನ್ನುತ್ತೀರಿ ಎಂದು ಗದರಿಸಿ ನೋಟುಗಳನ್ನು ಭ್ರಷ್ಟ ಅಧಿಕಾರಿ ಮುಖಕ್ಕೆ ಎಸೆಯುವ ಮೂಲಕ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಈ ವೀಡಿಯೊ 5.9 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ಈಗಂತೂ ಭ್ರಷ್ಟಾಚಾರ ಎಂಬ ಕ್ಯಾನ್ಸರ್‌ ಮಹಾಮಾರಿಯಂತೆ ಎಲ್ಲೆಡೆ ಹರಡಿದೆ ಎಂದು ಒಬ್ಬರು   ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಮೊದಲು ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ. ಇಂಥವರನ್ನು ಕೆಲಸದಿಂದ ವಜಾಗೊಳಿಸದಿದ್ದರೆ, ಭ್ರಷ್ಟಚಾರಕ್ಕೆ ಕೊನೆಯೇ ಇರುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *