Featured
ಪಕ್ಷದ ಬಲವರ್ಧನೆಗೆ ‘ಸಂಘಟನ್ ಶ್ರೀ ಜನ್ ಅಭಿಯಾನ್ʼ: ಡಿಕೆ ಸುರೇಶ್
ಒರಿಸ್ಸಾ ರಾಜ್ಯದಲ್ಲಿ ಜಿಲ್ಲಾ ಹಾಗೂ ಪ್ರತಿ ಬೂತ್ ಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಸೇರಿದಂತೆ ಜಿಲ್ಲಾ ಅಧ್ಯಕ್ಷರುಗಳ ಆಯ್ಕೆಯ ವಿಚಾರವಾಗಿ ‘ಸಂಘಟನ್ ಶ್ರೀ ಜನ್ ಅಭಿಯಾನ್ʼ ನಡೆಸಲಾಗುತ್ತಿದೆ ಎಂದು ಒಡಿಸ್ಸಾ ವೀಕ್ಷಕ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಹೇಳಿದರು. ಒಡಿಸ್ಸಾ ರಾಜ್ಯದ ಅಂಗುಲ್ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಹೈಕಮಾಂಡ್ ಆದೇಶದ ಮೇರೆಗೆ ಪ್ರತಿ ಜಿಲ್ಲೆಯ
ಬಹುತ್ವ ಸಂಸ್ಕೃತಿಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಬದ್ಧತೆ ಇದೆ: ಸಿಎಂ ಸಿದ್ದರಾಮಯ್ಯ
ಬಹುತ್ವ ಸಂಸ್ಕೃತಿಯಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗಾಗಿ ನಮ್ಮ ಸರ್ಕಾರ ಕಾರ್ಯಕ್ರಮ ರೂಪಿಸಿ ಜಾರಿ ಮಾಡುವ ಮೂಲಕ ಸಮಾಜದ ಅಸಮಾನತೆ ಹೋಗಲಾಡಿಲು ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ
ಮೈಸೂರಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು
ಮೈಸೂರಿನ ಬಿ.ಎಂ. ಹ್ಯಾಬಿಟೇಟ್ ಮಾಲ್‌ನಲ್ಲಿ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಣಸೂರು ತಾಲೂಕಿನ ಎಲೆಕ್ಟ್ರಿಷಿಯನ್ ಸುನೀಲ್ (35) ಸ್ಥಳದಲ್ಲೇ ಮೃತಪಟ್ಟವರು. ಅವರನ್ನು ರಕ್ಷಿಸಲು ಮುಂದಾದ ಗೋಕುಲಂನ ಚಂದ್ರು ಕೆಳಗೆ ಬಿದ್ದು ಗಂಭೀರವಾಗಿ
ನಾಳೆ, ನಾಳಿದ್ದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ: ಬೆಸ್ಕಾಂ
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಬೆಸ್ಕಾಂ ವಿದ್ಯುತ್ ಕಡಿತಗೊಳಿಸಲಿದೆ. ಬಾಣಸವಾಡಿ 66/11 ಕೆ.ವಿ. ಉಪಕೇಂದ್ರದಲ್ಲಿ ನಡೆಯುತ್ತಿರುವ ತುರ್ತು ನಿರ್ವಹಣಾ ಕಾರ್ಯಗಳ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 9 ಮತ್ತು
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್: ತೀವ್ರಗೊಂಡ ಪ್ರತಿಭಟನೆ
ನೇಪಾಳದಲ್ಲಿ ಎಲ್ಲಾ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರ ಖಂಡಿಸಿ ವಿದ್ಯಾರ್ಥಿಗಳು, ಯುವ ಸಮೂಹ ಸೇರಿದಂತೆ ಜನ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಸರ್ಕಾರ ಕಳೆದ ವಾರ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾಗಳನ್ನು
ಗಣೇಶ ಮೆರವಣಿಗೆಯಲ್ಲಿ ಕಲ್ಲೆಸೆತ: ನಾಳೆ ಮದ್ದೂರು ಬಂದ್
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಾನುವಾರ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದು ಎರಡೂ ಕೋಮುಗಳ ಹಲವು ಯುವಕರು ಗಾಯಗೊಂಡಿದ್ದು, ಇಂದು ನಿಷೇಧಾಜ್ಞೆ ಜಾರಿಯಲ್ಲಿದೆ. ನಾಳೆ ಅಂದರೆ ಮಂಗಳವಾರ ಕೃತ್ಯ ಖಂಡಿಸಿ ಹಿಂದೂ ಮುಖಂಡರು ಮದ್ದೂರು ಬಂದ್‌ಗೆ ಕರೆ ನೀಡಿದ್ದಾರೆ. ಮಂಗಳವಾರ ಮದ್ದೂರು
ಪತ್ರಕರ್ತರ ತರಬೇತಿಗಾಗಿ ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ – ಕರ್ನಾಟಕ ಮಾಧ್ಯಮ ಅಕಾಡೆಮಿ ಒಡಂಬಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್ ಸಿಎಸ್‌ಆರ್ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ. ಪತ್ರಕರ್ತರ ಸಾಫ್ಟ್‌ಸ್ಕಿಲ್ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ
ತುಂಗಾಭದ್ರಾ ಡ್ಯಾಂನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್, ಎಂಟು ಅಳವಡಿಕೆಗೆ ಸಿದ್ಧ
ಕ್ರೆಸ್ಟ್ ಗೇಟ್ ಗಳ ಬದಲಾವಣೆ, ನಿರ್ವಹಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ಕೇಂದ್ರ ಸರ್ಕಾರದ ಅಧೀನದ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮಂಡಳಿಯ ಜವಾಬ್ದಾರಿ ಹೆಚ್ಚು. ಮೊದಲ ಬೆಳೆಗೆ ನೀರು ಹರಿಸುವ ಮುನ್ನ ಅಗತ್ಯ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ
ಹೆಸರಘಟ್ಟದಲ್ಲಿ ಕ್ಯೂ-ಸಿಟಿಗೆ 6.17 ಎಕರೆ ಜಾಗ ಮಂಜೂರು
ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳಿಗೆ ಇನ್ಕ್ಯೂಬೇಷನ್ ಸೌಲಭ್ಯಗಳು ಹಾಗೂ ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿರುವ ಕ್ಯೂ-ಸಿಟಿ (ಕ್ವಾಂಟಮ್ ಸಿಟಿ) ಸ್ಥಾಪನೆಗೆ ರಾಜ್ಯ ಸರ್ಕಾರ ಹೆಸರುಘಟ್ಟದಲ್ಲಿ 6.17 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ
ನಾಳೆ ಇರ್ತಿನೋ ಇಲ್ವೋ… ರೀಲ್ಸ್ ಮಾಡಿದ್ದ ಸ್ವಾಮೀಜಿ ಗಂಗಾವತಿಯಲ್ಲಿ ನೀರಲ್ಲಿ ಮುಳುಗಿ ಸಾವು
ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಮೃತಪಟ್ಟಿದ್ದಾರೆ. ಭಾನುವಾರ ರೀಲ್ಸ್ ಮಾಡಿದ್ದ ಸ್ವಾಮೀಜಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ವಾಮೀಜಿ ಮುಳುಗಿ ಚೀರಾಡುತ್ತಿದ್ದಾಗ




