Thursday, January 30, 2025
Menu

ತಂಗಿ ಜೊತೆ ಜಗಳವಾಡುತ್ತ 2 ನೇ ಅಂತಸ್ತಿನಿಂದ ತನ್ನ ಮಗುವನ್ನೇ ಎಸೆದ ಮಹಾತಾಯಿ

ಮಹಿಳೆಯೊಬ್ಬರು ತನ್ನ ತಂಗಿಯ ಜತೆ ಜಗಳವಾಡುತ್ತ ತನ್ನ 9 ತಿಂಗಳ ಮಗುವನ್ನು ಮನೆಯ ಎರಡನೇ ಅಂತಸ್ತಿನಿಂದ ಕೆಳಗೆ ಎಸೆದಿದ್ದು, ಮಗು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೃಷ್ಣನಗರದಲ್ಲಿ ನಡೆದಿದೆ.

ಕೃಷ್ಣನಗರ ಪ್ರದೇಶದಲ್ಲಿರುವ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಅಂಜು ದೇವಿ ತನ್ನ ಒಂಬತ್ತು ತಿಂಗಳ ಮಗುವನ್ನು ತಾರಸಿಯಿಂದ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜು ದೇವಿ ತನ್ನ ಸಹೋದರಿಯೊಂದಿಗೆ ಜಗಳವಾಡಿದ್ದಾಳೆ, ಈ ಸಮಯದಲ್ಲಿ ಅವಳು ಎರಡು ಅಂತಸ್ತಿನ ಮನೆಯ ಮೇಲಿಂದ ಮಗುವನ್ನು ಎಸೆದಿದ್ದಾಳೆ. ಕೂಡಲೇ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಓಂವಿರ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರು ಅಂಜುದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಅಜ್ಜಿ ಶೋಭಾದೇವಿ ಅವರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 105 ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಅಂಜುದೇವಿ ಪ್ರೇಮ ವಿವಾಹವಾಗಿದ್ದು, ಎರಡು ವರ್ಷಗಳಿಂದ ತಾಯಿ ಯೊಂದಿಗೆ ತನ್ನ ಮನೆಯಲ್ಲಿ ನೆಲೆಸಿದ್ದಳು. ಅಂಜು ಅವರ ತಂಗಿ ಮನಿಷಾ ಕೂಡ ಕಳೆದ ಎರಡು ತಿಂಗಳಿನಿಂದ ಇದೇ ಮನೆಯಲ್ಲಿ ವಾಸವಾಗಿದ್ದರು.

Related Posts

Leave a Reply

Your email address will not be published. Required fields are marked *