Menu

2025ರ ಹೊಸ ವರ್ಷ ರಾಜ್ಯದ ಜನರಿಗೆ ಹರ್ಷ ತರಲಿ: ಡಿಸಿಎಂ ಡಿಕೆ ಶಿವಕುಮಾರ್ ಶುಭ ಹಾರೈಕೆ!

ಬೆಂಗಳೂರು: ರಾಜ್ಯದ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2025ರ ವರ್ಷ ಎಲ್ಲರಿಗೂ ಹರ್ಷ ತರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಭ ಹಾರೈಸಿದ್ದಾರೆ.

ಗ್ಯಾರಂಟಿಯಿಂದ ಹೆಚ್ಚಾಗಲಿ ಜನರ ಬಲ, ಕರ್ನಾಟಕವಾಗಲಿ ಇನ್ನಷ್ಟು ಸಬಲ. ಹೊಸ ವರ್ಷದ ಈ ಶುಭ ಘಳಿಗೆಯನ್ನು ಹೊಸ ಉತ್ಸಾಹದೊಂದಿಗೆ ಆರಂಭಿಸಿ. ನಿಮ್ಮ ಕನಸುಗಳನ್ನು ಈಡೇರಿಸುವತ್ತ ನಿಮ್ಮ ಪಯಣ ಯಶಸ್ವಿಯಾಗಿ ಸಾಗಲಿ. ರಾಜ್ಯದಲ್ಲಿ ಈ ವರ್ಷವೂ ಮಳೆ, ಬೆಳೆ ಉತ್ತಮವಾಗಲಿ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲಿ. ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ 2024 ರಲ್ಲಿ ಜನ ಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯ ಬದಲಾವಣೆ ಉಂಟಾಗಿದೆ. ಇದರ ಜತೆಗೆ ರಾಜ್ಯದ ಸಮಗ್ರ ಕಲ್ಯಾಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಿದೆ.

ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಯಶಸ್ಸು ಸಿಗಲಿ” ಎಂದು ಶಿವಕುಮಾರ್ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *