Menu

ರಾಯಚೂರಿನಲ್ಲಿ ಬೀದಿ ಬದಿ ವ್ಯಾಪಾರಿಯ ಹತ್ಯೆ

ರಾಯಚೂರು ನಗರದ ರೇಡಿಯೋ ಸ್ಟೇಷನ್ ಸಮೀಪ ನಾಲ್ವರು ದುಷ್ಕರ್ಮಿಗಳ ಗುಂಪು ಬೀದಿಬದಿ ವ್ಯಾಪಾರಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದೆ. ಹತ್ಯೆಯಾದ ಯುವಕನನ್ನು ಆಂಧ್ರಪ್ರದೇಶ ಕಡಪದ ಇಮಾಮ್ ಹುಸೇನ್ (24) ಎಂದು ಗುರುತಿಸಲಾಗಿದೆ. ಮೃತ ಇಮಾಮ್ ಹುಸೇನ್ 15 ದಿನಗಳಿಂದ ರಾಯಚೂರಿನ ಬೀದಿಬದಿಯಲ್ಲಿ ಡ್ರೈ ಫ್ರೂಟ್ಸ್‌ ಮಾರಾಟ ಮಾಡಿಕೊಂಡಿದ್ದನು. ತಡರಾತ್ರಿ ನಾಲ್ವರು ಇಬ್ಬರ ಮೇಲೆ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಇಮಾಮ್

ಲವ್‌, ಸೆಕ್ಸ್‌, ಅಬಾರ್ಷನ್‌ ಬಳಿಕ ರಾಯಚೂರಿನಲ್ಲಿ ಮತ್ತೊಬ್ಬಾಕೆ ಜೊತೆ ಪ್ರಿಯಕರನ ಮದುವೆ ತಡೆದ ಸಂತ್ರಸ್ತೆ

ಕೊಪ್ಪಳದ ಯುವತಿಯೊಬ್ಬಳು ರಾಯಚೂರಿನಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಯೊಂದನ್ನು ತಡೆದಿದ್ದು, ಪ್ರಕರಣ ಪೊಲೀಸ್‌ ಠಾಣೆಗೆ ತಲುಪಿದೆ. ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿದ ಯುವಕ ಈಗ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರೀತಿಸಿ ದೈಹಿಕ

ರಾಯಚೂರಿನಲ್ಲಿ ಎಸ್‌ಡಿಎಂಸಿ ಅಧ್ಯಕ್ಷನ ವೈಯಕ್ತಿಕ ಸಾಲ: ಬ್ಯಾಂಕ್‌ನಿಂದ ಮಕ್ಕಳ ಬಿಸಿಯೂಟಕ್ಕೆ ಕತ್ತರಿ

ಎಸ್‌ಡಿಎಂಸಿ ಅಧ್ಯಕ್ಷನ ವೈಯಕ್ತಿಕ ಸಾಲ ತೀರಿಸದ ಕಾರಣ ರಾಯಚೂರು ತಾಲೂಕಿನ ಕೂಡ್ಲೂರು ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳ ಬಿಸಿಯೂಟವನ್ನು ಬ್ಯಾಂಕ್‌ ಕಸಿದುಕೊಂಡಿದೆ. ಯಾವುದೋ ವ್ಯಕ್ತಿ ಪಡೆದ ಸಾಲಕ್ಕೆ ಬ್ಯಾಂಕ್‌ ಶಾಲಾ ಮಕ್ಕಳ ಬಿಸಿಯೂಟಕ್ಕೆ ತೊಂದರೆ ನೀಡುತ್ತಿದೆ. ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯಿಂದ 255

ಸಿಂಧನೂರಿನಲ್ಲಿ ಮಗನ ಮದುವೆ ಸಂಭ್ರಮದಲ್ಲಿದ್ದಾಗಲೇ ತಂದೆಯ ಸಾವು

ಸಿಂಧನೂರು ನಗರದ ವಾರ್ಡ್ ನಂಬರ್ 14ರ ನಿವಾಸಿ, ವೀರಶೈವ ಸಮಾಜದ ಮುಖಂಡ ಶರಣಯ್ಯ ಸ್ವಾಮಿ ಶಾಸ್ತ್ರಿ ಮಠ ಕಂದಗಲ್ (47) ಮಗನ ಮದುವೆ ದಿನದಂದೇ ಹೃದಯಘಾತದಿಂದ ಭಾನುವಾರ (ಇಂದು) ಮೃತಪಟ್ಟಿದ್ದಾರೆ. ಶರಣಯ್ಯ ಸ್ವಾಮಿ ಕಳೆದ ತಿಂಗಳಿನಿಂದ ಮಗನ ಮದುವೆ ಸಂಭ್ರಮದಲ್ಲಿ ಇದ್ದು,

ಮಗುವಿಗೆ ಜನ್ಮವಿತ್ತ ಕೊಪ್ಪಳ ವಸತಿನಿಲಯದ ವಿದ್ಯಾರ್ಥಿನಿ

ಕೊಪ್ಪಳದ ಕುಕನೂರು ತಾಲೂಕಿನ ಶಾಲೆಯ ವಸತಿನಿಲಯದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಕುಕನೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಹೊಟ್ಟೆನೋವಿನಿಂದ ನರಳಾಡಿದ್ದು ತಕ್ಷಣ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ

ಸಿಂಧನೂರಿನಲ್ಲಿ ಜೆಡಿಎಸ್ ಪ್ರತಿಭಟನೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧನೂರು ನಗರದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ವಿರುದ್ಧದ ಬೃಹತ್ ಪ್ರತಿಭಟನೆ ಹಾಗೂ

ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಸಿಂಧನೂರಿನಲ್ಲಿ ತಮ್ಮನ ಕೊಲೆಗೈದ ಅಣ್ಣ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಅನ್ಣನೊಬ್ಬ ಸ್ವಂತ ತಮ್ಮನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ವೆಂಕಟೇಶ್ವರ್ ಕ್ಯಾಂಪ್‌ನಲ್ಲಿ ನಡೆದಿದೆ. ರಾಜು ಅಲಿಯಾಸ್ ಎಮ್ಮಿರಾಜು (32) ಕೊಲೆಯಾದವ. ಸುರೇಶ್ ಅಲಿಯಾಸ್ ಸೂರಿಬಾಬು(38) ಕೊಲೆಗಾರ ಅಣ್ಣ. ಹೈದ್ರಾಬಾದ್‌ನಲ್ಲಿ

ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು: ಆರ್‌ ಅಶೋಕ ಆಗ್ರಹ

ಚಾಮರಾಜನಗರದಲ್ಲಿ ಕೆರೆ ತುಂಬಿಸಲು ಕಾಂಗ್ರೆಸ್‌ ಸರ್ಕಾರ ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು. ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌  ಅಶೋಕ ಆಗ್ರಹಿಸಿದರು. ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ರಾಯಚೂರಿನಲ್ಲಿ ವ್ಯಾಪಾರಿ ಯುವಕನ ಬರ್ಬರ ಹತ್ಯೆ

ರಾಯಚೂರಿನ ಸಿಂಧನೂರು ನಗರದ ಇಂದಿರಾನಗರದಲ್ಲಿ ಪ್ರಾವಿಷನಲ್‌ ಸ್ಟೋರ್ ಹೋಲ್ ಸೇಲ್ ವ್ಯಾಪಾರಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.  ನಾಪತ್ತೆಯಾಗಿದ್ದ ವ್ಯಾಪಾರಿ ಹೆಣವಾಗಿ ಪತ್ತೆಯಾಗಿದ್ದು, ವ್ಯಾಪಾರಿ ಕೈಗಳಿಗೆ ಬೈಡಿಂಗ್ ವೈರ್ ನಿಂದ ಕಟ್ಟಿ ಕಲ್ಲುಗಳಿಂದ ಮುಖ, ಬೆನ್ನಿಗೆ ಜಜ್ಜಿ ಕೊಲೆಗೈಯಲಾಗಿದೆ. ಪ್ರವೀರ್ ಸರ್ದಾರ್(32)

ಸಿಎಂ ಕುರ್ಚಿ, ಕೆಪಿಸಿಸಿ ಅಧ್ಯಕ್ಷ ಕುರ್ಚಿ ಖಾಲಿ ಇಲ್ಲ: ಸಚಿವ ಜಮೀರ್‌ ಅಹ್ಮದ್‌

2028ರವರೆಗೆ ಸಿಎಂ ಕುರ್ಚಿ ಖಾಲಿ ಇಲ್ಲ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಸಹ ಖಾಲಿ ಇಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು. ಕೊಪ್ಪಳ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದನ್ನು ದಸರಾ