Tuesday, September 29, 2026
Menu

ನಾವು ದೇಶದ ಅತೀ ದೊಡ್ಡ ಭ್ರಷ್ಟರು: ಮಲ್ಯ ಬರ್ತಡೆಯಲ್ಲಿ ಲಲಿತ್ ಮೋದಿ ಜೋಕ್ ವೀಡಿಯೋ ವೈರಲ್!

ನಾವು ದೇಶದ ಅತೀ ದೊಡ್ಡ ದೇಶಭ್ರಷ್ಟರು ಎಂದು ಉದ್ಯಮಿ ವಿಜಯ್‌ ಮಲ್ಯ ಜನ್ಮಾದಿನಾಚರಣೆಯ ಪಾರ್ಟಿಯಲ್ಲಿ ಮಲ್ಯ ಹಾಗೂ ಲಲಿತ್‌ ಮೋದಿ ಒಟ್ಟಾಗಿ ಹೇಳಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಐಪಿಎಲ್‌ ಟಿ-20 ಟೂರ್ನಿಯನ್ನು ಹುಟ್ಟುಹಾಕಿದ ಲಲಿತ್‌ ಮೋದಿ, ವೀಡಿಯೊದಲ್ಲಿ ನಾವು ದೇಶಭ್ರಷ್ಟರು, ಭಾರತದ ಅತೀ ದೊಡ್ಡ ದೇಶಭ್ರಷ್ಟರು ಎಂದು ವೀಡಿಯೊದಲ್ಲಿ ಹೇಳಿದ್ದಾರೆ. ಇಂಟರ್‌ ನೆಟ್‌ ಡೌನ್‌ ಆಗುವಂತಹ ಏನಾದರೂ ಒಂದನ್ನು ನಾವು ಈಗ ಮಾಡೋಣ. ನಮ್ಮ ನಡೆಯಿಂದ

ಬೆಂಗಳೂರು ಮಹಿಳೆಯಿಂದ ಅಯೋಧ್ಯೆ ಮಂದಿರಕ್ಕೆ 2.5 ಕೋಟಿ ರೂ. ಮೌಲ್ಯದ ರಾಮನ ಕಲಾಕೃತಿ

ಬೆಂಗಳೂರಿನ ಜಯಶ್ರೀ ಫಣೀಶ್ ಎಂಬವರು ಚಿನ್ನದ ಕುಸುರಿಯೊಂದಿಗೆ ಅಮೂಲ್ಯ ರತ್ನಗಳು ಮತ್ತು ಹರಳುಗಳನ್ನು ಬಳಸಿ ಮರದ ಚೌಕಟ್ಟಿನಲ್ಲಿ ಕೆತ್ತಿರುವ 2.5 ಕೋಟಿ ರೂಪಾಯಿ ಮೌಲ್ಯದ ರಾಮನ ಕಲಾಕೃತಿಯನ್ನು ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ

ಇಸ್ರೊದಿಂದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಮೆರಿಕದ AST ಸ್ಪೇಸ್‌ಮೊಬೈಲ್‌ ನಿರ್ಮಿತ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಕಡಿಮೆ ಭೂಕಕ್ಷೆಗೆ ಸೇರಿಸುವ ಕಾರ್ಯಾಚರಣೆ ಯನ್ನು ಪೂರ್ಣಗೊಳಿಸುವಲ್ಲಿ ಇಂದು ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಬಾಹುಬಲಿ ರಾಕೆಟ್‌ LVM-M6

ಮೋದಿ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ನರೇಗಾ ಯೋಜನೆ ವಿಫಲ: ಡಿಕೆ ಶಿವಕುಮಾರ್‌ ಕಳವಳ

“ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ನರೇಗಾ ಯೋಜನೆ ವಿಫಲವಾಗಲಿದೆ.  ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಕಳವಳ ವ್ಯಕ್ತಪಡಿಸಿದ್ದಾರೆ.

ತಾಯಿ ಮಡಿಲಿನಿಂದ 3 ವರ್ಷದ ಹಸುಗೂಸು ಹೊತ್ತೊಯ್ದ ನರಭಕ್ಷಕ ತೋಳ!

ಅಮ್ಮನ ತೊಡೆ ಮೇಲೆ ಮಲಗಿದ್ದ 3 ವರ್ಷದ ಮಗುವನ್ನು ನರಭಕ್ಷಕ ತೋಳ ಕಿತ್ತುಕೊಂಡು ಹೋಗಿ ತಿಂದ ಭೀಕರ ಘಟನೆ ಉತ್ತರಪ್ರದೇಶದ ಬಹರಿಚ್ ಜಿಲ್ಲೆಯಲ್ಲಿ ನಡೆದಿದೆ. ಮಂಜಾರ ತಾಲೂಕಿನ ರಸಲ್ಪುರ ಡಾರೆತಾ ಗ್ರಾಮದಲ್ಲಿ ತೊಡೆ ಮೇಲೆ ಮಲಗಿಸಿಕೊಂಡು ಹಾಲುಣಿಸಿದ್ದಾಗ ಮನೆಗೆ ನುಗ್ಗಿದ ತೋಳ

ಅಜ್ಮೀರ್‌ ದರ್ಗಾಗೆ ಪಿಎಂಒ ಚಾದರ್‌ ಅರ್ಪಣೆಗೆ ತಡೆ ಕೋರಿದ್ದ ಮನವಿ ನಿರಾಕರಿಸಿದ ಸುಪ್ರೀಂ

ಪ್ರಧಾನಮಂತ್ರಿಗಳ ಕಚೇರಿಯಿಂದ ಅಜ್ಮೀರ್‌ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ಉರುಸ್‌ ವೇಳೆ ಚಾದರ್ ಸಮರ್ಪಣೆ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಲು ಕೋರಿ ಸಲ್ಲಿಕೆಯಾಗಿದ್ದ ತುರ್ತು ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ದರ್ಗಾವು ಪ್ರಾಚೀನ ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಎಂದು ಹಿಂದೂ

ಬಾಡಿಗೆ ತಾಯ್ತನಕ್ಕೆ ವೃದ್ಧ ದಂಪತಿ ಕೋರಿಕೆ: ಸ್ಪಂದಿಸಲು ರಾಜ್ಯ, ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಇದ್ದ ಒಬ್ಬನೇ ಮಗನ ಕಳೆದುಕೊಂಡಿರುವ ವೃದ್ಧ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕಾನೂನು ಅಡ್ಡಿಯಾಗುತ್ತಿರುವುದನ್ನು ಗಮನಿಸಿರುವ ಹೈಕೋರ್ಟ್,ಪ್ರಕರಣವನ್ನು ಕಾನೂನು ಅಡಿ ಅಲ್ಲ, ಮಾನವೀಯತೆಯಿಂದ ನೋಡಬೇಕಿದೆ, ಅರ್ಜಿದಾರರ ಮನವಿಗೆ ಸ್ಪಂದಿಸಲು ಸೂಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಟಿಟಿಡಿ ಮಾಜಿ ಅಧ್ಯಕ್ಷ, ಎಂಪಿಯಾಗಿದ್ದ ಆದಿಕೇಶವುಲು ನಾಯ್ಡು ಆಪ್ತ ಸಾವು: ಆದಿಕೇಶವುಲು ನಾಯ್ಡು ಮಗಳು, ಮಗನ ಬಂಧನ

ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು ಅವರ ಆಪ್ತ ಹಾಗೂ ಉದ್ಯಮಿ ರಘುನಾಥ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಅವರ ಮಗಳು ಕಲ್ಪಜ ಮತ್ತು ಮಗ ಶ್ರೀನಿವಾಸ್‌ ಅವರನ್ನು ಸಿಬಿಐ ಬಂಧಿಸಿದೆ.

ಚಿನ್ನಕ್ಕಾಗಿ ಅಜ್ಜಿಯ ಕೊಲೆಗೈದ ಮೊಮ್ಮಗ: ಪತ್ತೆ ಹಚ್ಚಿದ ನಾಯಿಗಳು

ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯವನ್ನು ತನಿಖೆಯಲ್ಲಿ ಭಾಗವಹಿಸಿದ್ದ ಶ್ವಾನದಳದ ನಾಯಿಗಳು ಬಯಲು ಮಾಡಿವೆ. ಆಂಧ್ರದ ವಿಜಯನಗರ ಭೋಗಾಪುರಂ ಮಂಡಲದ ಮುಡಸಲಪೇಟೆ ವಿಮಾನ ನಿಲ್ದಾಣ ಕಾಲೊನಿಯಲ್ಲಿ ನಡೆದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯಾಗಿರುವ ಮೊಮ್ಮಗನನ್ನು ಬಂಧಿಸಿದ್ದಾರೆ.

ಪಾಕ್‌ಗೆ ನೌಕಾಪಡೆಯ ರಹಸ್ಯ ಮಾಹಿತಿ: ಮಲ್ಪೆಯಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್‌

ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣ ಸಂಬಂಧ ಮಲ್ಪೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಗುಜರಾತ್​​ನ ಆನಂದ ತಾಲೂಕಿನ ಕೈಲಾಸ್‌ನಗರಿಯ ನಿವಾಸಿ ಹಿರೇಂದ್ರ (34) ಬಂಧಿತ. ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿರುವ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಗುತ್ತಿಗೆ