ದೇಶ-ವಿದೇಶ
ಕೆಜಿ ಬೆಳ್ಳಿ 2.54 ಲಕ್ಷ ರೂ.ಗೆ ಜಿಗಿತ: ಸಾರ್ವಕಾಲಿಕ ದಾಖಲೆ ಏರಿಕೆ
ನವದೆಹಲಿ: ದಿನದಿಂದ ದಿನಕ್ಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಸೋಮವಾರ ಭಾರೀ ಜಿಗಿತ ಕಂಡು ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆ ವಹಿವಾಟು ಆರಂಭವಾದ ಬೆನ್ನಲ್ಲೇ ಶೇ.6ರಷ್ಟು ಜಿಗಿತ ಕಂಡ ಬೆಳ್ಳಿ ಕೆಜಿಗೆ 2,54,174 ರೂಪಾಯಿ ದಾಖಲಿಸಿತು. ಇದು ಈವರೆಗಿನ ಸಾರ್ವಕಾಲಿಕ ದಾಖಲೆ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಬೇಡಿಕೆ ಮತ್ತು ಜಾಗತಿಕ ಪ್ರವೃತ್ತಿಗಳು ಬೆಳ್ಳಿಯ ಈ ನಾಗಾಲೋಟಕ್ಕೆ ಕಾರಣ ಎಂದು ಮಾರುಕಟ್ಟೆ
ಉನ್ನಾವೊ ರೇಪ್ ಕೇಸ್: ಬಿಜೆಪಿ ಮಾಜಿ ಶಾಸಕ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಉನ್ನಾವೊದಲ್ಲಿ 2017ರಲ್ಲಿ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ಪರಿಗಣಿಸಿ
ಸಿಗರೇಟ್ ದುಡ್ಡಿಗಾಗಿ ಜಗಳ: ಪತ್ನಿಯ ಸಾಯಿಸಿ ಗಂಡ ಆತ್ಮಹತ್ಯೆ
ಇಪ್ಪತ್ತು ರೂಪಾಯಿ ಸಿಗರೇಟ್ ಹಣದ ವಿಚಾರವಾಗಿ ದಂಪತಿ ನಡುವೆ ನಡೆದ ಜಗಳ ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಬಾ ನಗರದಲ್ಲಿ ಈ ದುರಂತ ನಡೆದಿದೆ. ಆಟೋ ಚಾಲಕ ಕುಲ್ವಂತ್ ಪತ್ನಿಯನ್ನು ಕತ್ತು ಹಿಸುಕಿ
ರಷ್ಯಾ-ಉಕ್ರೇನ್ ಯುದ್ಧ ಶೀಘ್ರ ಕೊನೆ: ಟ್ರಂಪ್
ದೀರ್ಘಕಾಲದಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ನಡುವಿನ ಯುದ್ಧ ಶೀಘ್ರ ಕೊನೆಯಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಫ್ಲೋರಿಡಾದ ತನ್ನ ಖಾಸಗಿ ನಿವಾಸದಲ್ಲಿ ಟ್ರಂಪ್ ಮಹತ್ವದ ಸಭೆ ನಡೆಸಿದ ಬಳಿಕ ಈ ಹೇಳಿಕೆ
ನಾಯಿ ಕಚ್ಚಿದ್ದ ಎಮ್ಮೆ ಸಾವು: ಮೊಸರು ಸೇವಿಸಿದ್ದವರಿಗೆ ರೇಬೀಸ್ ಆತಂಕ
ನಾಯಿ ಕಚ್ಚಿದ್ದರಿಂದ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದ್ದ ಮೊಸರನ್ನು ಸೇವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ರೇಬೀಸ್ ಭೀತಿಯುಂಟಾಗಿದೆ. ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದಲ್ಲಿ ಡಿಸೆಂಬರ್ 23ರಂದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಊಟಕ್ಕೆ ಬಳಸಿದ್ದ ಮೊಸರನ್ನು ನಾಯಿ
ಆಂಧ್ರದಲ್ಲಿ ರೈಲಿನ ಎರಡು ಬೋಗಿ ಬೆಂಕಿಗಾಹುತಿ, ಒಬ್ಬರ ಸಾವು
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಯಲಮಂಚಿಲಿ ಬಳಿ ಟಾಟಾನಗರ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಏಸಿ ಬೋಗಿಗಳು ಮಧ್ಯರಾತ್ರಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಘಟನೆಯಲ್ಲಿ ವಿಜಯವಾಡ ನಿವಾಸಿ 70 ವರ್ಷದ ಚಂದ್ರಶೇಖರ್ ಸುಂದರಂ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು
ಆಂಧ್ರದ ಗಣಿಗಾರಿಕೆ ಪರ್ಮಿಟ್, ಕರ್ನಾಟಕ ಭೂ ಒತ್ತುವರಿ: ಜನಾರ್ದನ ರೆಡ್ಡಿ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಂಧ್ರದ ಗಣಿಗಾರಿಕೆ ಪರವಾನಗಿ ಪಡೆದುಕೊಂಡು ಕರ್ನಾಟಕದ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನಡೆಸಿದ ಸರ್ವೆಯಲ್ಲಿ ಈ ವಿಚಾರ ಬಯಲಾಗಿದೆ. ಹೀಗಾಗಿ ಜನಾದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಎದುರಾಗಿದೆ.
ಪ್ರೀತಿಸಿ ಲಿವ್ ಇನ್ ಟುಗೆದರ್ ಬಳಿಕ ಮದುವೆ: ಕೆಲವೇ ಗಂಟೆಗಳಲ್ಲಿ ವಿಚ್ಛೇದನ
ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಲಿವ್ ಇನ್ ಟುಗೆದರ್ ಬಳಿಕ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ವಿಚ್ಛೇದನ ಪಡೆದುಕೊಂಡ ಪ್ರಕರಣ ಪುಣೆಯಲ್ಲಿ ನಡೆದಿದೆ. ಮದುವೆ ಆಗಿ 24 ಗಂಟೆಯೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾದ ಕೂಡಲೇ
ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿದ ಬೆಂಗಳೂರು ಸ್ಟಾರ್ಟಪ್ ಕಂಪನಿ
ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿವೋಕ್ಸೆಲ್‌ಗ್ರಿಡ್ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿ, ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್ ಕಂಪನಿ 12 ವರ್ಷಗಳ ಶ್ರಮದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಕಂಪನಿಗೆ ಕೇಂದ್ರ ಸರ್ಕಾರ ಮತ್ತು ಝೋಹೋ ಸಂಸ್ಥೆ ನೆರವು ನೀಡಿವೆ.
ಚಲಿಸುತ್ತಿದ್ದ ಕಾರಿನಲ್ಲೇ ಸಿಇಒ ಸೇರಿ ಮೂವರಿಂದ ಮಹಿಳಾ ಮ್ಯಾನೇಜರ್ ಮೇಲೆ ಗ್ಯಾಂಗ್ ರೇಪ್
ಡ್ರಾಪ್ ನೆಪದಲ್ಲಿ ಕರೆದು ಚಲಿಸುತ್ತಿದ್ದ ಕಾರಿನಲ್ಲೇ ಕಂಪನಿ ಸಿಇಒ ಸೇರಿದಂತೆ ಮೂವರು ಮಹಿಳಾ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಪ್ರಕರಣ ರಾಜಸ್ಥಾನದ ಉದಯ್‌ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜಿಕೆಎಂ ಕಂಪನಿಯೂ ಮಹಿಳಾ ಸ್ನೇಹಿ ಮಾನದಂಡದ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್




