Tuesday, September 29, 2026
Menu

ಬಿಹಾರದಲ್ಲಿ 25,000 ರೂ.ಗೆ ಹುಡುಗೀರು ಸಿಗ್ತಾರೆ: ಉತ್ತರಾಖಂಡ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ತಂದಿಟ್ಟ ಸಚಿವೆ ರೇಖಾ ಆರ್ಯ ಪತಿ

ಉತ್ತರಾಖಂಡ ಬಿಜೆಪಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ದಾರ್‌ ಲಾಲ್‌ ಸಾಹು ನೀಡಿರುವ ಸ್ತ್ರೀವಿರೋಧಿ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅಲ್ಮೋರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವೆ ರೇಖಾ ಆರ್ಯ ಅವರ ಪತಿ ಸಾಹು ಮಾತನಾಡುತ್ತಾ, ನನ್ನೊಂದಿಗೆ ಬನ್ನಿ, ನಾನು ನಿಮಗೆ ಮದುವೆ ಮಾಡಿಸುತ್ತೇನೆ, ಬಿಹಾರದಲ್ಲಿ 20,000 ರಿಂದ 25,000 ರೂಪಾಯಿಗಳಿಗೆ ಹುಡುಗಿಯರು ಸಿಗುತ್ತಾರೆ ಎಂದು ಹೇಳಿದ್ದರು.ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಈಗಾಗಲೇ

ಇಂದೋರ್‌ ಕಲುಷಿತ ನೀರು: ಆರು ತಿಂಗಳ ಮಗು ಸೇರಿ ಮೃತರ ಸಂಖ್ಯೆ 10ಕ್ಕೆ ಏರಿಕೆ

ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಆರು ತಿಂಗಳ ಮಗುವೂ ಸೇರಿದೆ. 1400 ಜನ ಅಸ್ವಸ್ಥರಾಗಿದ್ದು, ಇಂದೋರ್‌ ಮಹಾನಗರ ಪಾಲಿಕೆಯ ಹಲವು ಅಧಿಕಾರಿಗಳನ್ನು ಮುಖ್ಯಮಂತ್ರಿ ಮೋಹನ ಯಾದವ್ ಅಮಾನತು ಮಾಡಿದ್ದಾರೆ. ಕುಡಿಯುವ ನೀರಿನ

ಅಶ್ಲೀಲ ಪೋಟೊ, ವೀಡಿಯೊ, ಕಂಟೆಂಟ್‌: ಎಕ್ಸ್‌ನ Grok AIಗೆ ಖಡಕ್‌ ಎಚ್ಚರಿಕೆಯೊಂದಿಗೆ ಕೇಂದ್ರ ನೋಟಿಸ್‌

ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಎಲಾನ್‌ ಮಸ್ಕ್‌ ನೇತೃತ್ವದ ಸಾಮಾಜಿಕ ಮಾಧ್ಯಮ ಎಕ್ಸ್‌ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ಎಕ್ಸ್‌ನ AI ಅಪ್ಲಿಕೇಶನ್ ಗ್ರೋಕ್‌ನಿಂದ ಶೇರ್‌ ಆಗುತ್ತಿರುವ

ಆಸ್ತಿಗಾಗಿ ಐಎಎಫ್ ನಿವೃತ್ತ ಉದ್ಯೋಗಿಯನ್ನು ಕೊಲೆ ಮಾಡಿಸಿದ ಪುತ್ರರು

ಉತ್ತರ ಪ್ರದೇಶದ ಘಾಜಿಯಾಬಾದ್​​ನ ಬಾಗ್‌ಪತ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ನಿವೃತ್ತ ಸಿಬ್ಬಂದಿಯೊಬ್ಬರನ್ನು ಅವರ ಮಕ್ಕಳೇ ಗುಂಡಿಕ್ಕಿ ಕೊಲೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ನಡೆದು ಐದು ದಿನಗಳ ನಂತರ ಹೊರ ಬಂದಿದೆ. ಆಸ್ತಿಗಾಗಿ ಮಕ್ಕಳು ಈ ಕೊಲೆ ಮಾಡಿಸಿರುವುದಾಗಿ ಪೊಲೀಸರು

ಮದುವೆ ಭರವಸೆಯಿತ್ತು ವೈದ್ಯನಿಂದ ಅತ್ಯಾಚಾರ: ಮದುವೆಯಾಗೆಂದರೆ ಖಾಸಗಿ ಪೋಟೊ ತೋರಿಸಿ ವಿದ್ಯಾರ್ಥಿನಿಗೆ ಬೆದರಿಕೆ

ಲಕ್ನೋದ KGMU ಸರ್ಕಾರಿ ವೈದ್ಯಕೀಯ ಸಂಸ್ಥೆಯ ವೈದ್ಯ ಮದುವೆಯಾಗುವುದಾಗಿ ನಂಬಿಸಿ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯೊಂದಿಗಿನ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿರುವುದಾಗಿ ಪ್ರಕರಣ ದಾಖಲಾಗಿದೆ. ವೈದ್ಯನ ಹಿನ್ನೆಲೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿ ಮೊಹ್ಮದ್‌ ಅದಿಲ್‌ನನ್ನು ಪತ್ತೆಹಚ್ಚಲು ಪ್ರಯತ್ನಗಳು

ಕೋಗಿಲು ಪ್ರಕರಣಕ್ಕೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲವೆಂದು ಪಿಣರಾಯಿ ಸಮರ್ಥನೆ

ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್‌ ನ್ಯಾಯ’ ಎಂದು ಟೀಕಿಸಿ, ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲ ಎನ್ನುವ ಮೂಲಕ

ಸ್ವಿಜರ್ಲೆಂಡ್ ನಲ್ಲಿ ಹೊಸ ವರ್ಷಾಚರಣೆ ವೇಳೆ ಬಾರ್ ನಲ್ಲಿ ಸ್ಫೋಟ: 40 ಮಂದಿ ದುರ್ಮರಣ

ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್‌ ನ ಬಾರ್‌ ನಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ ಕ್ರಾನ್ಸ್‌ ಮೊಂಟಾನಾ ಎಂಬಲ್ಲಿ ಸ್ಕೀ ರೆಸಾರ್ಟ್‌ (ಪರ್ವತಾರೋಹಿಗಳ ರೆಸಾರ್ಟ್)‌ ಲೇ ಕಾನ್ಸಲ್ಟೇಷನ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌

ಮನೆಯೊಳಗೆ ಆಭರಣ ವ್ಯಾಪಾರಿ ಮತ್ತು ಪತ್ನಿಗೆ ಗುಂಡಿಕ್ಕಿ ಹತ್ಯೆ

ಮಧ್ಯಪ್ರದೇಶದ ಮಂದ್ಸೌರ್​ನಲ್ಲಿ ಆಭರಣ ವ್ಯಾಪಾರಿ ಮತ್ತು ಪತ್ನಿಯನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವ್ಯವಹಾರದ ವಿವಾದವೇ ಈ ಕೊಲೆಗಳಿಗೆ ಕಾರಣ ಎನ್ನಲಾಗಿದೆ. ಅದೇ ಸ್ಥಳದಲ್ಲಿ ಮತತ್ತೊಬ್ಬ ವ್ಯಕ್ತಿ ವಿಕಾಸ್ ಎಂಬವವರ ಶವವೂ ಪತ್ತೆಯಾಗಿದೆ. ದಿಲೀಪ್ ಜೈನ್ ಮತ್ತು ಅವರ

ಬುರ್ಖಾ ಧರಿಸಿ ಲಿಪ್ಸ್ಟಿಕ್‌ ಹಚ್ಚಿ ಓಡಾಡುತ್ತಿದ್ದ ಬಾಲಕಿಯ ರೇಪಿಸ್ಟ್‌ ಪಿಸಿ ರಾಜೇಂದ್ರ ಸಿಸೋಡಿಯಾ ಅರೆಸ್ಟ್‌

ರಾಜಸ್ಥಾನದ ಧೋಲ್ಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಬುರ್ಖಾ ಧರಿಸಿ ಲಿಪ್ಸ್ಟಿಕ್‌ ಹಚ್ಚಿಕೊಂಡು ಮಹಿಳೆಯಂತೆ‌ ನಟಿಸುತ್ತ ತಪ್ಪಿಸಿಕೊಳ್ಳುತ್ತಿದ್ದ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ. ಧೋಲ್ಪುರದಲ್ಲಿ ಬಾಲಕಿ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ರಾಜೇಂದ್ರ ಸಿಸೋಡಿಯಾ ಎಂಬಾತ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಆತನನ್ನು

ಮಾಟ ಮಂತ್ರ ಮಾಡ್ತಾರೆಂದು ಗಂಡ ಹೆಂಡತಿಯ ಜೀವಂತ ಸುಟ್ಟ ಗ್ರಾಮಸ್ಥರು

ದಂಪತಿ ಮಾಟ ಮಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಗಂಡ ಹೆಂಡತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಹೃದಯವಿರಾವಕ ಘಟನೆ ಅಸ್ಸಾಂನ ರ್ಬಿ ಆಂಗ್ಲಾಂಗ್ ಜಿಲ್ಲೆಯ ಬೆಲೋಗುರಿ ಮುಂಡಾ ಗ್ರಾಮದಲ್ಲಿ  ನಡೆದಿದೆ. ಮುಂಡಾ ಗ್ರಾಮದಲ್ಲಿ ದಂಪತಿ ಮಾಟಮಂತ್ರದಲ್ಲಿ ತೊಡಗಿದ್ದಾರೆ, ಇದರಿಂದಾಗಿ ಊರಿನಲ್ಲಿ ಅನಾರೋಗ್ಯ ಉಂಟಾಗಿದೆ