Thursday, January 30, 2025
Menu

ಹೂಮಳೆ ಸುರಿಸದಿದ್ದರೆ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡ್ತಿದ್ದನಂತೆ ಈ ಬಿಸಿಎಂ ಅಧಿಕಾರಿ

ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ನಾನಾ ಕಡೆ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ ಬಳ್ಳಾರಿ ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ಮನೆಯೂ ಸೇರಿದೆ.

ಲೋಕಾಯುಕ್ತ ಪೊಲೀಸರು ಬಳ್ಳಾರಿಯ  ರಾಮಾಂಜನೇಯ ನಗರದಲ್ಲಿರುವ ಈ ಅಧಿಕಾರಿಯ ಮನೆ ಮೇಲೂ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವಾರ್ಡನ್‌ ಆಗಿ ನೇಮಕವಾಗಿದ್ದ ಲೋಕೇಶ್‌ ಈಗ ಬಿಸಿಎಂ ಅಧಿಕಾರಿಯಾಗಿದ್ದಾರೆ. ಲೋಕೇಶ್ ಸರ್ಕಾರಿ ಅಧಿಕಾರಿಯಾಗಿದ್ದರೂ ವರ್ಗಾವಣೆ ಮಾಡುವುದು, ಮಾಡಿಸುವುದೇ ಅವರ ಮುಖ್ಯ ಕೆಲಸವಾಗಿತ್ತು ಎಂಬ ಗಂಭೀರ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು.‌

ಲೋಕೇಶ್‌ ಹುಟ್ಟುಹಬ್ಬಕ್ಕೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಹೂವಿನ ಮಳೆ ಸುರಿಸಬೇಕಿತ್ತು, ಆ ಹೂಮಳೆಯ ಮಧ್ಯೆ ಅವರು ನಡೆದುಕೊಂಡು ಸಿನಿಮಾ ಹೀರೋ ಸ್ಟೈಲ್‌ನಲ್ಲಿ ನಗುತ್ತ ನಡೆದುಕೊಂಡು ಬರುವ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ. ಹೂ ಮಳೆ ಸುರಿಸದೇ ಇದ್ದರೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದರು. ಹಾಸ್ಟೆಲ್‌ಗಳ ಮಹಿಳಾ ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದರೂ ಎಂಬ ಗಂಭೀರ ಆರೋಪ ಈಗ ಕೇಳಿ ಬರುತ್ತಿದೆ.

Related Posts

Leave a Reply

Your email address will not be published. Required fields are marked *