Menu

ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿ

ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಬಂಡಾಯ ಘೋಷಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಭಿನ್ನಮತ ಘೋಷಿಸಿರುವ ಬಣದ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಯತ್ನಾಳ್, ಕೇಂದ್ರ ಸಚಿವ ವಿ.ಸೋಮಣ್ಣ ನಿವಾಸದಲ್ಲಿ

ಸ್ಟೀಲ್, ಅಲ್ಯೂಮಿನಿಯಂ ಆಮದು ಮೇಲೆ ಶೇ.25ರಷ್ಟು ತೆರಿಗೆ ವಿಧಿಸಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಒಂದರ ಮೇಲೋಂದರಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ ಸ್ಟೀಲ್ ಮತ್ತು ಅಲ್ಯೂಮಿನಿಯಂ ಆಮದು ಮೇಲೆ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹೇರಲು ಮುಂದಾಗಿದ್ದಾರೆ. ಭಾನುವಾರ ಏರ್ ಫೋರ್ಸ್ ನಲ್ಲಿ ಮಾಧ್ಯಮಗಳ ಜೊತೆ

ಕೈಗಾರಿಕೋದ್ಯಮಿ ತಾತನನ್ನು 73 ಬಾರಿ ಇರಿದು ಕೊಂದ ಮೊಮ್ಮಗ!

ಆಸ್ತಿ ವಿಷಯದಲ್ಲಿ ಉಂಟಾದ ಅಸಮಾಧಾನದಿಂದ ಮೊಮ್ಮಗ ಉದ್ಯಮಿ ತಾತನನ್ನು 73 ಬಾರಿ ಇರಿದು ಕೊಂದಿದ್ದೂ ಅಲ್ಲದೇ ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಹೈದರಬಾದ್ ನಲ್ಲಿ ನಡೆದಿದೆ. 460 ಕೋಟಿ ಮೌಲ್ಯದ ವೆಲ್ಜಾನ್ ಗ್ರೂಪ್ ಆಫ್ ಕಂಪನೀಸ್

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮರ್ಮು!

ರಾಷ್ಟ್ರಪತಿ ದ್ರೌಪದಿ ಮರ್ಮು ಸೋಮವಾರ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಗೆ ಸೋಮವಾರ ಬೆಳಿಗ್ಗೆ ಬಂದಿಳಿದ  ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ದ್ರೌಪದಿ ಮುರ್ಮು

ದಿಲ್ಲಿ ಹೊಸ ಸರಕಾರ ರಚನೆ ಕಸರತ್ತು: ಪಿಎಂ ಅಮೆರಿಕ ಪ್ರವಾಸ ಅಡ್ಡಿ!

ನವದೆಹಲಿ: ಚುನಾವಣೆ ಮುಗಿದು ಫಲಿತಾಂಶ ಹೊರಬಂದರೂ ಹೊಸ ಸರಕಾರದ ಅನಾವರಣಕ್ಕೆ ದಿಲ್ಲಿಯ ಜನ ಇನ್ನೂ ಒಂದು ವಾರ ಕಾಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ನಂತರವಷ್ಟೇ ಅಂದರೆ ಫೆಬ್ರವರಿ ೧೪ರ ನಂತರ ದೆಹಲಿಯ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ

ಮಹಾಕುಂಭ ಮೇಳದಲ್ಲಿ 300 ಕಿ.ಮೀ. ಟ್ರಾಫಿಕ್ ಜಾಮ್? 50 ಕಿ.ಮೀ. ಕ್ರಮಿಸಲು 12 ಗಂಟೆ!

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೌಡಾಯಿಸುತ್ತಿರುವುದರಿಂದ ನಿಗದಿತ ಸ್ಥಳ ತಲುಪಲು ಆಗದೇ ಪರದಾಡುವಂತಾಗಿದೆ. ಕುಂಭಮೇಳಕ್ಕೆ ದೇಶಾದ್ಯಂತ ಜನರು ಹರಿದು ಬರುತ್ತಿದ್ದಾರೆ. ವಿಮಾನ ದರ ಹೆಚ್ಚಳದಿಂದ ಬಹುತೇಕ ಮಂದಿ ಸ್ವಂತ ವಾಹನಗಳ ಮೂಲಕ

ವಿಶೇಷ ವ್ಯಾಲೆಂಟೈನ್ಸ್ ಡೇ: ಟಿಕೆಟ್ಸ್ ಮತ್ತು ಕಪಲ್ ಪಾಸಸ್ ಮೇಲೆ 35% ವರೆಗೆ ರಿಯಾಯಿತಿ

ಬೆಂಗಳೂರು: ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಚೈನ್ ಆದ ವಂಡರ್ಲಾ ಹಾಲಿಡೇಸ್ ಲಿ., ಈ ಫೆಬ್ರವರಿಯಲ್ಲಿ ಬೆಂಗಳೂರು ಪಾರ್ಕ್‌ನಲ್ಲಿ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳು ಹಾಗೂ ಆಚರಣೆಗಳನ್ನು ಘೋಷಿಸಲು ಉತ್ಸುಕಗೊಂಡಿದೆ! ಕಪಲ್(ಜೋಡಿ)ಗಳಿಗೆ, ವಂಡರ್ಲಾ ಬೆಂಗಳೂರು, ಫೆಬ್ರವರಿ 7ರಿಂದ 14ವರೆಗೆ ಅತ್ಯಂತ ನಿರೀಕ್ಷೆಯ

ದೆಹಲಿ: ಬಿಜೆಪಿ ಗೆಲುವಿನ ಹಿಂದೆ ಆರ್ ಆರ್ ಎಸ್ ಶ್ರಮ!

ನವದೆಹಲಿ: ದಶಕದ ನಿರಾಡಳಿತದ ವಿರುದ್ಧ ದಿಲ್ಲಿಯ ಮತದಾರ ನಿರ್ಣಾಯಕ ಮತ ಹಾಕಿಕ ಕಾರಣ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ. ಆದರೆ ಚುನಾವಣಾ ಅಖಾಡಾದಲ್ಲಿ ಅಂತಹ ವಾತಾವರಣ ಮೂಡಿಸುವಲ್ಲಿ ಆರ್‌ಎಸ್‌ಎಸ್ ನಡೆಸಿದ ಪಾತ್ರದ ಬಗ್ಗೆ ಹೊಸ ವಿಚಾರಗಳು ಬಯಲಾಗುತ್ತಿದೆ. ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ

ಪೊಲೀಸ್ ಗುಂಡಿಗೆ 31 ನಕ್ಸಲರು ಹತ: 10 ದಿನದಲ್ಲಿ 50 ನಕ್ಸಲರು ಬಲಿ

ಛತ್ತೀಸ್‌ಗಢ: ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‌ನಲ್ಲಿ ಬಸ್ತಾರ್ ವಿಭಾಗದ ಬಿಜಾಪುರದಲ್ಲಿ 31 ನಕ್ಸಲರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಕೂಡಾ ಹುತಾತ್ಮರಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ಹಿರಿಯ ಪೊಲೀಸ್

ಮೆಟ್ರೋ ರೈಲು ಟಿಕೆಟ್ ದರ ಏರಿಕೆ: ಸಾರ್ವಜನಿಕರ ಆಕ್ರೋಶ

ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರು ಕೂಡ ಸರ್ಕಾರದ ಈ ಕ್ರಮವನ್ನು ಟೀಕಿಸಿದ್ದಾರೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ