Menu

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್!

ಯೂಟ್ಯೂಬರ್ ಧನರಾಜ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-11 ಮನೆಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಕನ್ನಡ ಮೂಲದ ಧನರಾಜ್ ಭಾನುವಾರ ನಡೆದ ಸೂಪರ್ ಸಂಡೇಯಲ್ಲಿ ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಫಿನಾಲೆ ವಾರ ಪ್ರವೇಶಿಸುವಲ್ಲಿ ವಿಫಲವಾಗಿದ್ದಾರೆ. ಧನರಾಜ್ ಟಾಸ್ಕ್ ವೇಳೆ ಮಾಡಿದ ಎಡವಟ್ಟಿನಿಂದ ಕಳೆದ ವಾರ ಮಿಡ್ ವೀಕ್ ಎಲಿಮಿನೇಷನ್ ರದ್ದುಗೊಳಿಸಲಾಗಿತ್ತು. ಅಲ್ಲದೇ ವೋಟಿಂಗ್ ಕೂಡ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಶನಿವಾರ ನಡೆದ ರದ್ದುಗೊಂಡಿದ್ದ

ಉದಯಕಾಲ ಸಿಇಓ ಡಿಬಿ ಬಸವರಾಜ್ ಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ ಪ್ರದಾನ

ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರದಂದು ಉದಯಕಾಲ ಪತ್ರಿಕೆಯ ಸಿಇಓ ಡಿ.ಬಿ. ಬಸವರಾಜ್ ಸರ್ ಇವರಿಗೆ ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ ಪ್ರದಾನ

ಕಾನ್ಪುರದ ವ್ಯಕ್ತಿ ನಮ್ಮ ಮೆಟ್ರೊ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ

ನಮ್ಮ ಮೆಟ್ರೋದ ಜಾಲಹಳ್ಳಿ ನಿಲ್ದಾಣದಲ್ಲಿ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಜಾಲಹಳ್ಳಿಯಲ್ಲಿ ಸ್ವಂತ ಫ್ಲ್ಯಾಟ್​​ನಲ್ಲಿ ವಾಸವಾಗಿರುವ ಕಾನ್ಪುರ ಮೂಲದ ಅನಿಲ್ ಕುಮಾರ್ ಪಾಂಡೆ (49) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಫ್ಲಾಟ್​ಫಾರಂಗೆ ಜಿಗಿದ

ಹೊನ್ನಾವರದಲ್ಲಿ  ಗರ್ಭ ಧರಿಸಿದ್ದ ಹಸು ಕಡಿದ ದುಷ್ಕರ್ಮಿಗಳು: ಸರ್ಕಾರದ ವಿರುದ್ಧ ಆರ್‌. ಅಶೋಕ್‌ ವಾಗ್ದಾಳಿ

ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕತ್ತರಿಸಿದ ಅಮಾನುಷ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಈಗ ಮತ್ತೊಂದು ಹೇಯ ಕೃತ್ಯ ನಡೆದಿದ್ದು, ಹೊನ್ನಾವರದ ಸಾಲ್ಕೋಡ ಗ್ರಾಮದಲ್ಲಿ ಗಬ್ಬದ ಆಕಳು ಕಡಿದು ಕರು ತೆಗೆದು ಬಿಸಾಡಿ ಮಾಂಸ ಹೂತ್ತೊಯ್ಯುವ ಮೂಲಕ ಕಿಡಿಗೇಡಿಗಳು ಮತ್ತೊಮ್ಮೆ ಕ್ರೌರ್ಯ ಮೆರೆದಿದ್ದಾರೆ ಎಂದು

ನೆಲಮಂಗಲದಲ್ಲಿ ಕಾರು ಲಾರಿಯಡಿ ನಜ್ಜುಗುಜ್ಜಾದ್ರೂ ಪವಾಡವೆಂಬಂತೆ ಚಾಲಕ ಪಾರು

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ-48ರ ಗುಂಡೇನಹಳ್ಳಿ ಬಳಿ ಸೋಮವಾರ ಬೆಳಗ್ಗೆ ನಡೆದ ಸರಣಿ ಅಪಘಾತದಲ್ಲಿ ಕಾರು ಚಾಲಕರೊಬ್ಬರು ಪವಾಡ ಸದೃಶವೆಂಬಂತೆ ಅಪಾಯದಿಂದ ಪಾರಾಗಿದ್ದಾರೆ. ಕಾರು ಲಾರಿ ಕೆಳಗೆ ಸಿಲುಕಿ ನಜ್ಜುಗುಜ್ಜಾದರೂ ತುಮಕೂರು ಜಿಲ್ಲೆಯ ಸೇಲ್ಸ್ ಟ್ಯಾಕ್ಸ್ ಕಚೇರಿಯ ಕಾರು ಚಾಲಕನಿಗೆ ಸಣ್ಣ ಪುಟ್ಟ

ಆಸ್ತಿಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್: ಇಂದು ಶ್ರೀರಂಗಪಟ್ಟಣ ಬಂದ್‌

ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ಎಂದು ನಮೂದಾಗಿದ್ದು, ಇದನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಇಂದು (ಸೋಮವಾರ) ಶ್ರೀರಂಗಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸಿವೆ. ಕೆಲವು ತೆರೆದಿದ್ದ ಅಂಗಡಿಗಳನ್ನು

ಮಗನ ಆತ್ಮಹತ್ಯೆ ಸುದ್ದಿ ಕೇಳಿದ ತಾಯಿ ಹೃದಯಾಘಾತಕ್ಕೆ ಬಲಿ

ಮಗನ ಸಾವಿನ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಅಸು ನೀಗಿರುವ ಪ್ರಕರಣ ಗ್ವಾಲಿಯರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು  ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 33 ವರ್ಷದ ಎಂಜಿನಿಯರಿಂಗ್ ಪದವೀಧರ ಮನೀಶ್ ನೌಕರಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ

ಫೆ.14ರಂದು ರೈತರ ಬೇಡಿಕೆ ಚರ್ಚೆಗೆ ಕೇಂದ್ರ ಒಪ್ಪಿಗೆ

ಕೇಂದ್ರ ಸರ್ಕಾರ ಫೆಬ್ರವರಿ 14ರಂದು ಚಂಡೀಗಢದಲ್ಲಿ ಪಂಜಾಬ್ ಪ್ರತಿಭಟನಾ ನಿರತ  ರೈತರೊಂದಿಗೆ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಿದೆ.  ಸಭೆಯ ಘೋಷಣೆಯ ನಂತರ, ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು  ಉಪವಾಸವು  ೫೪ನೇ ದಿನಕ್ಕೆ ಪ್ರವೇಶಿಸಿದಾಗ ವೈದ್ಯಕೀಯ ನೆರವು

ಖೊ-ಖೊ ವಿಶ್ವಕಪ್ : ನೇಪಾಳ ಮಣಿಸಿ ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಸಿಎಂ ಅಭಿನಂದನೆ

ಮೊಟ್ಟಮೊದಲ ಖೊ – ಖೊ ವಿಶ್ವಕಪ್ ಪಂದ್ಯದಲ್ಲಿ  ನೇಪಾಳವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ಖೊ-ಖೊ ತಂಡಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಚೊಚ್ಚಲ ಖೊ-ಖೊ ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ

ಅಪಘಾತದಲ್ಲಿ  ಮನು ಭಾಕರ್  ಅಜ್ಜಿ, ಚಿಕ್ಕಪ್ಪ ಸಾವು

ಹರಿಯಾಣಾದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಸ್ಕೂಟರ್‌ಗೆ  ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಶೂಟರ್ ಮನು ಭಾಕರ್ ಕುಟುಂಬಸ್ಥರು ಮೃತರಾಗಿದ್ದಾರೆ. ಮನು ಭಾಕರ್ ಅವರ ಚಿಕ್ಕಪ್ಪ ಯುಧ್ವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಮೃತಪಟ್ಟವರು. ಯುಧವೀರ್