ಮದ್ದೂರಿನಲ್ಲಿ ಆಸ್ತಿಗಾಗಿ ಅಣ್ಣನ ಕೊಲೆ ಮಾಡಿಸಿ ಕುಂಭ ಮೇಳಕ್ಕೆ ತೆರಳಿದ್ದಾತ ಅರೆಸ್ಟ್
ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ಜಮೀನಿನಲ್ಲಿ ಫೆಬ್ರವರಿ 11 ರಂದು ರೈತ ಕೃಷ್ಣೇಗೌಡ (45) ಎಂಬ ಹತ್ಯೆ ನಡೆದಿತ್ತು, ತನಿಖೆ ಆರಂಭಿಸಿದ ಪೊಲೀಸರು ಆಸ್ತಿಗಾಗಿ ಮೃತ ಕೃಷ್ಣೇಗೌಡನ ಸಹೋದರನೇ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದಾಗಿ ಖಚಿತಪಡಿಸಿದ್ದಾರೆ. ಮನೆಯಿಂದ ಜಮೀನನ ಬಳಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ಕೃಷ್ಣೇಗೌಡರನ್ನು ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ಬಂದಿದ್ದ ಸ್ಥಳೀಯರ ಮೇಲೂ ಲಾಂಗ್ ಬೀಸಿದ್ದರು. ಕೆಎಂ ದೊಡ್ಡಿ ಠಾಣೆ ಪೊಲೀಸರು ಕೊಲೆ
ಬುರ್ಖಾ ಹಾಕಿಕೊಂಡು ಹೋಗಿ ಗಲಾಟೆ ಮಾಡಿರುವ ವೀಡಿಯೊವಿದೆ ಎಂದ ಬಿಕೆ ಹರಿಪ್ರಸಾದ್
ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡಲು ಹೋಗುತ್ತಾರೆ, ಇದೇನು ಹೊಸದಲ್ಲ, ನನ್ನ ಬಳಿ ವೀಡಿಯೊ ಇದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರೆಸ್ಸೆಸ್‌ಗೆ ನೂರು ವರ್ಷ ತುಂಬುತ್ತಿದೆ.
ಪಂಜಾಬ್‌ನಿಂದ ಕುರುಬೂರು ಶಾಂತಕುಮಾರ್ ಬೆಂಗಳೂರಿಗೆ ಏರ್‌ಲಿಫ್ಟ್
ಪಟಿಯಾಲ ಬಳಿ ಶುಕ್ರವಾರ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ
ಶಿವಮೊಗ್ಗ ಖಾಸಗಿ ಆಸ್ಪತೆಯಲ್ಲಿ ಬಾಣಂತಿ ಸಾವು
ರಾಜ್ಯದಲ್ಲಿ ಸರ್ಕಾರಿ ಖಾಸಗಿ ಎಂಬ ವ್ಯತ್ಯಾವಿಲ್ಲದೆ ಆಸ್ಪತ್ರೆಗಳಲ್ಲಿ ಬಾಣಂತಿಯ ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಮುಂದುವರಿದಿದ್ದು, ಜನರಲ್ಲಿ ಆತಂಕವುಂಟಾಗಿದೆ. ಕಳೆದ 6 ದಿನಗಳ ಹಿಂದೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾಳೂರು
ಮತ್ತೆ ಕಾಂಗ್ರೆಸ್ ಕೈ ಹಿಡಿದ ಎಲ್.ಆರ್ ಶಿವರಾಮೇಗೌಡ
ಮಾಜಿ ಸಂಸದ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಗೆ ಸೇರಿದರು. ಕೆಪಿಸಿಸಿ ಅಧ್ಯಕ್ಷ
ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದೆ: ಬೊಮ್ಮಾಯಿ
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಎಲ್ಲದರ ಏರಿಕೆ ಮಾಡುತ್ತಿದೆ. ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದೆ. ಮುಖ್ಯಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ
ಮನುಷ್ಯರೆಲ್ಲ ಕಳೆದು ಹೋಗಿ ಧರ್ಮ-ಜಾತಿಗಳು ಜೀವ ಪಡೆದಿವೆ
ನಿಸ್ವಾರ್ಥದಿಂದ ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್‌ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು
ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್‌ಡಿಡಿಗೆ ಸರ್ಕಾರ ಸಂಪೂರ್ಣ ಬೆಂಬಲ: ಸಿಎಂ
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ ಎಂದು
ಹದ ತಪ್ಪಿದ ಭಕ್ತಿಯ ಸೀಮೆ: ಜಲಮೂಲದ ಮೇಲೆ ವಿನಾಶಕ ಕ್ರೌರ್ಯ
ದೇವರು-ಧರ್ಮ ಆವರಣದ ಪರಿಧಿಯೊಳಗೆ ಬಂಧಿಯಾಗಿರುವ ಸಮುದಾಯದ ಮನಸ್ಥಿತಿ ಪೋಷಿಸುವ ಹಾಗೂ ನಿಯಂತ್ರಿಸುವ ಬಹುಮುಖ್ಯ ಉಪಕರಣವೆಂದರೆ ಪುರಾಣ. ವೈಜ್ಞಾನಿಕ ಆಧಾರವಿಲ್ಲದೆಯೇ ಪ್ರಭಾವ ಬೀರುವುದರಲ್ಲಿ ನಿಸ್ಸೀಮ ಕಲ್ಪಕತೆ ಸೃಷ್ಟಿಸಿ, ಆ ಮೂಲಕ ತನ್ನ ವರ್ಚಸ್ಸನ್ನು ಉಳ್ಳವರಿಂದ ದತ್ತವಾಗಿ ಪಡೆದುಕೊಂಡಿದೆ. ಪುರಾಣ ಪ್ರಪಂಚವೊಂದು ವಾಸ್ತವ ಸನ್ನಿವೇಶದಲ್ಲಿ
ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಪ್ರಯಾಣಿಕರ ಸಾವು
ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಾಲ್ತುಳಿತ ಸಂಭವಿಸಿ 18 ಪ್ರಯಾಣಿಕರು ಅಸು ನೀಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಜನರು ಮಹಾಕುಂಭಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಹೆಚ್ಚಿನ ಜನಸಂದಣಿ ಸೇರಿದ್ದ ಕಾರಣ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಯಿತು




