ನೌಕಾನೆಲೆ ಮಾಹಿತಿ ಪಾಕ್ ಗೆ ರವಾನೆ: ಕಾರವಾರದ ಇಬ್ಬರ ಬಂಧನ
ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ ತಾಂಡೇಲ ಬಂಧಿತ ಆರೋಪಿಗಳಾಗಿದ್ದಾರೆ. ಸೋಮವಾರವೇ ಕಾರವಾರದಲ್ಲಿ ಬೀಡು ಬಿಟ್ಟಿದ್ದ ಹೈದರಾಬಾದಿನಿಂದ ಬಂದ ಎನ್ಐಎ ಅಧಿಕಾರಿಗಳ ತಂಡವು ರಾತ್ರಿಯವರೆಗೂ ನಗರ ಪೊಲೀಸ್ ಠಾಣೆಯಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಕಾರವಾರದಲ್ಲಿಯೇ ತಂಗಿದ್ದ ಅವರು ಮಂಗಳವಾರ
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುತ್ತೇವೆ: ಸಚಿವ ಕೆಎಚ್ ಮುನಿಯಪ್ಪ ಘೋಷಣೆ
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಹಣದ ಬದಲು ಪೂರ್ಣ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಲಿ ಅವರು, ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಫೆಬ್ರವರಿ ತಿಂಗಳಿನಿಂದಲೇ 5
ಸೌದಿಯಲ್ಲಿ ಗುಡುಗು ಸಹಿತ ಮಳೆ, ಪ್ರವಾಹದ ಎಚ್ಚರಿಕೆ
ಮರು ಭೂಮಿ ಸೌದಿ ಅರೇಬಿಯಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಮೆಕ್ಕಾ, ರಿಯಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಪ್ರವಾಹದ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಪ್ರಯಾಣಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರ್ಯಾಗಿಂಗ್ ಮಾಡಿದ್ದ ಕೇರಳದ 7 ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತು!
ಐದು ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿ ಕಿರುಕುಳ ನೀಡಿದ್ದ ಕೇರಳದ ತಿರುವನಂತಪುರಂ ಸರ್ಕರಿ ನರ್ಸಿಂಗ್ ಕಾಲೇಜಿನ 7 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ 7 ಹಿರಿಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ
ಬುದ್ದಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ!
ಬುದ್ದಿವಾದ ಹೇಳಿದ ತಂದೆಯನ್ನೇ ಚಾಕುವಿನಿಂದ ಇರಿದು ಪಾಪಿ ಮಗ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಡರಹಳ್ಳಿಯ ತಿಗಳರಪಾಳ್ಯದ ಕೆರೆಯ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಚನ್ನಬಸಪ್ಪ (61) ಅವರನ್ನು ಮಗ ಅಮಿತ್ [21]
ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚಿಸಿದ ಚಿನ್ನ ಬಾಗಲಗುಂಟೆಯಲ್ಲಿ
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ, ಶ್ವೇತಾಗೌಡ ವಂಚಿಸಿ ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣ ಎಲ್ಲಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಮಾಜಿ ಸಚಿವ
ಸಚಿವ ಜಾರ್ಜ್ ವಿರುದ್ಧ ಹರಿ ಹಾಯ್ದ ಆರ್. ಅಶೋಕ್
ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ತಿಂಗಳ ಸಂಬಳ ಅಲ್ವಲ್ಲ ಅಂತ ಹೇಳಿದ್ದೀರಲ್ಲಾ, ಇದೇನಾ ಮತದಾರರಿಗೆ ನೀವು ಕೊಡುವ ಗೌರವ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸಚಿವ ಟಿ.ಜಾರ್ಜ್ ವಿರುದ್ಧ ಹರಿಹಾಯ್ದಿದ್ದಾರೆ. ಗೃಹಲಕ್ಷ್ಮಿ ಹಣ ಕೊಡಿ, ಅನ್ನಭಾಗ್ಯದ ಹಣ ಕೊಡಿ ಅಂತ
ನಾನಾ ಆಮಿಷವೊಡ್ಡಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮಾಜಿ ಪಿಡಿಒ ಬೆಂಗಳೂರು ಪೊಲೀಸ್ ಬಲೆಗೆ
ಸರ್ಕಾರಿ ಕೆಲಸ ಕೊಡಿಸುವ ಆಮಿಷ, ಚಿನ್ನದ ಉದ್ಯಮ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಮತ್ತಿತರ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಂಚಕನನ್ನು ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಣ ಕಳವು ಪ್ರಶ್ನಿಸಿದ್ದಕ್ಕೆ ಬೆಂಕಿ ಹಚ್ಚಿ ತಂದೆಯನ್ನು ಜೀವಂತ ಸುಟ್ಟ ಮಗ
ಫರೀದಾಬಾದ್‌ನ ಅಜಯ್‌ನಗರದಲ್ಲಿ ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನೊಬ್ಬ ಬೆಂಕಿ ಹಚ್ಚಿ ತಂದೆಯನ್ನೇ ಜೀವಂತ ಸುಟ್ಟು ಹಾಕಿದ್ದಾನೆ. ಮುಹಮ್ಮದ್ ಅಲೀಮ್ ಮಗನಿಂದ ಬೆಂಕಿಗಾಹುತಿಯಾದವರು. ತನ್ನ ಜೇಬಿನಿಂದ ಹಣ ಕದ್ದಿರುವುದಕ್ಕೆ ಗದರಿಸಿದ್ದಕ್ಕಾಗಿ 14 ವರ್ಷದ ಮಗ ತಂದೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ತೆಯ ಸಾಯಿಸಲು ಮಾತ್ರೆ ಕೇಳಿದ ಮಹಿಳೆ: ಪೊಲೀಸ್‌ಗೆ ಮಾಹಿತಿ ನೀಡಿದ ವೈದ್ಯ
ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ವೈದ್ಯರೊಬ್ಬರಲ್ಲಿ ಮಹಿಳೆಯು ಅತ್ತೆಯನ್ನು ಕೊಲ್ಲಲು ಮಾತ್ರೆ ಕೇಳಿರುವುದು ವರದಿಯಾಗಿದೆ. ಮಹಿಳೆಯು, ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದಕ್ಕೆ ವೈದ್ಯರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರನ್ನು ಮಹಿಳೆಯೊಬ್ಬರು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ.




