ಕುಂಭ ಮೇಳದ ದುರಂತ ಪ್ರಸ್ತಾಪಿಸದ ಪ್ರಧಾನಿ ಮೋದಿ: ಪ್ರತಿಪಕ್ಷಗಳ ಆಕ್ರೋಶಕ್ಕೆ ಕಲಾಪ ಬಲಿ
ನವದೆಹಲಿ: ಮಹಾಕುಂಭದಲ್ಲಿ ಸಂಭವಿಸಿದ ದುರಂತಗಳನ್ನು ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮಹಾಕುಂಭದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದುನಿಂತು ಪ್ರತಿಭಟನೆಗೆ ಮುಂದಾದರು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳ ಕುರಿತು ಸೇರಿಸಬೇಕೆಂದು ಒತ್ತಾಯಿಸಿದರು. ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಮೊದಲಿಗೆ ಮಧ್ಯಾಹ್ನ
ಪುರುಷರಿಗೆ ಉಚಿತ ಎಣ್ಣೆ ಗ್ಯಾರಂಟಿ ಕೊಡಿ: ಜೆಡಿಎಸ್ ಶಾಸಕನ ಮನವಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಕರ್ನಾಟಕದ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಗಂಡಸರಿಗೆ ವಾರಕ್ಕೆ 2 ಬಾಟಲ್ ಮದ್ಯ ನೀಡಬೇಕು ಎಂದು ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಂಚಿಕೆ ಕುರಿತು ಮಾತನಾಡಿದ ಮಾತಾಡಿದ ಜೆಡಿಎಸ್ ಶಾಸಕ
ಎಪಿಕ್ ನಕಲು ಗುರುತಿಗೆ ಆಪ್: ಚುನಾವಣಾ ಆಯೋಗದ ನಿರ್ಧಾರ
ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಿರಂತರ ಪ್ರಯತ್ನದ ಫಲವಾಗಿ ನಕಲಿ ಎಪಿಕ್ ಸಂಖ್ಯೆಗಳ ಸಮಸ್ಯೆಯನ್ನು ಗುರುತಿಸಲು ಚುನಾವಣಾ ಆಯೋಗ ಮುಂದಾಗಿದೆ. ನಕಲಿ ಎಪಿಕ್ ಸಂಖ್ಯೆಗಳನ್ನು ಪತ್ತೆಹಚ್ಚಲು ಚುನಾವಣಾ ಆಯೋಗವು ತನ್ನ ಆಪ್‌ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಲು ನಿರ್ಧರಿಸಿದೆ ಎಂದು
ಪ್ರಿಯಕರ ಜೊತೆಗೂಡಿ ಗಂಡನ ಕೊಂದು ಡ್ರಮ್ ನಲ್ಲಿ ಶವ ಇರಿಸಿ ಸೀಮೆಂಟ್ ತುಂಬಿದ ಪತ್ನಿ!
ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ. ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ಪತಿ.
ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಲೂಪ್
ಚೆನ್ನೈ: ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಹೈಪರ್‌ಲೋಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಐಐಟಿ ಮದ್ರಾಸ್ ಮಾಡುತ್ತಿದೆ. ಹೈಪರ್ಲೂಪ್‌ನ ವಾಣಿಜ್ಯ ಕಾರ್ಯಾಚರಣೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸಲಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವೀಜಿನಾಥನ್ ಕಾಮಕೋಟಿ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯ
ಬೆಂಗಳೂರು ದಕ್ಷಿಣ ಹೆಸರು ಮರನಾಮಕರಣ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ
ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕನಸಿಗೆ ಕೇಂದ್ರ ತಣ್ಣೀರು ಎರಚಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ
ಬೆಳಗಾವಿಯಲ್ಲಿ ಬಸ್ ಕಳ್ಳಿಯರ ಗ್ಯಾಂಗ್ ಸೆರೆ, ಚಿನ್ನಾಭರಣ ವಶ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಸರ್ಕಾರಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವುದನ್ನೇ ದಾಳ ಮಾಡಿಕೊಂಡು ಬಸ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ
ಹಾಸನದಲ್ಲಿ ಹಾವನ್ನು ಕೊಂದು ಮಾಲೀಕನ ಜೀವವುಳಿಸಿ ಪ್ರಾಣ ತೆತ್ತ ನಾಯಿ
ಹಾಸನ ತಾಲೂಕಿನ ಕಟ್ಟಾಯ ಗ್ರಾಮದಲ್ಲಿ ಸಾಕು ನಾಯಿಯೊಂದು ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ಪ್ರಾಣವನ್ನೇ ಪಣಕಿಟ್ಟು ಅಸು ನೀಗಿದೆ. ಸರ್ಪದ ಜತೆ ಕಾದಾಡಿದ ಪಿಟ್‌ಬುಲ್ ನಾಯಿಯ ಮುಖಕ್ಕೆ ಸರ್ಪ ಕಚ್ಚಿದ್ದರಿಂದ ಪ್ರಾಣ ಕಳೆದುಕೊಂಡಿದೆ. ಶಮಂತ್ ಎಂಬವರು ತೋಟದಲ್ಲಿ ಪಿಟ್‌ಬುಲ್
ಬೆಂಗಳೂರಿನಲ್ಲಿ ಕಾವೇರಿ ಆರತಿ ಪ್ರಶ್ನಿಸಿ ಹೈಕೋರ್ಟ್ಗೆ ಮಧ್ಯಂತರ ಅರ್ಜಿ
ಬೆಂಗಳೂರು ನಗರದ ಸ್ಯಾಂಕಿ ಟ್ಯಾಂಕ್ನ ಬಫರ್ ಝೋನ್ನಲ್ಲಿ ರಾಜ್ಯ ಸರ್ಕಾರ ಮಾರ್ಚ್ 21ರಂದು ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಕಾವೇರಿ ಆರತಿ ಸಂಬಂಧ ಬೆಂಗಳೂರು ಜಲ ಮಂಡಳಿಯ ಅಧಿಕಾರಿಗಳು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಸಂಬಂಧ ಮಾಧ್ಯಮಗಳಲ್ಲಿ
ಅತ್ತಿಬೆಲೆಯಲ್ಲಿ ವಿವಾಹೇತರ ಸಂಬಂಧ ಶಂಕೆಯಿಂದ ಪತ್ನಿಯ ಕೊಲೆ
ಆನೇಕಲ್‌ನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಚಾಮಾನಹಳ್ಳಿಯಲ್ಲಿ ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಹಿಟ್ಟಿನ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ. ಅನಿತಾ(27) ಕೊಲೆಯಾದ ಮಹಿಳೆ. ರಾಚಮಾನಹಳ್ಳಿಯ ವಾಸಿ ಬಾಬು(32) ಕೊಲೆ ಆರೋಪಿ. ಆರೋಪಿಗೆ ಇಬ್ಬರು ಪತ್ನಿಯರು, ನಾಲ್ಕು ಜನ ಮಕ್ಕಳಿದ್ದಾರೆ.




