ಖ್ಯಾತ ನಿರ್ದೇಶಕ ಎಟಿ ರಘು ಇನ್ನಿಲ್ಲ
ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾ ನಿರ್ದೇಶನ ಮಾಡಿದ್ದ ಬರಹಗಾರ, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳ್ತಿದ್ದ ಎಟಿ ರಘು (76) ಅನಾರೋಗ್ಯದಿಂದ ನಿಧನರಾದರು. ಅಂಬರೀಶ್ ಅವರಿಗೆ 27 ಸಿನಿಮಾಗಳನ್ನು ರಘು ನಿರ್ದೇಶನ ಮಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಆರ್ ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದ್ದು, ಮಧ್ಯಾಹ್ನ 2 ರಿಂದ 3 ಘಂಟೆ ಒಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಎಟಿ
ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಹನಿಟ್ರ್ಯಾಪ್: ಉನ್ನತಮಟ್ಟದ ತನಿಖೆಗೆ ಪರಮೇಶ್ವರ್ ಒಪ್ಪಿಗೆ
ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ನಡೆಸಿರುವ ಪ್ರಯತ್ನ ಬುಧವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿಯ ಸುನೀಲ್ ಕುಮಾರ್ ‘ ವಿರೋಧಿಗಳನ್ನು ಹತ್ತಿಕ್ಕಲು ಈ
ಬೆಂಗಳೂರಿನಲ್ಲಿ ಮಧ್ಯರಾತ್ರಿ 1ರವರೆಗೆ ಪಬ್ ತೆರೆಯಲು ಚರ್ಚೆ ನಡೆಸಿ ಕ್ರಮ: ಡಿಕೆ ಶಿವಕುಮಾರ್
ಬೆಂಗಳೂರು: ಅಂತಾರಾಷ್ಟ್ರೀಯ ನಗರವಾಗಿರುವ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆವರೆಗೆ ಪಬ್ ತೆರೆಯುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ ಶಿವಕುಮಾರ್ ವಿಧಾನಪರಿಷತ್ ಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹೆಚ್. ಎಸ್ ಗೋಪಿನಾಥ್
ಮಾ.29ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ!
ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣವೂ ಇದೇ ತಿಂಗಳ 29ರಂದು ಸಂಭವಿಸಲಿದೆ. ಸಂಜೆ 4.50 ಗ್ರಹಣ ಗೋಚರಿಸಿ ಬೆಳಗ್ಗೆ 8.43 ರವರೆಗೂ ಮುಂದುವರೆಯಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಯುರೋಪ್, ದಕ್ಷಿಣ, ಉತ್ತರ ಆಫ್ರಿಕಾ, ಅಟ್ಲಾಂಟಿಕ್ ಮತ್ತು ಅರ್ಕಟಿಕ್,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025ಕ್ಕೆ ಅಂಗೀಕಾರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2025”ಕ್ಕೆ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧೇಯಕವನ್ನು ಗುರುವಾರದಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಂತರ ಮಾತನಾಡಿದರು. “ಬೆಂಗಳೂರು ನಗರದ ಖಾಸಗಿ ಬಡಾವಣೆಗಳಲ್ಲಿ ರಸ್ತೆಗಳನ್ನು ಮಾಡಲಾಗಿದೆ. ಆ ರಸ್ತೆಗಳನ್ನು ನಾವು
900 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ವರ್ತುಲ ರಸ್ತೆ ಯೋಜನೆಗೆ ಕೇಂದ್ರದ ಸಮ್ಮತಿ
ನವದೆಹಲಿ: ಮಂಡ್ಯ ನಗರ ವರ್ತುಲ ರಸ್ತೆಯನ್ನು ಅದಷ್ಟು ಬೇಗ ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸಂಸತ್ ಭವನದಲ್ಲಿರುವ ಗಡ್ಕರಿ ಅವರ ನಿವಾಸಕ್ಕೆ
ಕೃಷ್ಣ ಮೇಲ್ದಂಡೆ 3ನೇ ಹಂತ ಜಾರಿಗೆ 87,818 ಸಾವಿರ ಕೋಟಿ ರೂ. ಬೇಕು: ಡಿಕೆ ಶಿವಕುಮಾರ್
ಬೆಂಗಳೂರು: ಬೊಮ್ಮಾಯಿ ಸರ್ಕಾರದ ವೇಳೆ ಮಾಡಿದ ಹಳೆಯ ಲೆಕ್ಕಗಳನ್ನು ತೆಗೆದುಕೊಂಡರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಜಾರಿಗೆ ಅಂದಾಜು ರೂ.87,818 ಸಾವಿರ ಕೋಟಿ ಹಣ ಬೇಕಾಗುತ್ತದೆ. ಪ್ರಸ್ತುತ ಪರಿಷ್ಕರಣೆ ಮಾಡಿದರೆ ವೆಚ್ಚ ಇನ್ನೂ ಹೆಚ್ಚಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ 58 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ
ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಇದು ಟೂರ್ನಿಯ ಬಹುಮಾನ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು! ಹೌದು, ಇತ್ತೀಚೆಗೆ ಪಾಕಿಸ್ತಾನ ಮತ್ತು ದುಬೈ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೋಲರಿಯದ
ಬಿಜೆಪಿ ಶಾಸಕರ ಒಟ್ಟು ಆಸ್ತಿ 26,000 ಕೋಟಿ ರೂ.: 3 ರಾಜ್ಯಗಳ ಬಜೆಟ್ ಮೀರಿದ ಸಂಪತ್ತು!
ನವದೆಹಲಿ: ದೇಶಾದ್ಯಂತ ಬಿಜೆಪಿ ಶಾಸಕರ ಆಸ್ತಿಯು ಮೂರು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತ ಹೆಚ್ಚಿರುವ ಆಘಾತಕಾರಿ ಅಂಶ ಬಯಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ ವರದಿಯಲ್ಲಿ ದೇಶಾದ್ಯಂತ ಶಾಸಕರ ಆಸ್ತಿ ವಿವರ ಬಹುರಂಗವಾಗಿದೆ. ಮುಂಬೈನ ಘಾಟ್ಕೋಪರ್ ಪೂರ್ವವನ್ನು ಪ್ರತಿನಿಧಿಸುವ
ಪ್ರಿಯಾಂಕಾ ಗಾಂಧಿಗೆ ಚುನಾವಣಾ ನಿರ್ವಹಣಾ ಹೊಣೆ?
ನವದೆಹಲಿ: ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮುಂದಿನ ತಿಂಗಳು ಅಹಮದಾಬಾದ್ ನಲ್ಲಿ ನಡೆಯಲಿದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಮುಂದಿನ ಚುನಾವಣೆಯಲ್ಲಿ ಗುಜರಾತನ್ನು ಗೆಲ್ಲುವ ಸವಾಲು ಎಸೆದಿದ್ದರು. ಆದರೆ ಇದು ಹೇಳಿದಷ್ಟು ಸುಳಭವಲ್ಲ




