ಹೊಸ ಸಾರಥಿಗೆ ಬಿಜೆಪಿಯಲ್ಲಿ ಹುಡುಕಾಟ ಚುರುಕು: ಮೋದಿ ಮಾತೇ ಅಂತಿಮ
ಮೂರು ರಾಜ್ಯಗಳ ಚುನಾವಣಾ ವಿಜಯದ ನಂತರ, ಜಗತ್ ಪ್ರಕಾಶ್ ನಡ್ಡಾ ಅವರ ಉತ್ತರಾಧಿಕಾರಿಯಾಗಿ ಪಕ್ಷದ ಹೊಸ ಅಧ್ಯಕ್ಷರ ಹುಡುಕಾಟವನ್ನು ಬಿಜೆಪಿ ತೀವ್ರಗೊಳಿಸಿದೆ. ಬಿಜೆಪಿ ಮುಖ್ಯಸ್ಥರ ಅಧಿಕಾರಾವಧಿ ಮೂರು ವರ್ಷಗಳು, ಆದರೆ ನಡ್ಡಾ ಅವರು ೨೦೧೯ರಿಂದ ಸುದೀರ್ಘ ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದಾರೆ, ಹೊಸ ಅಧ್ಯಕ್ಷರಿಗೆ ಔಪಚಾರಿಕವಾಗಿ ಮತ ಚಲಾಯಿಸುವ ಎಲೆಕ್ಟೋರಲ್ ಕಾಲೇಜ್ ಅನ್ನು ರಚಿಸಲು, ಬಿಜೆಪಿ ಸಂವಿಧಾನವು ಕನಿಷ್ಠ ಅರ್ಧದಷ್ಟು ರಾಜ್ಯ ಘಟಕಗಳು ತಮ್ಮದೇ ಆದ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗುತ್ತದೆ.
IPL2025: ಚಾಂಪಿಯನ್ ಕೆಕೆಆರ್ ಮಣಿಸಿ ಆರ್ ಸಿಬಿ ಭರ್ಜರಿ ಶುಭಾರಂಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ ಗಳಿಂದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಅವರದ್ದೇ ತವರಿನಲ್ಲಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ
ಐಪಿಎಲ್ 2025ಗೆ ವರ್ಣರಂಜಿತ ಉದ್ಘಾಟನೆ: ಕೊಹ್ಲಿಗೆ ಸನ್ಮಾನ
ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಟಿ-20 ಟೂರ್ನಿಗೆ ವರ್ಣರಂಜಿತ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಯಿತು. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸತತ 18 ಆವೃತ್ತಿಗಳಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು
ನಾಯಕನಾಗಿ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ರಜತ್ ಪಟಿದಾರ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಟಿದಾರ್ ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ಆತಿಥೇಯ
ಹನಿಟ್ರ್ಯಾಪ್ ಪ್ರಕರಣ ; ಪಾರದರ್ಶಕ ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ವಿಧಾನಸೌಧ ದೇವಾಲಯದಂತೆ. ಇಂತಹ ದೇವಾಲಯದಲ್ಲಿ ವಿಷಯಾಧಾರಿತ ಚರ್ಚೆ ನಡೆಯಬೇಕು. ಇತ್ತೀಚೆಗೆ ಸರ್ಕಾರದ ಪ್ರಭಾವಿ ಸಚಿವರ ಸದಸನದೊಳಗೆ ಹನಿಟ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದನ್ನ ನೋಡಿದ್ರೆ ಈ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಪಾರದರ್ಶಕ
ರೈಲ್ವೇ, ಬ್ಯಾಂಕ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ: ಡಿಕೆ ಶಿವಕುಮಾರ್
ಬೆಂಗಳೂರು: “ಕೇಂದ್ರ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮಾತ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು, ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಸೇರಿದಂತೆ ಪ್ರಗತಿಪರ ರಾಜ್ಯಗಳ ರಾಜಕೀಯ ಧ್ವನಿ ಹತ್ತಿಕ್ಕಲಾಗುತ್ತದೆ. ಹೀಗಾಗಿ ಕೇವಲ ಜನಸಂಖ್ಯೆ ಮಾತ್ರವಲ್ಲದೇ, ಮಾನವ ಅಭಿವೃದ್ಧಿ, ತೆರಿಗೆ
18 ಶಾಸಕರ ಅಮಾನತು ಆದೇಶ ಹಿಂಪಡೆಯಲು ವಿಜಯೇಂದ್ರ ಮನವಿ
ಬೆಂಗಳೂರು: ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ. 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಎಂದು
2ನೇ ವಿಮಾನ ನಿಲ್ದಾಣ: ಏ.7-9ರ ನಡುವೆ ಕೇಂದ್ರ ತಂಡದಿಂದ 3 ಸ್ಥಳಗಳ ಪರಿಶೀಲನೆ: ಸಚಿವ ಎಂ ಬಿ ಪಾಟೀಲ್
ಬೆಂಗಳೂರು: ರಾಜಧಾನಿಯಲ್ಲಿ 2ನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಖೈರು ಮಾಡಲಾಗಿದೆ. ಈ ಜಾಗಗಳ ಪೂರ್ವಕಾರ್ಯ ಸಾಧ್ಯತಾ ಅಧ್ಯಯನಕ್ಕೆಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡವು ಏ.7ರಿಂದ 9ರೊಳಗೆ ರಾಜ್ಯಕ್ಕೆ ಆಗಮಿಸಲಿದೆ. ಈ ಸಂಬಂಧ ಈಗಾಗಲೇ
ರಾಜ್ಯಾದ್ಯಂತ ಬಂದ್ ಯಶಸ್ವಿಗೊಳಿಸಿದ ಕನ್ನಡಿಗರಿಗೆ ಅಭಿನಂದನೆ: ವಾಟಾಳ್ ನಾಗರಾಜ್
ಬೆಂಗಳೂರು: ಇಡೀ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಹೋರಾಟ ಮಾಡಿದ ಸಂಘಟನೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಕರ್ನಾಟಕ ಬಂದ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಅವರದ್ದೇ
ಬಜೆಟ್‌ನ ವಿಸ್ತರಣೆ ಗಾತ್ರ ದ್ವಿಗುಣ: ಅತಿದೊಡ್ಡ ಬಜೆಟ್ ಹೊಂದಿದ 5ನೇ ರಾಜ್ಯ ಕರ್ನಾಟಕ: ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಸರ್ಕಾರಕ್ಕಿಂತಲೂ ನಮ್ಮ ರಾಜ್ಯದ ಬಜೆಟ್‌ನ ವಿಸ್ತರಣೆಯ ಗಾತ್ರ ದ್ವಿಗುಣಗೊಂಡಿದ್ದು, ದೇಶದಲ್ಲೇ ಕರ್ನಾಟಕ ಅತಿದೊಡ್ಡ ಬಜೆಟ್ ಹೊಂದಿರುವ 5ನೇ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ಮೇಲೆ ನಡೆದ ಸುದೀರ್ಘ ಚರ್ಚೆಗೆ ಉತ್ತರ




