Menu

ಸಹ ಚಾಲಕನಿಗೆ ಬಸ್‌ ಕೊಟ್ಟ ಚಾಲಕ ಹೃದಯಾಘಾತಕ್ಕೆ ಬಲಿ

ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕರೊಬ್ಬರು ಸಹಚಾಲಕನಿಗೆ ಬಸ್‌ ಚಾಲನೆ ಮಾಡುವುದಕ್ಕೆ ಕೊಟ್ಟ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕ ಸತೀಶ್ ರಾವ್ ಅವರಿಗೆ ರಾಜಸ್ಥಾನದ ಪಾಲಿ ತಲುಪುವಾಗ ಅನಾರೋಗ್ಯ ಕಾಡುತ್ತಿದೆ ಎಂದು ಅನಿಸಲಾರಂಭಿಸಿದೆ. ತಕ್ಷಣ ಬಸ್‌ ಅನ್ನು ಓಡಿಸುವಂತೆ ಸಹ ಚಾಲಕನಿಗೆ ನೀಡಿದ ಕೆಲವೇ ಹೊತ್ತಿಗೆ ಅಸು ನೀಗಿದ್ದಾರೆ. ಬಸ್‌ನಲ್ಲಿ ಕುಸಿದು ಬಿದ್ದಿದ್ದ ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು, ಅಷ್ಟರಲ್ಲಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.

ಸುಜಾತ ಭಟ್‌ಗೆ ಎಸ್‌ಐಟಿ ಭದ್ರತೆ ಒದಗಿಸಬೇಕು, ಮಹಿಳೆಯರ ಘನತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ: ಮಹಿಳಾ ಆಯೋಗ

ಮಹಿಳೆಯರ ಘನತೆಗೆ ಯಾರೇ ಧಕ್ಕೆ ತಂದರೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಎಚ್ಚರಿಕೆ ನೀಡಿದ್ದಾರೆ. ಅನನ್ಯಾ ಭಟ್ ಅವರ ತಾಯಿ ‘ಪದೇ ಪದೆ ಪ್ರಶ್ನೆ ಮಾಡಿದರೆ ನಾನು ನೇಣು

ಭರ್ತಿಯಾಗುತ್ತಿವೆ ಕಬಿನಿ, ತಾರಕ ಜಲಾಶಯ: ನದಿಪಾತ್ರದ ಜನರಿಗೆ ಸ್ಥಳಾಂತರ ಸೂಚನೆ

ಮೈಸೂರಿನಲ್ಲಿ ಕಬಿನಿ ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕೇರಳದ ವಯನಾಡುವಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಹೆಚ್​.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊರ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ ಪಾತ್ರದ

ರುದ್ರಪ್ರಯಾಗದಲ್ಲಿ ಭೀಕರ ಮಳೆ: ಹಲವರು ನಾಪತ್ತೆ, ಅವಶೇಷಗಳಡಿ ಸಿಲುಕಿರುವ ಭೀತಿ

ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳ ಹಲವೆಡೆ ಮೇಘಸ್ಫೋಟ ಸಂಭವಿಸಿ, ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಲ್ಲದೆ ಎರಡರಿಂದ ಮೂರು ಕುಟುಂಬ ನಾಪತ್ತೆಯಾಗಿವೆ. ಅವಶೇಷಗಳಡಿ ಸಿಲುಕಿ ದಂಪತಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ, ರಸ್ತೆಗಳು ಬಂದ್ ಆಗಿವೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. 200

ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ

ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ದೇಗುಲಮಠದಿಂದ ಕನಕಪುರ ನಗರದಲ್ಲಿ ಎರಡು ದಿನ ನಡೆದ ಗುರು ಕೋರಣ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ತೋಟಹಳ್ಳಿ ಮಠದ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ

ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್ ತಂಡದ ಸದಸ್ಯರಿಗೆ ಗ್ರಾಮಸ್ಥರಿಂದ ಥಳಿತ

ಉತ್ತರ ಪ್ರದೇಶದ ಘಟಂಪುರದಲ್ಲಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿಯವರು ಥಳಿಸಿದ್ದಾರೆ. ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿದ್ದರಿಂದ ಈ ಎಡವಟ್ಟು ನಡೆದಿದೆ. ಗ್ರಾಮಸ್ಥರು

ಕಾಂಗ್ರೆಸ್ ಪಕ್ಷದ “ಮತಗಳ್ಳತನ” ಬಯಲು ಮಾಡಿದ ಸಿದ್ದರಾಮಯ್ಯ: ಆರ್‌. ಅಶೋಕ

1991ರಲ್ಲಿ ಮಾನ್ಯ ಸಿದ್ದರಾಮಯ್ಯನವರು ಲೋಕಸಭೆಗೆ ಸ್ಪರ್ಧಿಸಿದ್ದು  ಕೊಪ್ಪಳ ಲೋಕಸಭಾ ಕ್ಷೇತ್ರದಿಂದ,  ಜನತಾದಳ ಪಕ್ಷದಿಂದ, ಸಿದ್ದರಾಮಯ್ಯವರವನ್ನ ಮೋಸದಿಂದ ಸೋಲಿಸಿದ್ದು  ಕಾಂಗ್ರೆಸ್ ಪಕ್ಷ. “ಮತಗಳ್ಳತನ” ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ಕೆ. ರಾಜಣ್ಣ  ಅವರನ್ನು ಸಂಪುಟದಿಂದ ವಜಾ ಮಾಡಿದ್ದ

ಬೆಂಗಳೂರು ಸಿಖ್ ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ

ಬೆಂಗಳೂರಿನ ಹಲಸೂರು ಕೆರೆ ಬಳಿ ಇರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ದೂರು ದಾಖಲಾಗಿದೆ.  ಗುರುದ್ವಾರದ ಬಾತ್‌ರೂಂನಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ De-Brahminize Dravidistan ಎಂಬ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದು ಬ್ರಾಹ್ಮಣ ವಿರೋಧಿ ಸಂಘಟನ ಎಂದು

ಪಿಎಸ್ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಪುಂಡರಿಂದ ಠಾಣೆಗೆ ಬಂದು ಬೆದರಿಕೆ

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸರ ಮೇಲೆ ಕಾರು ಹತ್ತಿಸುವುದಕ್ಕೂ ಮುಂದಾಗಿದ್ದಾರೆ.  ರಾಜಗೋಪಲನಗರ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಮದ್ಯ ಸೇವಿಸುತ್ತಿದ್ದರು. ಅದೇ ವೇಳೆ ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು.

ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಯತ್ನ: ಹೆಡ್ ಕಾನ್‌ಸ್ಟೇಬಲ್‌ ಅಮಾನತು

ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಆಕ್ಷೇಪಿಸಿದ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಸಿದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತುಗೊಳಿಸಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ ಮಧುಸೂದನ್‌ ಅಮಾನತುಗೊಂಡವರು. ಭಾನುವಾರ ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಕೆ.ಪಿ. ಅಗ್ರಹಾರ ಠಾಣೆ