Sunday, September 27, 2026
Menu

ಮಗನಿಗೆ ಅನೈತಿಕ ಸಂಬಂಧ: ಕುಟುಂಬಕ್ಕೆ ಬಹಿಷ್ಕಾರದಿಂದ ನೊಂದು ತಾಯಿ ಆತ್ಮಹತ್ಯೆ

ಮಗ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ತಾಯಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನೊಂದು ಆಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ನಡೆದಿದೆ. ಯಾದಗಿರಿ ನಗರದ ಹೊರವಲಯದ ಗಿರಿನಗರ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಮಗ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಕೇಳಿಬಂದಿದೆ. ಹೀಗಾಗಿ ಸಮುದಾಯದ ಮುಖಂಡರು ಇಡೀ

ಗಂಡ ಹೆಂಡತಿ ಜಗಳ ಬಿಡಿಸಲು ಹೋದಾತ ಮಚ್ಚಿನೇಟಿಗೆ ಬಲಿ

ಕೌಟುಂಬಿಕ ಕಲಹದ ಹಿನ್ನೆಲೆ ಗಂಡ ಹೆಂಡತಿಯ ಜಗಳ ಬಿಡಿಸಲು ಹೋದ ವ್ಯಕ್ತಿಗೆ ಮಚ್ಚಿನೇಟು ಬಿದ್ದು ಪ್ರಾಣ ಹೋಗಿರುವ ಘಟನೆ ಚಿತ್ರದುರ್ಗದ ಬುದ್ಧ ವೃತ್ತದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ಎಂಬಾತ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ.

ಮೀನು ಫ್ರೈ ಕದ್ದ ಇಲಿಗಳು: ಸ್ನೇಹಿತ ತಿಂದನೆಂದು ಕಲ್ಲಿಂದ ಜಜ್ಜಿ ಕೊಲೆ

ತವಾದಲ್ಲಿ ಫ್ರೈ ಮಾಡಿಟ್ಟಿದ್ದ ಮೀನನ್ನು ಇಲಿಗಳು ತಿಂದು ಮುಗಿಸಿದ್ದು, ಸ್ನೇಹಿತನೇ ತಿಂದಿದ್ದಾನೆಂದು ಭಾವಿಸಿ ಸಿಟ್ಟಿಗೆದ್ದ ಸ್ನೇಹಿತರಿಬ್ಬರು ಆತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಮುಂಬೈನ ಗೋರೆಗಾಂವ್‌ ನಲ್ಲಿ ನಡೆದಿದೆ. ಕೊಲೆಯಾದವನನ್ನು ಅಫ್ಸರ್ ಎಂದು ಗುರುತಿಸಲಾಗಿದೆ, ಆತನ ಸ್ನೇಹಿತರಾದ ಸುರೇಶ್ ಮತ್ತು

ಲಿವ್‌ ಇನ್‌ ಸಂಗಾತಿಯ ಕೊಲೆಗೈದ ವಿವಾಹಿತ ಅರೆಸ್ಟ್‌

ವಿವಾಹಿತ ವ್ಯಕ್ತಿ ಲಿವ್ ಇನ್‌ ಸಂಗಾತಿಯನ್ನು ವೈರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಕೊಡಗಿನ ರಂಜಿತಾ (23) ಕೊಲೆಯಾದ ಮಹಿಳೆ, ಅಯ್ಯಪ್ಪ ಕೊಲೆ ಆರೋಪಿ. ಇವರಿಬ್ಬರು ಲಿವ್‌ ಇನ್‌ ಸಂಬಂಧದಲ್ಲಿದ್ದರು. ಆರೋಪಿ ಅಯ್ಯಪ್ಪನಿಗೆ ಈ ಮೊದಲೇ

ಬಾಲಕಿಯನ್ನು ವೇಶ್ಯಾವಾಟಿಕೆಗೆ ಕಳಿಸುತ್ತಿದ್ದ ತಾಯಿ, ಮಲತಂದೆ ಅರೆಸ್ಟ್‌

ಹಣಕ್ಕಾಗಿ 15 ವರ್ಷದ ಮಗಳನ್ನು ತಾಯಿ ಹಾಗೂ ಮಲತಂದೆ ಸೇರಿ ವೇಶ್ಯಾವಾಟಿಕೆಗೆ ಕಳಿಸುತ್ತಿದ್ದ ಪ್ರಕರಣವೊಂದು ಚಂದ್ರಾ ಲೇಔಟ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಹಿರಂಗಗೊಂಡಿದೆ. ತಾಯಿ ಮತ್ತು ಮಲತಂದೆ, ಇನ್ನೊಬ್ಬ ಮಹಿಳೆಯನ್ನುಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಈ

ಡಿಸಿ ಡಿಜಿಟಲ್ ಸಹಿ ದುರುಪಯೋಗ, ನಕಲಿ ಬಿಲ್‌: ಚಿತ್ರದುರ್ಗದಲ್ಲಿ ಐವರ ಬಂಧನ

ಜಿಲ್ಲಾಧಿಕಾರಿ ಮತ್ತು ಎಡಿಸಿ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಡಿ ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,

ಲಿವ್‌-ಇನ್‌ನಲ್ಲಿದ್ದಾತ ಬೇರೆಯವಳೊಂದಿಗೆ ಮದುವೆ: ವೀಡಿಯೊ ಮಾಡಿಟ್ಟು ಮಹಿಳೆ ಸುಸೈಡ್‌

ನಾಲ್ಕು ವರ್ಷ ನನ್ನ ಜೊತೆ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಬೇರೆ ಮಹಿಳೆಯನ್ನು ಮದುವೆಯಾಗುತ್ತಿರುವುದಾಗಿ ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಆಕೆ ವೀಡಿಯೊ ಮಾಡಿಟ್ಟು, ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ನಾಲ್ಕು ವರ್ಷಗಳಿಂದ

ರಸ್ತೆ ಅಪಘಾತ: ಶ್ರೀಶೈಲಕ್ಕೆ ಹೋಗುತ್ತಿದ್ದ ಇಬ್ಬರ ಸಾವು

ವಿಜಯಪುರ ಬಸವನ ಬಾಗೇವಾಡಿ ತಾಳಿಕೋಟೆ ಹೆದ್ದಾರಿಯ ಬಸವನಹಟ್ಟಿ ಕ್ರಾಸ್ ಬಳಿ ಕಾರು ಉರುಳಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಕಾಗವಾಡ ಪಟ್ಟಣದ ಚಂದ್ರವ್ವ ಟಕ್ಕೆನ್ನವರ (70) ಹಾಗೂ ಕಾಮಪ್ಪ ಅವರಾದಿ (65) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರಿನಲ್ಲಿ ನಾಲ್ವರು ಕಾಗವಾಡದಿಂದ ಶ್ರೀಶೈಲಕ್ಕೆ

ಎಲ್‌ಪಿಜಿ ಸಿಲಿಂಡರ್‌ ಕಳ್ಳರ ಬಂಧನ

ಮನೆ ಮುಂದೆ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನದಲ್ಲಿದ್ದ ಸಿಲಿಂಡರ್ ಕದ್ದು ಪರಾರಿಯಾಗಿದ್ದ ಇಬ್ಬರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ ನಾಯಕ್ (19), ಗೋವಿಂದರಾಜು (20) ಬಂಧಿತ ಆರೋಪಿಗಳು. ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆ ಮುಂದೆ ನಿಂತಿದ್ದ ಗ್ಯಾಸ್ ಸರಬರಾಜು

ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಸಾವು

ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಬ್ಯಾಡರಹಳ್ಳಿಯ ಅಣ್ಣಯ್ಯ ಹಾಗೂ ಋತು ದಂಪತಿಯ ಮಗ ಚಿರಾಗ್‌ ಮೃತಪಟ್ಟ ಮಗು. ದಂಪತಿ ಸಂಬಂಧಿಕರ ಮದುವೆಗೆ ತೆರಳಲು ರೆಡಿಯಾಗುತ್ತಿದ್ದರು. ಕಾರು ತೊಳೆಯಲು ಸಂಪ್‌ ಕ್ಯಾಪ್‌ ತೆರೆದು