ಅಪರಾಧ
ಪೊನ್ನಂಪೇಟೆಯಲ್ಲಿ ಪತ್ನಿಗೆ ಗುಂಡು ಹಾರಿಸಿದ ಯೋಧ
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೊಣಗೇರಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಯೋಧನೊಬ್ಬ ಪತ್ನಿಯ ಮೇಲೆ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನು ಕಾರ್ಯಪ್ಪ ಗುಂಡಿಕ್ಕಿದ ಆರೋಪಿ, ಆತನ ಪತ್ನಿ ದೀಪಿಕಾ ದೇಚಮ್ಮ (32) ಗುಂಡೇಟಿನಿಂದ ಗಾಯಗೊಂಡಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹಾರಿಸಿದ ಆರೋಪಿ ಯೋಧ ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ನಡುವೆ
ಟ್ಯೂಷನ್ ಶಿಕ್ಷಕನಿಂದ ಗರ್ಭಿಣಿ: ಗರ್ಭಪಾತ ಮಾತ್ರೆ ತೆಗೆದುಕೊಂಡ ವಿದ್ಯಾರ್ಥಿನಿ ಸಾವು
ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ ಪುಸದ್ ಪಟ್ಟಣದಲ್ಲಿ ಟ್ಯೂಷನ್ ಶಿಕ್ಷಕನಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭಪಾತಕ್ಕೆ ಮಾತ್ರೆ ಸೇವಿಸಿದ ನಂತರ 12 ನೇ ತರಗತಿಯ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಟ್ಯೂಷನ್ ಶಿಕ್ಷಕ ಸಂತೋಷ್ ಗುಂಡೇಕರ್‌ನನ್ನು ಪೊಲೀಸರು ಬಂಧಿಸಿದ್ದು,
ಪಿಇಎಸ್ ಸಂಸ್ಥೆಗಳ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯೇ ಉದ್ಯಮಿಗಳ ಮನೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಹೊಸಕೆರೆಹಳ್ಳಿ, ಹನುಮಂತನಗರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬನಶಂಕರಿಯ ಬಿಡಿಎ
ಚೆನ್ನೈ ಮೂಲದ ಕನ್ಯಾಡಿ ಸ್ವಾಮೀಜಿಯ ಜಾಗ ಧರ್ಮಸ್ಥಳದವರ ಪಾಲಾಯ್ತಾ?
ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಸಾವಿನ ತನಿಖೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ತಿಮರೋಡಿ ಮಹೇಶ್ ಶೆಟ್ಟಿಯವರ ಜೊತೆ ಅವರ ಮನೆಯಲ್ಲೇ ಈಗ ಎಸ್‌ಐಟಿ ವಿಚಾರಣೆಯಲ್ಲಿರುವ ಚಿನ್ನಯ್ಯ 2023 ರ ಆಗಸ್ಟ್ ನಲ್ಲಿ ಮಾತನಾಡಿರುವ ವೀಡಿಯೊ ಸಂಚಲನ ಸೃಷ್ಟಿಸಿದೆ. ಆಗ
ಪ್ರವೀಣ್ ಭಟ್ ಬೆಳಗ್ಗೆ ದೇಗುಲದಲ್ಲಿ ಅರ್ಚಕ, ರಾತ್ರಿ ದೇಗುಲ ಕಳ್ಳ: ಈಗ ಪೊಲೀಸ್ ಅತಿಥಿ
ಬೆಳಗ್ಗೆಯಿಂದ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ, ಹೋಮ, ಹವನ ಮಾಡುತ್ತಿದ್ದು, ರಾತ್ರಿಯಾದರೆ ದೇಗುಲದಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ವ್ಯಕ್ತಿ ಮತ್ತು ಸಹಚರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಅರ್ಚಕ ಜೈಲಿನಲ್ಲಿ ಪರಿಚಯವಾದ ಮತ್ತೊಬ್ಬ ಕಳ್ಳನ ಸಹವಾಸದಿಂದ ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ. ಪ್ರತಿಸಲ
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರ ಗೌಡ ಸೇರಿ 17 ಆರೋಪಿಗಳಿಗೆ ಸೆ.25 ಕ್ಕೆ ದೋಷಾರೋಪ ನಿಗದಿ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಪವಿತ್ರ ಗೌಡ ಹಾಗೂ ಸಹಚರರ ಮೇಲೆ ಪೊಲೀಸರು ಹೊರಿಸಿರುವ ದೋಷಾರೋಪವನ್ನು ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ನಿಗದಿಪಡಿಸಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು
ಆನೇಕಲ್: ಪೋಷಕರ ನಿರ್ಲಕ್ಷ್ಯಕ್ಕೆ ತ್ರಿವಳಿ ಶಿಶುಗಳು ತಾಯಿ ಗರ್ಭದಲ್ಲೇ ಸಾವು!
ಪೋಷಕರ ನಿರ್ಲಕ್ಷ್ಯಕ್ಕೆ ಜನಿಸಿದ ಕೂಡಲೇ ಮೂರು ನವಜಾತ ಶಿಶುಗಳು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಮೃತ ಶಿಶುಗಳು ಆನಂದ–ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಎಂದು ತಿಳಿದು ಬಂದಿದೆ. ಬಡತನ, ಪೌಷ್ಟಿಕಾಂಶದ ಕೊರತೆ, ಅಜ್ಞಾನ ಮತ್ತು ವೈದ್ಯಕೀಯ
ಸುಲಿಗೆ ಆರೋಪ: ಬೆಂಗಳೂರಿನಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ಗಳ ಅಮಾನತು
ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಕೋರಮಂಗಲ ಮತ್ತು ಹಲಸುರ್‌ಗೇಟ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು,
ಹನೂರಿನಲ್ಲಿ ಸೊಸೆ ಜೊತೆ ಸಂಬಂಧ: ತಂದೆಯ ಕೊಲೆಗೈದ ಮಗ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ತನ್ನ ಪತ್ನಿಯೊಂದಿಗೆ ತನ್ನ ತಂದೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಆರೋಪಿಸಿ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಸಂದನಪಾಳ್ಯ ನಿವಾಸಿ ಪಾಕಿಯನಾಥನ್ ಅಲಿಯಾಸ್ ಆರುಳನಂದ ಕೊಲೆಯಾದವರು. ಮಗ ಜಾನ್ಸನ್
ಹಣ ನೀಡಿಲ್ಲವೆಂದು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ಇಲ್ಲ
ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಆರು ದಿನದಿಂದ ಣ ನೀಡಿಲ್ಲ ಎಂಬ ಕಾರಣಕ್ಕೆ ರೋಗಿಗೆ ಶತ್ರ ಚಿಕಿತ್ಸೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮೂಳೆ ಮುರಿತದಿಂದ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಚಿಕ್ಕ ಮುನಿಯಪ್ಪ ಹಣ ನೀಡಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ




