Friday, September 18, 2026
Menu

ಪಿಕ್‌ ಪಾಕೆಟ್‌ನಲ್ಲಿ ಕೇಂದ್ರ ಸಚಿವರಿಗೆ ಪಿಹೆಚ್‌ಡಿ ನೀಡಬೇಕಿದೆ: ಸಿಎಂ ಡಿಕೆ ಶಿವಕುಮಾರ್‌

ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಶಿಕ್ಷಕರಿಗೆ Tr. ಎಂಜಿನಿಯರ್ ಗಳಿಗೆ Er. ಪದನಾಮ ನೀಡಿರುವಂತೆ ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೂ ಪಿಕ್ ಪಾಕೆಟ್ ನಲ್ಲಿ ಪಿಎಚ್ ಡಿ ನೀಡಬೇಕಿದೆ ಎಂದು ಸಿಎಂ ಡಿಕೆ ಶಿವಕುಮಾರ್  ವ್ಯಂಗ್ಯವಾಡಿದರು.

ಕಲಬುರಗಿ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ  ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು. ವರ್ತಕರು ಈಗ ಕೇಂದ್ರ ವಿಧಿಸಲು ಹೊರಟಿರುವ ಯುಪಿಐ ಶುಲ್ಕದ ಭಾರಗ್ರಾಹಕರ ಮೇಲೆ ಹಾಕುತ್ತಾರೆ. ಇದು ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಹೊಸ ಪಿಕ್ ಪಾಕೆಟ್‌. ಯಪಿಐ ಶುಲ್ಕ ಜಾರಿಯ ವಿರುದ್ದ ವಿರುದ್ಧ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಹೊರಗಿನ ದೇಶದ ವರ್ತಕರಿಗೆ ಅನುಕೂಲ ಮಾಡಿಕೊಡಲು ಇಂಥ ಘೋರ ತೀರ್ಮಾನ ಮಾಡಲಾಗಿದೆ. ಇದನ್ನು ವಾಪಸ್‌ ಪಡೆಯಲು  ಒತ್ತಾಯ ಮಾಡುತ್ತೇವೆ ಎಂದರು.

ಯಾವ ಕಾರಣಕ್ಕೆ ಕ್ಯಾಸ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಎನ್ ಪಿಸಿಐ (NPCI) ತೆರಿಗೆ ರಹಿತ ಲಾಭವೇ 6,119 ಕೋಟಿ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಕೇಳಿದಾಗ,  ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಜಾಗ ಕೊಡೋಣ ಎಂದರು.

ಬಿಜೆಪಿಯವರಿಗೆ ರೈತರು ಹಾಗೂ ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿಧಾನಮಂಡಲದ ಅಧಿವೇಶನವನ್ನು ನಡೆಸಲು ಬಿಡಲಿಲ್ಲ. ಆ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ಗೋಳು ತೋಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ತೀರ್ಮಾನಿಸಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಇದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ನಡೆಯುವುದಿಲ್ಲ ಎಂದು ಹೇಳಿದರು.

ವಿರೋಧ ಪಕ್ಷದವರು ಚರ್ಚೆಗೆ ಅವಕಾಶ ನೀಡುತ್ತಾರೆಯೇ ಎಂದು ಕೇಳಿದಾಗ, ಅವರು ಏನೂ ಮಾಡಿದರೂ ನಾವಂತೂ ಚರ್ಚೆಗೆ ಸಿದ್ದ. ಅವರಿಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ‌. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಚರ್ಚೆಗೆ ಅವಕಾಶ ಕಲ್ಪಿಸಿಕೊಳ್ಳಲು ನಮಗೂ ಅಲ್ಪ ಸ್ವಲ್ಪ ಅರಿವಿದೆ ಎಂದರು.

ಬರಪೀಡಿತ ತಾಲೂಕುಗಳ ರೈತರ ಸಾಲ ವಸೂಲಾತಿಯನ್ನು ಬ್ಯಾಂಕ್ ಗಳು ಒಂದು ವರ್ಷ ಮುಂದೂಡಿರುವ ಬಗ್ಗೆ ಕೇಳಿದಾಗ, ಮೂರು ದಿನ ತಡೆಯಿರಿ. ಬ್ಯಾಂಕುಗಳ ಜೊತೆಗೆ ಮಾತನಾಡಬೇಕು.  ಆರ್.ಅಶೋಕ್, ವಿಜಯೇಂದ್ರ ಅವರನ್ನೆಲ್ಲಾ ಕರೆದುಕೊಂಡು  ಪ್ರಧಾನಿಗಳನ್ನು ಭೇಟಿ ಮಾಡಲು ಹೋಗಬೇಕಲ್ಲಾ. ಕೇಂದ್ರ ಸರ್ಕಾರ ದೊಡ್ಡ ದೊಡ್ಡವರ ಸಾಲ ಮನ್ನಾವನ್ನು ಒಂದೇ ಏಟಿಗೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ರೈತರನ್ನೂ ಬದುಕಿಸಿ ಎಂದು ಅವರೆಲ್ಲಾ ಹೇಳಲು ಬರಬೇಕಲ್ಲ. ವಿಧಾನ ಮಂಡಲದಲ್ಲಿ ಅವರು ಈ ಬಗ್ಗೆ ಸಲಹೆಗಳನ್ನು ನೀಡಲಿ ಎಂದು ಹೇಳಿದರು.

ಬರ ಘೋಷಣೆಯಾಗದಿರುವ ತಾಲೂಕುಗಳ ರೈತರ ಪರವಾಗಿ ಸರ್ಕಾರ ನಿಲ್ಲಲಿದೆಯೇ ಎಂಬ ಪ್ರಶ್ನೆಗೆ, ಈಗ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ವರದಿಯೂ ಈಗಷ್ಟೇ ಬಂದಿದೆ ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು.

ಕಲ್ಬುರ್ಗಿ ಜಿಲ್ಲೆಯ ಕಲ್ಯಾಣಕ್ಕಾಗಿ ಮಾಡಿರುವ ಘೋಷಣೆಗಳಿಗೆ ಅನುದಾನದ ಪೂರೈಕೆ ಬಗ್ಗೆ ಕೇಳಿದಾಗ, ಕೆಕೆಆರ್ ಡಿಬಿ ಅನುದಾನವೂ ಸರ್ಕಾರದ ಅನುದಾನವೇ ಆಗಿರುತ್ತದೆ.  ಸರ್ಕಾರ ಹಾಗೂ ಸರ್ಕಾರದ ಭಾಗವೇ ಆಗಿರುವ ಕೆಕೆಆರ್ ಡಿ ಬಿ ಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಅನುಗುಣವಾಗಿ ಸೂಕ್ತ ಅನುದಾನ ಪೂರೈಸಲಾಗುವುದು ಎಂದು ತಿಳಿಸಿದರು.

ಮೋಡ ಬಿತ್ತನೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದಾಗ, ಕಳೆದೊಂದು ವಾರದಿಂದ, ಅವಕಾಶವಿರುವ ಕಡೆಗಳಲ್ಲಿ ಮೋಡಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಮಹಾರಾಷ್ಟ್ರದ ಹಂತದಲ್ಲಿಯೇ ಭೀಮಾ ನದಿ ನೀರಿನ ಅತಿಯಾದ ಬಳಕೆ ಬಗ್ಗೆ ಕೇಳಿದಾಗ, ಮಹಾರಾಷ್ಟ್ರದಲ್ಲಿಯೇ ಭೀಮಾನದಿ ನೀರಿನ ಅತಿ ಬಳಕೆಯಾಗುತ್ತಿರುವ ಬಗ್ಗೆ  ಸ್ಥಳೀಯ ಶಾಸಕರು ಮಾಹಿತಿ ನೀಡಿದ್ದಾರೆ. ಇದರಿಂದ ಗಡಿ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿದ್ದೇನೆ. ನವಲೆ ಸಮತೋಲಿತ ಜಲಾಶಯ ಕರ್ನಾಟಕದಲ್ಲಿಯೇ ನಿರ್ಮಾಣವಾಗಲಿದ್ದು, ಇದರಿಂದ ಮೂರು ರಾಜ್ಯಗಳಿಗೆ ಲಾಭವಾಗಲಿದೆ ಎಂದು ಹೇಳಿದರು.

ಕರಾವಳಿ ಪ್ರವಾಸೋದ್ಯಮ ಸಚಿವ ಸಂಪುಟದಲ್ಲಿ ತೀರ್ಮಾನ

ಹಿಂದುಳಿದ ಜಿಲ್ಲೆಗಳಲ್ಲೂ ಸಚಿವ ಸಂಪುಟಸಭೆ ನಡೆಸುವ ಬಗ್ಗೆ ಕೇಳಿದಾಗ, ಮಂಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಯಲಿದೆ. ಆ ಭಾಗದ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದ ಅಭಿವೃದ್ಧಿಗೆ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚಿಸಿದ್ದು, ನಾಳೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದಾಗ ಪೌಷ್ಠಿಕತೆ ಹೆಚ್ಚಿಸಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಕರ್ನಾಟಕ ಪ್ರೋಟೀನ್ ಮಿಷನ್ ಜಾರಿ ಮಾಡಲಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೆರವು ಒದಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಮಿಷನ್ ಗೋವಿಂದರಾವ್ ಸಮಿತಿ ವರದಿ ಮೇಲೆಯೇ ರೂಪಿತವಾಗಿದೆ ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *