ಕೇರಳದಿಂದ ಬೆಂಗಳೂರು ಕೆಂಪೇಗೌಡ ನಿಲ್ದಾಣಕ್ಕೆ ವಿಮಾನದಲ್ಲಿ ಬಂದಿಳಿದ ಮಹಿಳೆ ತಕ್ಷಣ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಿಲ್ದಾಣದ ಟರ್ಮಿನಲ್ ಒಂದರ ಎಕ್ಸಿಲೇಟರ್ನಲ್ಲಿ ಮಹಿಳೆ ಕುಸಿದು ಅಸು ನೀಗಿದ್ದಾರೆ.
ಕೇರಳದ ಕೋಜಿಕೋಡ್ನಿಂದ ಬಂದಿದ್ದ ಶಿವದಾಸ್ ಲತಾ ( 66 ) ಹೃದಯಾಘಾತದಿಂದ ಮೃತಪಟ್ಟವರು, ಆಕಾಶ್ ಏರ್ಲೈನ್ಸ್ ನಲ್ಲಿ ಅವರು ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಎಕ್ಸಿಲೇಟರ್ನಲ್ಲಿ ಕುಸಿದು ಬಿದ್ದ
ಕೂಡಲೇ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದ್ದು, ಅಷ್ಟರಲ್ಲೇ ಆಕೆಯ ಪ್ರಾಣ ಹೋಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.


