Menu

ಸಂಸತ್ತಿನಲ್ಲಿ ಮುಂದುವರಿದ ನೀಟ್‌: ಉಭಯ ಸದನ ಕಲಾಪ ಮುಂದೂಡಿಕೆ

ನೀಟ್‌ ಅಕ್ರಮಗಳ ತನಿಖೆ ಮತ್ತು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಸಂಸದ್‌ ಚಲೊ ವೇಳೆ ಪೊಲೀಸರು ನಡೆಸಿದ ಕೌರ್ಯದ ಬಗ್ಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಗುರುವಾರ ಚರ್ಚೆಗೆ ಪಟ್ಟು ಹಿಡಿದಿವೆ.

ಚರ್ಚೆ ಕೈಗೆತ್ತಿಕೊಳ್ಳುವ ಮೊದಲು ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸಿದ್ದರಿಂದ ಸ್ಪೀಕರ್‌ ಉಭಯ ಸದನಗಳ ಕಲಾಪವನ್ನು ಮುಂದೂಡಿದರು. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಜಂತರ್‌ ಮಂತರ್‌ ಮತ್ತು ಸುತ್ತಲ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷಗಳು ನಿರಂತರ ಗದ್ದಲ ನಡೆಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ಬುಧವಾರವೂ ಹಲವು ಬಾರಿ ಮುಂದೂಡಿಕೆಯಾಗಿತ್ತು.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಮಗ್ರ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸರ್ಕಾರ ಚರ್ಚೆಗೆ ಸಿದ್ಧವಿದ್ದು, ಯಾವ ನಿಯಮದಡಿ, ಯಾವಾಗ ಮತ್ತು ಎಷ್ಟು ಅವಧಿಗೆ ಚರ್ಚೆ ನಡೆಯಬೇಕು ಎಂಬುದನ್ನು ಎಲ್ಲ ಪಕ್ಷಗಳ ಸದನ ನಾಯಕರೊಂದಿಗೆ ಸಮಾಲೋಚಿಸಿ ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಯುವಜನತೆಗೆ ಸಂಬಂಧಿಸಿದ ವಿಷಯಗಳನ್ನು ಸಂಸತ್ತಿನಲ್ಲಿಯೇ ಚರ್ಚಿಸಬೇಕು, ಆದರೆ ಪ್ರತಿಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ದೇಶಾದ್ಯಂತ ವಿದ್ಯಾರ್ಥಿಗಳು ನೋವು ಅನುಭವಿಸುತ್ತಿರುವಾಗ, ಈ ತುರ್ತು ವಿಷಯವನ್ನೇ ಸಂಸತ್ತು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಒತ್ತಾಯಿಸಿದ್ದಾರೆ.
ಚರ್ಚೆಗೆ ಅನಗತ್ಯ ಪೂರ್ವಷರತ್ತುಗಳು ಮತ್ತು ನೆಪಗಳನ್ನು ಮುಂದಿಟ್ಟು ಪ್ರತಿಪಕ್ಷಗಳು ಚರ್ಚೆಯಿಂದಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಕಿರಣ್‌ ರಿಜಿಜು ಆರೋಪಿಸಿದ್ದಾರೆ.

ನೀಟ್‌ ಅಕ್ರಮ ಖಂಡಿಸಿ ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟ ಸಲ್ಮಾನ್‌ ಖಾನ್‌ ಬೆಂಬಲ ವ್ಯಕ್ತಪಡಿಸಿದ್ದು, ನಟಿ ಅಲಿಯಾ ಭಟ್‌ ಕೂಡ ವಿದ್ಯಾರ್ಥಿಗಳ ಪರವಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತಿದೆ. ಆದರೆ ಈ ಪರಿಸ್ಥಿತಿ ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತೆ ಭರವಸೆಯನ್ನೂ ಮೂಡಿಸಿದೆ ಎಂದು ಹೇಳಿದ್ದಾರೆ.

ಯುವಜನರೇ ದೇಶದ ಭವಿಷ್ಯ. ಅವರ ಕನಸುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಕಷ್ಟದ ಸಂದರ್ಭಗಳಲ್ಲಿ ತಾಳ್ಮೆ ವಹಿಸುವುದು ಹಾಗೂ ದೇಶದ ಸಂಸ್ಥೆಗಳು ಮತ್ತು ಸರ್ಕಾರದ ಮೇಲೆ ನಂಬಿಕೆ ಇಡುವುದು ಕೂಡಮುಖ್ಯ. ಪ್ರತಿಯೊಂದು ಸವಾಲಿಗೂ ತಾಳ್ಮೆಯೇ ಪರಿಹಾರ ಎಂದು ನಾನು ನಂಬುತ್ತೇನೆ. ಭಾರತವು ಯಾವಾಗಲೂ ಮುನ್ನಡೆದಿದೆ ಮತ್ತು ಮುಂದೆಯೂ ಮುನ್ನಡೆಯುತ್ತಲೇ ಇರುತ್ತದೆ ಎಂದು ಶಿಖರ್‌ ಧವನ್‌ ಬರೆದಿದ್ದಾರೆ.

ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು ಕಾಳಜಿ, ಅವಕಾಶ ಮತ್ತು ಭರವಸೆಯುಳ್ಳ ಸಮಾಜವನ್ನು ಕಟ್ಟಲು ನಾವೆಲ್ಲರೂ ಒಗ್ಗೂಡೋಣ. ಮಾತುಕತೆಯ ಮೂಲಕ ಭಾರತದ ಭವಿಷ್ಯಕ್ಕಾಗಿ ನಾವು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *