ಎಸ್ಐಆರ್ಗೆ ಮತದಾರರ ಮನೆಗೆ ತೆರಳಿದ್ದ ಬಿಎಲ್ಒಗೆ ಜಾತಿ ನಿಂದನೆ ಮಾಡಿದ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಕೇಳಿಬಂದಿದೆ. ಬಿಎಲ್ಒ ದಲಿತ ಎಂಬ ಕಾರಣಕ್ಕೆ ಹೊರಗೆ ನಿಲ್ಲಿಸಿ ಜಾತಿ ನಿಂದನೆ ಮಾಡಲಾಗಿದ್ದು, ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಎಸ್ಐಆರ್ ಕರ್ತವ್ಯಕ್ಕೆ ಹೋಗಿದ್ದ ಅಂಗನವಾಡಿ ಕಾರ್ಯಕರ್ತೆ ದಲಿತ ಸಮುದಾಯದ ಬಿಎಲ್ಒಗೆ ಜಾತಿ ನಿಂದನೆ ಮಾಡಿ ಶಿರ್ಲಾಲು ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರು ಅವಮಾನಿಸಿರುವುದಾಗಿ ಆರೋಪಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಎಲ್ಒ ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ ಯಶೋದ ಆಚಾರಿ, ನೀನು ಅಲ್ಲಿಯೇ ನಿಲ್ಲು ನಿಮ್ಮ ಜಾತಿಯವರು ಈ ಕಡೆ ಬರಬಾರದು ಎಂದು ಹೇಳಿ ಸಿಟ್ ಔಟ್ ಗೆ ಪ್ರವೇಶಿಸದಂತೆ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.


