Menu

ಮಳವಳ್ಳಿಯಲ್ಲಿ ಕರಕಲಾದ ಶವ ಪತ್ತೆ ಕೇಸ್‌: ವಿವಾಹಿತೆ ಜೊತೆ ಸ್ನೇಹ, ಕೊಲೆ, ಆತ್ಮಹತ್ಯೆ

ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ಸತ್ತೆಗಾಲ ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಹಸ್ಯವನ್ನು ಬಯಲಿಗೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ನಳಿನಿ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ತಮಿಳುನಾಡು‌ ಉಪ್ಪಾರಹಳ್ಳಿಯ ರಾಜಶೇಖರ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ ಸುಟ್ಟಿದ್ದ ಎಂಬುದು ತಿಳಿದು ಬಂದಿದೆ. ಜೂನ್​ 24 ರಂದು ಮಳವಳ್ಳಿಯ ಜವನಹಳ್ಳಿಗುಡ್ಡದ ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿತ್ತು.

ಮೊದಲಿಗೆ ಬೆಳಕವಾಡಿ ಟೋಲ್‌ ಪಾಸಾಗಿದ್ದ ಇಟಿಯೋಸ್ ಕಾರಿನ ಮೇಲೆ ಪೊಲೀಸರಿಗೆ ಅನುಮಾನ ಕಾಡಿತ್ತು. ಕಾರಿನ ಫ್ರಂಟ್ ಸೀಟ್‌ನಲ್ಲಿ ಮಹಿಳೆ ಮಲಗಿದ್ದ ಸ್ಥಿತಿಯಲ್ಲಿದ್ದಳು. ಕಾರಿನ ಮಾಲೀಕ ತಮಿಳುನಾಡು‌ ಉಪ್ಪಾರಹಳ್ಳಿಯ ರಾಜಶೇಖರ್‌ನನ್ನು ಪೊಲೀಸರು ಸಂಪರ್ಕಿಸಿ ವಿಚಾರಣೆಗೆ ಕರೆದಿದ್ದರು. ರಾಜಶೇಖರ ನನ್ನ ಕಾರು ಮಾರಾಟ‌ ಮಾಡಿದ್ದೇನೆಂದು ಸುಳ್ಳು ಹೇಳಿದ್ದ.

ಬೆಂಗಳೂರಿನ ಪಾರ್ಲರ್‌ನಲ್ಲಿ ಕೆಲಸ ಮಾಡ್ತಿದ್ದ ನಳಿನಿ ಗಂಡನಿಂದ ದೂರವಿದ್ದರು, ರಾಜಶೇಖರ್ ಸ್ನೇಹ ಹೊಂದಿದ್ದರು. ಒಂದು ತಿಂಗಳಿಂದ ಮದುವೆ ವಿಚಾರಕ್ಕೆ ನಳಿನ ಹಾಗೂ ರಾಜಶೇಖರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಅದೇ ಸಿಟ್ಟಿಗೆ ಕಿಡ್ನ್ಯಾಪ್ ಮಾಡಿ ಆಕೆಯನ್ನು ಕೊಂದು ಹಾಕಿದ್ದಾಗಿ ರಾಜಶೇಖರ್ ಸ್ನೇಹಿತನ ಬಳಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.

ನಳಿನಿಯ ಕೊಲೆ ಮಾಡಿ ಶವ ತಂದು ಜವನಹಳ್ಳಿಗುಡ್ಡದ ಬಳಿ ಸುಟ್ಟಿದ್ದ ರಾಜಶೇಖರ್, ಘಟನೆ ಸ್ಥಳದಲ್ಲಿ ಎರಡೂ ಉಂಗುರ, ಕೀ, ವಾಚ್, ಏರ್ ಕ್ಲಿಪ್ ಪತ್ತೆಯಾಗಿತ್ತು. ಮಹಿಳೆಯ ಗುರುತು ಪತ್ತೆಗಾಗಿ ಎಸ್ಪಿ ಡಾ.ವಿಜೆ‌ ಶೋಭಾರಾಣಿ ವಿಶೇಷ ತಂಡ ರಚಿಸಿದ್ದರು. ನಳಿನಿ ಸ್ನೇಹಿತರಲ್ಲೂ ರಾಜಶೇಖರ್‌ ಸುಳ್ಳು ಕಥೆ ಕಟ್ಟಿದ್ದ. ಸ್ಥಳೀಯ ಗ್ರಾ.ಪಂ.ಸದಸ್ಯರನ್ನು ಭೇಟಿ ಮಾಡಿ ನನ್ನ ಮುಂದೆ ಸುಟ್ಟು ಹಾಕಿದ್ದರು ಎಂದು ಹೇಳಿದ್ದ ಎನ್ನಲಾಗಿದೆ.  ಯಾವುದೇ ದೂರು ಕೊಡದ ರಾಜಶೇಖರ್, ಪೊಲೀಸರಿಗೆ ಸತ್ಯ ಗೊತ್ತಾಗುತ್ತದೆಂದು ಜೂನ್ 28ರಂದು ತಾಯಿ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Related Posts

Leave a Reply

Your email address will not be published. Required fields are marked *