ಎಸ್ ಐಆರ್ ಲೋಪದ ಬಗ್ಗೆ ದೂರು ಕೊಟ್ಬಿದ್ದು, ಬಿಜೆಪಿಯ ಮತ್ತೊಂದು ಹೊಸ ನಾಟಕ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮೊದಲು ಪ್ರತಿಭಟನೆ ಮಾಡಿದ್ದೆ ಬಿಜೆಪಿ. ಆಮೇಲೆ ಹೊರಗಿನ ಅದಿಕಾರಿಗಳ ತರೋದು ಇವರ ಫ್ಲ್ಯಾನ್ ಆಗಿದೆ. ಇದೆಲ್ಲವೂ ಒಂದು ಗೇಮ್ ಫ್ಲ್ಯಾನ್ ಎಂದು ಆರೋಪಿಸಿದರು.
ಗೋಪಾಲ್ ಜೀ ಆಯೋಧ್ಯ ರಾಮಮಂದಿರ ಕಟ್ಟಡದ ಉಸ್ತುವಾರಿ ಹೊತ್ತಿದ್ದರು. 40 ಪರ್ಸೆಂಟ್ ತೆಗೆದುಕೊಂಡು ಅವರ ಅಳಿಯನಿಗೆ ಕಾಂಟ್ರಕ್ಟ್ ನೀಡಿದ್ದರು. ಇಲ್ಲಿ ಬಿಜೆಪಿ ಸರ್ಕಾರದ್ದು ನೋಡಿ ಆಯೋಧ್ಯೆಯಲ್ಲಿ ಕಮಿಷನ್ ತೆಗೆದುಕೊಂಡಿದ್ದಾರೆ. ಅವರ ರಾಜ್ಯದಲ್ಲಿ ಆಸ್ತಿ ಖರೀದಿ ಮಾಡಿದ್ದರೆ ದೂರು ಕೊಡಲಿ. ನಮ್ಮ ಹತ್ತಿರ ಮಾಹಿತಿ ಇದೆ ಎಂದರು.
ಇವತ್ತು ಟ್ರಸ್ಟ್ ಮೀಟಿಂಗ್ ಇರೋದರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಂಪತ್ ರಾಯ್, ಗೋಪಾಲ್ ಜೀ, ಮಿಶ್ರಾ ರಾಜೀನಾಮೆ ಬಗ್ಗೆ ಅಲ್ವಾ. ಇವೆರಲ್ಲಾ ಯಾರು, ಎಲ್ಲಿಂದ ಟ್ರೈನಿಂಗ್ ತೆಗೆದುಕೊಂಡು ಬಂದಿದ್ದಾರೆ. ಆರ್ ಎಸ್ ಎಸ್ ನಿಂದ ಟ್ರೈನಿಂಗ್ ತೆಗೆದುಕೊಂಡಿದ್ದಾರೆ ತಾನೇ ಎಂದು ಹೇಳಿದರು.
ನಾನು ಇರುವರಗೆ ರಾಜ್ಯದಲ್ಲಿ ಪಥಸಂಚಲನಕ್ಕೆ ಅನುಮತಿ ಕಡ್ಡಾಯ. ಆರ್ ಎಸ್ ಎಸ್ ನವರು ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಇವಾಗ ಮೋಹನ ಭಾಗವತ್ ಅವರಿಗೆ ಪತ್ರ ಬರೆದಿದ್ದೆನೆ. ಇಷ್ಟೊಂದು ಅವಸರ ಯಾಕೆ, 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ, ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವಯುಕ್ತಿಕ ಮಾಹಿತಿ ಕೆದುಕುತ್ತಿದ್ದಾರೆ. ಪ್ರಿಯಾಂಕ್ ಯಾರು, ಯಾರನ್ನು ಮದುವೆಯಾಗಿದ್ಯಾ, ಮಕ್ಕಳು ಯಾರು, ಪ್ರಿಯಾಂಕ್ ಕಪ್ಪಗಿದ್ದಾನಾ -ಬೆಳ್ಳಗಿದ್ದಾನಾ..? ಇವೆಲ್ಲಾ ಕೆದಕುತ್ತಿದ್ದಾರೆ ಕೆದಕಲಿ. ಇದಕ್ಕೆಲ್ಲಾ ನಾನು ಹೆದರೋ ವ್ಯಕ್ತಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


