Menu

ಚಿಂತಾಮಣಿಯಲ್ಲಿ ಪತ್ನಿ, ನಾದಿನಿಯ ಕೊಲೆಗೈದು ವ್ಯಕ್ತಿ ಪರಾರಿ

ಪತ್ನಿ ಮತ್ತು ಆಕೆಯ ತಂಗಿಯನ್ನು ಕೊಲೆ ಮಾಡಿ ವ್ಯಕ್ತಿಯಿ ಮೂವರು ಮಕ್ಕಳೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ನಗರದ ಜೆಜೆ ಕಾಲೊನಿಯಲ್ಲಿ ನಡೆದಿದೆ.  25 ವರ್ಷದ ಶಮಾ ಮತ್ತು 21 ವರ್ಷದ ರೇಷ್ಮಾ ಕೊಲೆಯಾದ ಅಕ್ಕ-ತಂಗಿ. ಚಿಂತಾಮಣಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಅಕ್ಕ ತಂಗಿ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು ಎಂದು ಹೇಳಲಾಗಿದೆ. ಶಮಾ ಅವರ ಪತಿ ಏಜಾಜ್ ಇಬ್ಬರ ಕತ್ತು ಕೊಯ್ದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಗಾಂಜಾ ಮತ್ತಿನಲ್ಲೇ ಕೊಲೆ ಮಾಡಿರಬಹುದು, ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದ್ದು, ಪೊಲೀಸರು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ನಗರ ಪೊಲೀಸರು ಆರೋಪಿಯ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.

ಪತ್ನಿಯ ಕುತ್ತಿಗೆಗೆ ವೈರ್‌ ಬಿಗಿದು ಸಾಯಿಸಿದ ಪತಿ

ವ್ಯಕ್ತಿಯೊಬ್ಬ ಪತ್ನಿಯ ಕುತ್ತಿಗೆಗೆ ವೈರ್‌ ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

35 ವರ್ಷದ ಪವಿತ್ರಾ ಕೊಲೆಯಾದ ಮಹಿಳೆ. ಆರೋಪಿ ಪತಿ ವೆಂಕಟೇಶ್, ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ದಂಪತಿಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಮೂವರು ಮಕ್ಕಳಿದ್ದಾರೆ. ವೆಂಕಟೇಶ್‌ಗೆ ಕುಡಿತದ ಚಟವಿದ್ದು, ಸಾಲ ಮಾಡಿಕೊಂಡಿದ್ದ. ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮನೆ ಕೂಡ ಒತ್ತೆ ಇಟ್ಟಿದ್ದ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೆಂಕಟೇಶ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *