Menu

ನೆಲಮಂಗಲದಲ್ಲಿ ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಸಾವು

ಆಟವಾಡುತ್ತಿದ್ದ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.  ಟಿ.ದಾಸರಹಳ್ಳಿ ನಿವಾಸಿ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿಯ ಎರಡು ವರ್ಷದ ಮಗು ದೀಕ್ಷಿತ್ (2) ಮೃತಪಟ್ಟಿದೆ.

ಆಟವಾಡುವಾಗ ಮೆಟ್ಟಿಲ ಮೇಲಿಂದ ಮಗು ಉರುಳಿ ಬಿದ್ದಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, 24 ಗಂಟೆ ಕೋಮಾದಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದೆ. ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿ ಎರಡು ದಿನದ ಹಿಂದೆ ತೋಟದಗುಡ್ಡದಹಳ್ಳಿ ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಕ್ಕರ್‌ನಲ್ಲಿ ಹೊಡೆದು ಪತ್ನಿಯ ಸಾಯಿಸಿದ ಪತಿ

ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪೀಡಿಸಿ ಕುಕ್ಕರ್‌ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಕೋಲಾರದ ಹಸಾಳ ಗ್ರಾಮದಲ್ಲಿ ನಡೆದಿದೆ. ಸಹನಾ (24) ಪತಿಯಿಂದ ಹತ್ಯೆಯಾದ ಮಹಿಳೆ. ಮಂಜುನಾಥ್ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪಿ.

ಇವರಿಗೆ ಮದುವೆಯಾಗಿ ಐದು ವರ್ಷವಾಗಿದೆ, ಇಬ್ಬರು ಗಂಡುಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಆರೋಪಿಯು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು ಎರಡು ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಮನೆ ಕಟ್ಟುವುದಕ್ಕೆಂದು 10 ಲಕ್ಷ ರೂ. ತರುವಂತೆ ಎಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಹಣಕ್ಕಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಹಿಂದೆ ಹಲವು ನ್ಯಾಯ ಪಂಚಾಯಿತಿ ನಡೆದು ಇಬ್ಬರನ್ನು ಒಂದು ಮಾಡಲಾಗಿತ್ತು. ಜೂ.17 ರಂದು ಸಹನಾ ತಾಯಿ ಜಯಮ್ಮಗೆ ವೀಡಿಯೊ ಕಾಲ್ ಮಾಡಿ, ನನ್ನ ಹೊಡೆಯುತ್ತಿದ್ದಾರೆ. ಮೂಗಲ್ಲಿ ರಕ್ತ ಬರುತ್ತಿದೆ ನೋಡು ಎಂದು ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ ಕುಕ್ಕರ್‌ನಿಂದ ಹಲ್ಲೆ ಮಾಡಿ ನೇಣು ಬಿಗಿದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.  ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *