Menu

ಬೇರೆಯವರ ಹೆಸರಲ್ಲಿ ಬುಕ್‌ ಆಗಿದ್ದ ಲಾಡ್ಜ್‌ ರೂಂಗೆ ಬಂದಿದ್ದಾತ ಶವವಾಗಿ ಪತ್ತೆ

ಬೆಂಗಳೂರಿನ ಮಡಿವಾಳದ ಮಾರುತಿ ನಗರದಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ತಮಿಳುನಾಡಿನ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪುಳಿಯಂಪಟ್ಟಿ ನಿವಾಸಿ ಮುರಳಿ ಅಲಿಯಾಸ್ ಮಧು (38) ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಲಾಡ್ಜ್‌ ರೂಂನ ಹಾಸಿಗೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡು ಮೃತಪಟ್ಟಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರರಿಗೆ ಕುತೂಹಲಕರ ಮಾಹಿತಿ ಸಿಕ್ಕಿದೆ, ಲಾಡ್ಜ್‌ನಲ್ಲಿ ರೂಂ ಅನ್ನು ಬೇರೆ ವ್ಯಕ್ತಿಯ ಹೆಸರಲ್ಲಿ ಬುಕ್ ಮಾಡಲಾಗಿತ್ತು. ಎಂಟ್ರಿ ದಾಖಲೆ ಇಲ್ಲದೆ ಮುರಳಿ ಅದೇ ರೂಂಗೆ ಬಂದಿದ್ದ ಎನ್ನಲಾಗಿದೆ. , ಮುರಳಿ ಸಾವಿನ ಬಳಿಕ ಜೊತೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.

ಪೊಲೀಸರು ಪರಿಶೀಲನೆ ನಡೆಸಿದಾಗ ಮುರಳಿಯ ಬಾಯಲ್ಲಿ ರಕ್ತ ಕಂಡುಬಂದಿದೆ. ಡ್ರಗ್ಸ್ ಸೇವನೆಯಿಂದ ಮೃತಪಟ್ಟಿದೇ, ಆರೋಗ್ಯ ಸಮಸ್ಯೆಯಿಂದ ಸತ್ತಿದ್ದೇ, ಕೊಲೆಯೇ ಎಂಬ ಅನುಮಾನಗಳು ಹುಟ್ಟಿವೆ. ಮೃತನ ಪೋಷಕರಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಅಕ್ಕ ಭಾವನ ಜೊತೆ ಬಂದು ಹೋಟೆಲ್‌ನಲ್ಲಿ ಹೆಣವಾದ
ವಾರದ ಹಿಂದೆಯಷ್ಟೇ ಯಾದಗಿರಿಯ ಹೋಟೆಲ್‌ವೊಂದರಲ್ಲಿ ಅಕ್ಕ-ಭಾವನ ಜೊತೆ ಬಂದಿದ್ದಾತ ಶವವಾಗಿ ಪತ್ತೆಯಾಗಿದ್ದ. ಹೈದರಾಬಾದ್‌ನ ವಿನಾಯಕನಗರ ನಿವಾಸಿ ಲಕ್ಷ್ಮಣರಾವ್ (51) ಮೃತಪಟ್ಟವ. ಪೊಲೀಸರ ತನಿಖೆಯಲ್ಲಿ ಅಕ್ಕ ಸಜ್ಜಾ ವರಲಕ್ಷ್ಮಿ ಹಾಗೂ ಭಾವ ಸಜ್ಜಾ ವೆಂಕಟರತ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಮೂವರ ನಡುವೆ ಏನೋ ನಡೆದು ಯುವಕ ಮೃತಪಟ್ಟ ಬಳಿಕ ಅಕ್ಕ-ಭಾವ ಅಲ್ಲಿಂದ ಪರಾರಿಯಾಗಿದ್ದಾರೆ. ಲಕ್ಷ್ಮಣರಾವ್ ಅವರನ್ನು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆ ಆರೋಪಿಗಳು ರೂಂ ಬಿಟ್ಟಿದ್ದು ಮತ್ತೆ ವಾಪಸ್ ಆಗಿಲ್ಲ. ಮೃತದೇಹ ಎರಡು ದಿನ ಅದೇ ರೂಂನಲ್ಲಿ ಬಿದ್ದಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಗಳಾದ ಅಕ್ಕ ಹಾಗೂ ಭಾವನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *