ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ದರ್ಶನ ಪಡೆಯಲೆಂದು ಪಾದಯಾತ್ರೆ ಮಾಡುತ್ತಿದ್ದ ಬಾಲಕನನ್ನು ನಾಗಮಲೆಯಲ್ಲಿ ಚಿರತೆ ಎಳೆದೊಯ್ದು ಕೊಂಡು ಹಾಕಿರುವ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಬಾಲಕನ ಕುಟುಂಬಕ್ಕೆ
ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ತಾಯಿ ಜೊತೆ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾಗ ಬೆಂಗಳೂರಿನ ಬಾಲಕ ಹರ್ಷಿತ್ ಗೌಡ ಮೇಲೆ ಚಿರತೆ ದಾಳಿ ನಡೆಸಿ ತಾಯಿ ಕಣ್ಣ ಮುಂದೆ ಹೊತ್ತೊಯ್ದು ಕೊಂದು ಹಾಕಿತ್ತು. ಹರ್ಷಿತ್ ಗೌಡ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಕಾರಣ ಎಂದು ಕುಟುಂಬ ಆರೋಪಿಸಿದೆ. ಅರಣ್ಯ ಇಲಾಖೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿ, 5 ಲಕ್ಷ ರೂಪಾಯಿ ಈಗಾಗಲೇ ಕುಟುಂಬಕ್ಕೆ ನೀಡಿದೆ. ಸುಮ್ಮನಹಳ್ಳಿ ಚಿತಾಗಾರದಲ್ಲಿ ಬಾಲಕ ಹರ್ಷಿತ್ ಗೌಡ ಅಂತ್ಯಸಂಸ್ಕಾರ ನಡೆದಿದೆ.
https://udayakala.news/karnataka-government-failed-to-provide-security-to-madappa-devotees-r-ashoka/
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ, ಹುಲಿಗಳಿವೆ ಎಂಬ ಯಾವುದೇ ಬೋರ್ಡ್ ಇಲ್ಲ. ಭಕ್ತರಿಗೆ ಅರಣ್ಯ ಇಲಾಖೆ ಯಾವುದೇ ಸೂಚನೆ ನೀಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಗನ ಬಲಿ ಪಡೆದಿದೆ ಎಂದು ಮೃತ ಬಾಲಕನ ಪೋಷಕರು ದೂರಿದ್ದಾರೆ.
ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯ @INCKarnataka ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಕೆಲವು ದಿನಗಳ ಅಂತರದಲ್ಲಿ ಮೂರು ಚಿರತೆ ದಾಳಿಗಳು, ಎರಡು ಅಮಾಯಕ ಭಕ್ತರ ಸಾವು, ಇದು ಆಡಳಿತ ವೈಫಲ್ಯ ಅಲ್ಲವೇ? ಇದು ಸರ್ಕಾರದ ಘೋರ ನಿರ್ಲಕ್ಷ್ಯ ಅಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
https://udayakala.news/boy-killed-in-leopard-attack-in-nagamale/
ದೇವಸ್ಥಾನದ ಹೆಸರಿನಲ್ಲಿ ಕೋಟಿ ಕೋಟಿ ಹಣ ಸಂಗ್ರಹ ಮಾಡುವ ಸರ್ಕಾರಕ್ಕೆ, ಭಕ್ತರ ಸುರಕ್ಷತೆಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯ. ಪ್ರತಿ ವಾಹನದಿಂದ ನೂರಾರು ರೂಪಾಯಿ ಪ್ರವೇಶ ಶುಲ್ಕ ವಸೂಲಿ ಮಾಡುವ ಸರ್ಕಾರಕ್ಕೆ, ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಲು ಆಗದಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದ್ದಾರೆ.


