Menu

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯಸರ್ಕಾರ ವಿಫಲ: ಆರ್‌ ಅಶೋಕ

ಮಾದಪ್ಪನ ಭಕ್ತರಿಗೆ ಭದ್ರತೆ ನೀಡಲು ರಾಜ್ಯ @INCKarnataka ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಕೆಲವು ದಿನಗಳ ಅಂತರದಲ್ಲಿ ಮೂರು ಚಿರತೆ ದಾಳಿಗಳು, ಎರಡು ಅಮಾಯಕ ಭಕ್ತರ ಸಾವು, ಇದು ಆಡಳಿತ ವೈಫಲ್ಯ ಅಲ್ಲವೇ? ಇದು ಸರ್ಕಾರದ ಘೋರ ನಿರ್ಲಕ್ಷ್ಯ ಅಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ದೇವಸ್ಥಾನದ ಹೆಸರಿನಲ್ಲಿ ಕೋಟಿ ಕೋಟಿ ಹಣ ಸಂಗ್ರಹ ಮಾಡುವ ಸರ್ಕಾರಕ್ಕೆ, ಭಕ್ತರ ಸುರಕ್ಷತೆಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯ. ಪ್ರತಿ ವಾಹನದಿಂದ ನೂರಾರು ರೂಪಾಯಿ ಪ್ರವೇಶ ಶುಲ್ಕ ವಸೂಲಿ ಮಾಡುವ ಸರ್ಕಾರಕ್ಕೆ, ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಲು ಆಗದಿರುವುದು ವಿಪರ್ಯಾಸವೇ ಸರಿ ಎಂದು  ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ? ಭಕ್ತರ ಜೀವಕ್ಕಿಂತ ಹಣದ ಸಂಗ್ರಹವೇ ಮುಖ್ಯವಾಗಿದೆಯೇ? ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದ್ದರೂ — ಭದ್ರತಾ ಕ್ರಮ ಇಲ್ಲ, ನಿಯಂತ್ರಣ ಇಲ್ಲ, ತುರ್ತು ವೈದ್ಯಕೀಯ ಸೌಲಭ್ಯಗಳಿಲ್ಲ. ಜನರ ಸುರಕ್ಷತೆಯ ಬಗ್ಗೆ ಕಾಳಜಿ ಎಂಬುದೇ ಮರೀಚಿಕೆ ಎಂದು ಟೀಕಿಸಿದ್ದಾರೆ.

https://udayakala.news/boy-killed-in-leopard-attack-in-nagamale/

ಭಕ್ತರು ದೇವರ ದರ್ಶನಕ್ಕೆ ತಮ್ಮ ಜೀವವನ್ನು ಪಣಕ್ಕಿಟ್ಟು ಹೋಗುವ ಪರಿಸ್ಥಿತಿ ಮಾಡಿರುವ ಮುಖ್ಯಮಂತ್ರಿ @siddaramaiah ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಇನ್ನಾದರು ಎಚ್ಚೆತ್ತುಕೊಳ್ಳಬೇಕು. ಭಕ್ತರ ಸುರಕ್ಷತೆಗೆ ಶಾಶ್ವತ ಮತ್ತು ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *