Tuesday, September 22, 2026
Menu

ಪ್ರೀತಿ, ಸೆಕ್ಸ್‌, ಆರ್ಥಿಕ ನೆರವು: ಜಾತಿ ಕಾರಣಕ್ಕೆ ಪಿಎಸ್‌ಐ ಜೊತೆ ಮದುವೆ ನಿರಾಕರಿಸುತ್ತಿರುವ ಮಹಿಳಾ ಪೇದೆ

ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಆಕೆಯ ಮದುವೆ ನಿಶ್ಚಯವಾಗಿದೆಎಂದು  ಇಂಟಲಿಜೆನ್ಸ್ PSI ವಿರೇಶ್ ಆಲೂರು ಆರೋಪಿಸಿದ್ದಾರೆ.

ಮಹಿಳಾ ಪೇದೆಯಿಂದ ಮೋಸವಾಗಿದೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ವಿರೇಶ್ ಆಲೂರು ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದು, ಇದೀಗ ಜಾತಿ ಕಾರಣ ನೀಡಿ ನನ್ನನ್ನು ದೂರ ಮಾಡ್ತಿದ್ದಾರೆ ಎಂದು ವಿರೇಶ್ ಆರೋಪಿಸಿದ್ದಾರೆ. ಮೇ 7ರಂದು ರಾಯಚೂರಿನಲ್ಲಿ ಮಹಿಳಾ ಪೇದೆಯ ಮದುವೆ ನಡೆಯಲಿದೆ.

ವೀರೇಶ್ ಸಿಂದಗಿ ತಾಲೂಕಿನ ಗುಬ್ಬೆವಾಡದ  ನಿವಾಸಿ,  ಮಹಿಳಾ ಪೇದೆ ವಿಜಯಪುರ ಜಿಲ್ಲೆಯ ಆಲ್‌ಮೇಲ್ ತಾಲೂಕಿನ ಬಳಗಾನೂರಿನವರು. ಎಂಟು ವರ್ಷದ ಹಿಂದೆ ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್‌ನಲ್ಲಿ ವಿರೇಶ್ ಆಲೂರು ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಆಕೆಯ  ಪರಿಚಯವಾಗಿತ್ತು.ವ

ಪರಿಚಯ ಸ್ನೇಹದಿಂದ  ಪ್ರೀತಿಯಾಗಿ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ನಡೆದಿದೆ. ರಾಯಚೂರಿನ ಬಾಲಮರೆಮ್ಮ ಟೆಂಪಲ್ ನಲ್ಲಿ ಹಾರ ಬದಲಿಸಿಕೊಂಡು  ಒಂದೇ ರೂಮಿನಲ್ಲಿ ಸಂಸಾರ ನಡೆಸಿದ್ದೇವೆ. ಬಳಿಕ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಮೂರು ಬಾರಿ  ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ವಿರೇಶ್ ಆರೋಪಿಸಿದ್ಸುದಾರೆ. ಕೊಪ್ಪಳ, ರಾಯಚೂರಿನಲ್ಲಿಯೂ ಜೊತೆಯಾಗಿ ವಾಸ ವಿದ್ದೆವು ಎಂದು ತಿಳಿಸಿದ್ದಾರೆ.

ಮೊದಲಿಗೆ  ಎಸ್‌ಡಿಎ ಹುದ್ದೆಗೆ ಆಯ್ಕೆಯಾಗಿದ್ದ ಆಕೆಗೆ  ಕೊಪ್ಪಳದಲ್ಲಿ ಡ್ಯೂಟಿ ಇತ್ತು.  ಪ್ರೊಬೇಷನರಿ ಪಿಎಸ್‌ಐ ಆಗಿ ಹೊಸಪೇಟೆಯಲ್ಲಿ  ಕೆಲಸವಿತ್ತು. ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸವಾಗಿದ್ದೆವು.  ಎಸ್‌ಡಿಎ ಹುದ್ದೆ ಬಿಟ್ಟು ಪೇದೆ‌ ಹುದ್ದೆಗೆಆಯ್ಕೆಯಾಗಿ  ರಾಯಚೂರು ಗ್ರಾಮೀಣ ಠಾಣೆಯಲ್ಲಿ ಆಕೆ ಡ್ಯೂಟಿಯಲ್ಲಿದ್ದಾರೆ. ರಾಯಚೂರಿನಲ್ಲೂ 3 ವರ್ಷ‌ ಒಂದೇ ರೂಮಿನಲ್ಲಿ ಇದ್ದೆವು.  ನನಗೆ ಬೆಂಗಳೂರಿಗೆ ವರ್ಗಾವಣೆಯಾದರೂ ರಾಯಚೂರಿಗೆ ಬಂದು ಹೋಗುತ್ತಿದ್ದೆ ಎಂದು  ವೀರೇಶ್‌ ಹೇಳಿದ್ದಾರೆ.

ಮಹಿಳಾ ಪೇದೆಯ  ಕುಟುಂಬಕ್ಕೆ  ನಾನು 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಈ ಹಣದಿಂದಲೇ ಮನೆ ಕಟ್ಟಿಸಿಕೊಂಡಿದ್ದಾರೆ. ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೇನೆ. ಮದುವೆ ವಿಷಯ ಬಂದಾಗ ಜಾತಿ ಕಾರಣ ಮುಂದಿಟ್ಟು ನಿರಾಕರಿಸುತ್ತಿದ್ದಾರೆ.  ನನಗೆ ಸುಮಾ ಬೇಕು ಎಂದು ವಿರೇಶ್ ಹೇಳುತ್ತಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಸುಮಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Related Posts

Leave a Reply

Your email address will not be published. Required fields are marked *