Wednesday, August 05, 2026
Menu

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಸಮರ್ಥ್‌ ಶಾಮನೂರುಗೆ ಜಯ

ದಾವಣಗೆರೆ ದಕ್ಷಿಣ  ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ  ಸಮರ್ಥ ಶಾಮನೂರು ಜಯ ಗಳಿಸಿದ್ದಾರೆ.  ಸಮರ್ಥ ಶಾಮನೂರು ಪ್ರತಿಸ್ಪರ್ಧಿಗಳ ವಿರುದ್ಧ ಮುನ್ನಡೆ ಸಾಧಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಂಡಿದ್ದಾರೆ.

ಸಮರ್ಥ್ ಗೆಲುವು ಕಾಂಗ್ರೆಸ್ ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಬಣಕ್ಕೆ ಮುನ್ನಡೆ, ಸಚಿವ ಜಮೀರ್‌ ಅಹ್ಮದ್ ಬಣಕ್ಕೆ ಇದು ಹಿನ್ನಡೆ ಎಂದೇ ಹೇಳಲಾಗುತ್ತಿದೆ.  ಕಾಂಗ್ರೆಸ್ ಹೈಕಮಾಂಡ್ ಸಮರ್ಥ್‌ಗೆ ಟಿಕೆಟ್ ಘೋಷಣೆ ಮಾಡಿದಾಗ ಅದನ್ನು ವಿರೋಧಿಸಿ ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆಯಲ್ಲಿ ಕಣಕ್ಕಿಳಿದಿದ್ದರು.

ಎಸ್‌ಡಿಪಿಐನಿಂದ ಅಪ್ಸರ್ ಕೊಡ್ಲಿಪೇಟೆ, ಸಾದಿಲ್ ಪೈಲ್ವಾನ್ ಸ್ಪರ್ಧೆಗೆ ಮುಂದಾಗಿದ್ದರು. ಕೊನೆಯ ಕ್ಷಣದಲ್ಲಿ ಸಂಧಾನಕ್ಕೆ ಮಣಿದು ಕಣದಿಂದ ಪೈಲ್ವಾನ್ ಹಿಂದೆ ಸರಿದಿದ್ದರು.  ಎಸ್‌ಡಿಪಿಐ ಉತ್ತಮ ಮತಗಳನ್ನು ಗಳಿಸಿದ್ದು, ಐದು ಸಾವಿರ ಮತಗಳ ಅಂತರದಲ್ಲಿ ಸಮರ್ಥ್‌  ಗೆಲುವು ಕಂಡಿದ್ದಾರೆ ಎಂಬುದು  ಗಮನಾರ್ಹ. ಕಾಂಗ್ರೆಸ್‌ನೊಳಗಿನ ಭಿನ್ನಮತ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ.

Related Posts

Leave a Reply

Your email address will not be published. Required fields are marked *